Advertisement

ವಿವಿಧ ಜಂಕ್ಷನ್‌ಗಳಲ್ಲಿ ಬ್ಯಾರಿಕೇಡ್‌

10:07 AM Jun 01, 2022 | Team Udayavani |

ಹಳೆಯಂಗಡಿ: ಕಳೆದ ಒಂದು ವಾರದ ಹಿಂದೆಯಷ್ಟೇ ಮೂಲ್ಕಿ ಬಪ್ಪನಾಡುವಿನಿಂದ ಮುಕ್ಕದವರೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಳವಡಿಸಲಾಗಿದ್ದ ಎಲ್ಲ ಬ್ಯಾರಿಕೇಡ್‌ ಗಳನ್ನು ಏಕಾಏಕಿ ತೆರವು ಮಾಡಿರುವುದರ ಬಗ್ಗೆ ಸಾರ್ವಜನಿಕರ ತೀವ್ರ ಆಕ್ಷೇಪದ ಹಿನ್ನೆಲೆಯಲ್ಲಿ ಈಗ ಮರಳಿ ಅಳವಡಿಸಿ ವಾಹನಗಳ ಸಂಚಾರಕ್ಕೆ ವೇಗಮಿತಿಯ ನಿಯಂತ್ರಣವನ್ನು ಹಿಂದಿನಂತೆಯೇ ಮಾಡಲಾಗಿದೆ.

Advertisement

ಮೇ 27ರಂದು ಬ್ಯಾರಿಕೇಡ್‌ ಏಕಾಏಕಿ ತೆರವು ಅಪಘಾತ ಸಂಭವ ಭೀತಿ ಎಂಬ ಶೀರ್ಷಿಕೆಯಲ್ಲಿ ಉದಯವಾಣಿಯ ಸುದಿನವು ಸಚಿತ್ರ ವರದಿ ಪ್ರಕಟಿಸಿತ್ತು. ಸ್ಥಳೀಯರು ಹಳೆಯಂಗಡಿ ಗ್ರಾಮ ಪಂಚಾಯತ್‌ನ ಸಹಿತ ರಿಕ್ಷಾ, ಕಾರು, ಟೆಂಪೋ ಚಾಲಕರು, ದ್ವಿಚಕ್ರ ವಾಹನ ಸವಾರರು, ಸ್ಥಳೀಯ ಸಂಘ ಸಂಸ್ಥೆಗಳು ಸಂಚಾರಿ ಪೊಲೀಸ್‌ ಠಾಣೆ ಹಾಗೂ ಮೂಲ್ಕಿ ಪೊಲೀಸ್‌ ಠಾಣೆಯಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.

ಪಾದಚಾರಿಗಳಿಗೆ ಹಾಗೂ ಮುಖ್ಯ ಜಂಕ್ಷನ್‌ಗಳಲ್ಲಿ ಅಪಘಾತದ ಆತಂಕ ಉಂಟಾಗಿರುವುದನ್ನು ವಿಶೇಷವಾಗಿ ಉಲ್ಲೇಖಿಸಲಾಗಿತ್ತು.

ಇದೀಗ ತೆರವುಗೊಳಿಸಿದ್ದ ಬಪ್ಪನಾಡು ದೇವಾಸ್ಥಾನದ ದ್ವಾರದ ಬಳಿ, ಮೂಲ್ಕಿ ಬಸ್‌ ನಿಲ್ದಾಣದ ಹತ್ತಿರ, ಹಳೆಯಂಗಡಿ ಮುಖ್ಯ ಜಂಕ್ಷನ್‌, ಪಾವಂಜೆ ದೇವಸ್ಥಾನದ ಪ್ರದೇಶ, ಮುಕ್ಕದ ಮುಖ್ಯ ಜಂಕ್ಷನ್‌ನಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಬ್ಯಾರಿ ಕೇಡ್‌ಗಳನ್ನು ಅಳವಡಿಸಿದ್ದರಿಂದ ಈ ಪ್ರದೇಶದಲ್ಲಿ ಅಪಘಾತಗಳು ಸಹ ಸಾಕಷ್ಟು ನಿಯಂತ್ರಣದಲ್ಲಿತ್ತು ಎಂದು ಹೇಳಿರುವುದರಿಂದ ಮತ್ತೆ ಈ ಪ್ರದೇಶದಲ್ಲಿ ಬ್ಯಾರಿಕೇಡ್‌ಗಳನ್ನು ಯಥಾಸ್ಥಿತಿಯಲ್ಲಿರಿಸಲಾಗಿದೆ.

ಸಿಗ್ನಲ್ ಲೈಟ್ ಅಳವಡಿಸಿ

Advertisement

ಪ್ರಮುಖ ಜಂಕ್ಷನ್‌ನಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದ್ದು ಬ್ಯಾರಿಕೇಡ್‌ ಗಳನ್ನು ಅಳವಡಿಸಲು ಸಾಧ್ಯವಾಗದಿದ್ದರೇ ಸಿಗ್ನಲ್‌ ಲೈಟ್‌ಗಳನ್ನು ಅಳವಡಿಸಿದಲ್ಲಿ ಸಂಚಾರ ನಿಯಂತ್ರಣಕ್ಕೆ ಕಡಿವಾಣ ಹಾಕಲು ಸಾಧ್ಯವಿದೆ, ಈಗಾಗಲೇ ಹೊಸದಾಗಿ ಅಳವಡಿಸಿರುವ ಕುಳಾಯಿ-ಹೊನ್ನಕಟ್ಟೆಯಲ್ಲಿ ಸಂಚಾರ ಸುಲಲಿತವಾಗಿರುವುದನ್ನು ಕಾಣಬಹುದು ಎಂದು ಗೃಹರಕ್ಷಕದಳ ನಿವೃತ್ತ ಘಟಕಾಧಿಕಾರಿ ಮನ್ಸೂರ್‌ ಎಚ್‌. ಸಲಹೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next