Advertisement

ಬಾರಕೂರು ಆಳುಪೋತ್ಸವಕ್ಕೆ ವೈಭವದ ಚಾಲನೆ 

12:30 AM Jan 26, 2019 | |

ಬ್ರಹ್ಮಾವರ: ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ, ತೋಟಗಾರಿಕಾ ಇಲಾಖೆಯ ಸಹಯೋಗದಲ್ಲಿ ಬಾರಕೂರು ಕೋಟೆಯಲ್ಲಿ ಜ. 25ರಿಂದ 27ರ ವರೆಗೆ ಜರಗಲಿರುವ ಆಳುಪೋತ್ಸವಕ್ಕೆ ಶುಕ್ರವಾರ ಸಂಜೆ ಅದ್ದೂರಿ ಚಾಲನೆ ದೊರೆಯಿತು. 

Advertisement

ಜಿಲ್ಲಾ ಉಸ್ತುವಾರಿ ಸಚಿವೆ ಡಾ| ಜಯಮಾಲಾ ಉದ್ಘಾಟಿಸಿದರು.

ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶೋಭಾಯಾತ್ರೆ ಪ್ರಾರಂಭಗೊಂಡಿತು.  ಧ್ವಜ ಪೂಜೆಯೊಂದಿಗೆ ವಿವಿಧ ಜಾನಪದ ಕಲಾತಂಡ, ಚೆಂಡೆ, ಛತ್ರಿ, ನಂದಿಧ್ವಜ, ಪೂಜಾ ಕುಣಿತ, ತಟ್ಟಿರಾಯ ವೇಷಭೂಷಣಗಳು ಹಾಗೂ ಕೊಂಬು ಕಹಳೆ ವಾದ್ಯದೊಂದಿಗೆ ಆಕರ್ಷಕ ಶೋಭಾಯಾತ್ರೆ ನಡೆಯಿತು. ಸಿಂಹಾಸನ ಗುಡ್ಡೆಯಲ್ಲಿ ಹೆರಿಟೇಜ್‌ ವಾಕ್‌ ಉದ್ಘಾಟನೆ ಹಾಗೂ ಆ್ಯಪ್‌ ಬಿಡುಗಡೆಗೊಳಿಸಲಾಯಿತು.

ಫಲಪುಷ್ಪ ಪ್ರದರ್ಶನ
ತೋಟಗಾರಿಕಾ ಇಲಾಖೆ ಸಹಯೋಗದಲ್ಲಿ ಆಯೋಜಿಸ ಲಾದ ಫಲಪುಷ್ಪ ಪ್ರದರ್ಶನ ಉದ್ಘಾಟನೆಗೊಂಡಿತು. ವಿವಿಧ ಜಾತಿ ಹಾಗೂ ಬಣ್ಣದ ಹೂವುಗಳ ಚಿತ್ತಾರ, ತರಕಾರಿಗಳಿಂದಲೇ 

ಮೂಡಿದ ಸುಂದರ ಕಲಾಕೃತಿಗಳ ಕಣ್ಮನ ಸೆಳೆಯಿತು.ಮಹಾರಾಷ್ಟ್ರದ ಪುಣೆ ಮತ್ತು ಬೆಂಗಳೂರಿನಿಂದ ತರಿಸಿದ ಗುಲಾಬಿ, ಓಯಸಿಸ್‌ ಬ್ರಿಕ್‌, ಕಾರ್ನಿಶಿಯನ್‌, ಮರಿಗೋಲ್ಡ್‌ ಕ್ರೈಸೇನಿಥಂ, ಆಸ್ಪರಗೋಲ್ಡ್‌, ಆರ್ಕಿಡ್‌, ಬರ್ಜೆರ, ಅಲ್ಸೊàಮೇರಿಯ ಲಿಲ್ಲಿ ಹೂಗಳನ್ನು ಬಳಸಲಾಗಿದೆ.ಆಕರ್ಷಕ ಲಾಂಛನ ಬಾರಕೂರು ಆಳುಪ ಸಂಸ್ಥಾನದ ಲಾಂಛನ ವಿಶೇಷ ಆಕರ್ಷಣೆಯಾಗಿತ್ತು. ಎರಡೂ ಕಡೆಗಳಲ್ಲಿ ಮೀನು, ಮೇಲ್ಭಾಗದಲ್ಲಿ ಸಿಂಹಾಸನ ಛತ್ರ ಹೂಗಳಿಂದ ಅಲಂಕರಿಸಲಾಯಿತು.

Advertisement

ಸಿರಿಧಾನ್ಯ ಆಕೃತಿ
ಹೂವಿನ ಚಿತ್ತಾರಗಳಲ್ಲದೆ ಸಿರಿಧಾನ್ಯದ ಆಕೃತಿಗಳು ವಿಶೇಷವಾಗಿ ಗಮನ ಸೆಳೆಯುತ್ತಿವೆ. ಗೋವನ್ನು ಕಾಯುವ ಶ್ರೀ ಕೃಷ್ಣ ಆಕೃತಿ, ಚಿಟ್ಟೆ ಆಕೃತಿ ರಚಿಸಲಾಗಿದೆ.

ಸಾಂಸ್ಕೃತಿಕ ವೈಭವ
ಮಂಜುಳಾ ಪರಮೇಶ್‌ ಅವರಿಂದ ನೃತ್ಯ-ವೈವಿಧ್ಯ, ಚಿಂತನ್‌ ವಿಕಾಸ್‌ ಮತ್ತು ರಾಮ್‌ ಅಗ್ನಿ ತಂಡದವರಿಂದ ವರ್ಲ್ಡ್
ಮ್ಯೂಸಿಕ್‌, ಕೋಟೆಯ ಉಪ ವೇದಿಕೆಯಲ್ಲಿ ಗಣೇಶ್‌ ಯಕ್ಷಗಾನ ಗೊಂಬೆಯಾಟ ಮಂಡಳಿಯಿಂದ ಚೂಡಾಮಣಿ ಲಂಕಾದಹನ, ಅಂಬಲಪಾಡಿ ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾ ಮಂಡಳಿಯಿಂದ ಸುಧನ್ವ ಮೋಕ್ಷ ಯಕ್ಷಗಾನ ನಡೆಯಿತು.

ಇಂದಿನ ಕಾರ್ಯಕ್ರಮಗಳು
ಜ. 26ರ ಸಂಜೆ 5.30ರಿಂದ ಕತ್ತಲೆ ಬಸದಿಯಲ್ಲಿ ದೀಪಾಲಂಕಾರ ಹಾಗೂ ತುಳುನಾಡಿನ ಸೊಗಡು ಕಾರ್ಯಕ್ರಮ ಜರಗಲಿದೆ. ಸಂಜೆ 5.30ರಿಂದ ಮುಖ್ಯ ವೇದಿಕೆಯಲ್ಲಿ ಉಡುಪಿಯ ದನಿ ವೇವ್ಸ್‌ ಅವರಿಂದ ಮಧುರ ಸಂಜೆ, ರಾತ್ರಿ 7ರಿಂದ ನಾಡಿನ ವಿವಿಧ ಜಾನಪದ ಕಲಾ ತಂಡಗಳ ಪ್ರದರ್ಶನ ಜಾನಪದ ಜಾತ್ರೆ, ರಾತ್ರಿ 10ರಿಂದ ಉಪ ವೇದಿಕೆಯಲ್ಲಿ ಪೆರ್ಡೂರು ಮತ್ತು ಹಾಲಾಡಿ ಮೇಳಗಳಿಂದ ಯಕ್ಷಗಾನ ಬಯಲಾಟ ನಡೆಯಲಿದೆ.

ಆಳುಪೋತ್ಸವ ಹೈಲೈಟ್‌ 
– ಬಾರಕೂರಿನ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ ಮತ್ತು ಪೂಜೆ
– ರಥಬೀದಿಯಲ್ಲಿರುವ ಭಂಡಾರ್ಕರ್ ಕಂಪೌಂಡ್‌ನ‌ಲ್ಲಿ ತುಳುನಾಡಿನ ಹವ್ಯಾಸಿ ಸಂಗ್ರಹ ವಸ್ತುಗಳ ಪ್ರದರ್ಶನ
– ಬಾರಕೂರು ಮಹಾ ಸಂಸ್ಥಾನದಲ್ಲಿ ಆಳುಪ ನಾಡಿನ ತೌಳವ ಸಂಸ್ಕೃತಿಯ ಕೃಷಿ ಮತ್ತು ಸಾಮಾಜಿಕ ಬಳಕೆಯ ವಸ್ತುಗಳ ಪ್ರದರ್ಶನ
– ಬಾರಕೂರು ನಗರಾಲಂಕಾರ ಹಾಗೂ ಮನೆಗಳ ಸಾಂಪ್ರದಾಯಿಕ ಅಲಂಕಾರ
– ರಾಘವೇಂದ್ರ ಕೆ. ಅಮೀನ್‌ ಅವರಿಂದ ಬಾಕೂìರು ಸಂಸ್ಥಾನದ ಒಳಾಂಗಣದಲ್ಲಿ ಚಿತ್ರಕಲಾ ಪ್ರದರ್ಶನ
–  ಭೂತಾಳಪಾಂಡ್ಯ ವೇದಿಕೆ ಹಾಗೂ ನಂದರಾಯನ ಕೋಟೆ ಮಹಾದ್ವಾರ 
– ರಾಜ-ರಾಣಿ ಕಲ್ಯಾಣಿ, ಕುದುರೆ ಲಾಯ, ಮಾಸ್ತಿಕಲ್ಲು ಹಾಗೂ ವೀರಗಲ್ಲುಗಳ ದೀಪಾಲಂಕಾರ
– ಕತ್ತಲೆ ಬಸದಿಯಲ್ಲಿ ವಿಶೇಷ ದೀಪಾಲಂಕಾರ
–  ಕೃಷಿ ಇಲಾಖೆಯಿಂದ ಸಾವಯವ ಹಾಗೂ ಸಿರಿಧಾನ್ಯ ಮೇಳ

Advertisement

Udayavani is now on Telegram. Click here to join our channel and stay updated with the latest news.

Next