ಬಸಳೆ ಸೊಪ್ಪಿನಲ್ಲಿ ಹೇರಳವಾದ ವಿಟಮಿನ್. ಅದೇ ರೀತಿ ಕ್ಯಾಲ್ಸಿಯಂ, ಮೆಗ್ನೀಷಿಯಂ ಮುಂತಾದ ಎಲ್ಲಾ ಸರ್ವಗುಣ ಸಂಪನ್ನವಾಗಿರುವಂತಹ ಸೊಪ್ಪು ಅಂದರೆ ಅದುವೇ ಬಸಳೆ ಸೊಪ್ಪು. ಮಾತ್ರವಲ್ಲದೇ ಇದು ತಿನ್ನಲು ಬಹಳ ರುಚಿಯಾಗಿರುತ್ತದೆ ಹಾಗೂ ದೇಹದ ಆರೋಗ್ಯಕ್ಕೂ ಕೂಡ ಒಳ್ಳೆಯದು.
Advertisement
ಬೇಕಾಗುವ ಸಾಮಗ್ರಿಗಳುಬಸಳೆ ಸೊಪ್ಪು(ಎಲೆ)- 20ರಿಂದ 30, ಬೆಳ್ತಿಗೆ ಅಕ್ಕಿ-3ಕಪ್, ಒಣಮೆಣಸು-15, ಕೊತ್ತಂಬರಿ-2ಚಮಚ, ಜೀರಿಗೆ-ಅರ್ಧ ಚಮಚ, ಹುಣಸೇ ಹುಳಿ-ಸ್ವಲ್ಪ, ಬೆಲ್ಲ-ಸ್ವಲ್ಪ, ತೆಂಗಿನ ತುರಿ- 1ಕಪ್, ರುಚಿಗೆ ತಕ್ಕಷ್ಟು ಉಪ್ಪು.
ಬೆಳ್ತಿಗೆ ಅಕ್ಕಿಯನ್ನು ಒಂದು ಪಾತ್ರೆಯಲ್ಲಿ ಕನಿಷ್ಠ ಒಂದು ಅಥವಾ ಎರಡು ಗಂಟೆಗಳ ಕಾಲ ನೀರಿನಲ್ಲಿ ನೆನೆಹಾಕಿರಿ.ನಂತರ ನೆನೆ ಹಾಕಿದ ಅಕ್ಕಿ ಮತ್ತು ತೆಂಗಿನ ತುರಿ, ಒಣಮೆಣಸು , ಕೊತ್ತಂಬರಿ, ಜೀರಿಗೆ, ಹುಣಸೇ ಹುಳಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ, ಜಾಸ್ತಿ ನೀರು ಸೇರಿಸದೆ ಗಟ್ಟಿ ಮಸಾಲೆ ರುಬ್ಬಿರಿ. ಮಸಾಲೆ ಜಾಸ್ತಿ ತೆಳುವಾಗಬಾರದು. ನಂತರ ಬಸಳೆ ಸೊಪ್ಪನ್ನು ಸಣ್ಣಗೆ ಹೆಚ್ಚಿ ಹಿಟ್ಟಿಗೆ ಅಂದರೆ ಮಸಾಲೆಗೆ ಸೇರಿಸಿ ಸರಿಯಾಗಿ ಮಿಶ್ರಣ ಮಾಡಿ ತದನಂತರ ಬಾಡಿಸಿದ ಬಾಳೆ ಎಲೆಯಲ್ಲಿ ರುಬ್ಬಿಟ್ಟ ಮಸಾಲೆಯನ್ನು ಹಾಕಿ ಮಡಚಿ ಇಡ್ಲಿ ಪಾತ್ರೆಯಲ್ಲಿ ಮೂಕ್ಕಾಲು ಗಂಟೆಗಳ ಕಾಲ ಬೇಯಿಸಿ.ಈಗ ಆರೋಗ್ಯಕರವಾದ ಬಸಳೆ ಪತ್ರೊಡೆ ಸವಿಯಲು ಸಿದ್ಧ. ಶ್ರೀರಾಮ್ ನಾಯಕ್