Advertisement

West Bengal ಬಿಜೆಪಿಯ ಮುಸ್ಲಿಂ ಕಾರ್ಯಕರ್ತನ ಬರ್ಬರ ಹತ್ಯೆ

01:09 AM Jun 03, 2024 | Team Udayavani |

ನಾಡಿಯಾ: ಪಶ್ಚಿಮ ಬಂಗಾಲದ ನಾಡಿಯಾದಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬರ ಹಣೆಗೆ ಗುಂಡಿಕ್ಕಿ ಕೊಲ್ಲಲಾಗಿದೆ. ಕೊನೇ ಹಂತದ ಮತದಾನ ಮಗಿದ ಬಳಿಕ ಘಟನೆ ನಡೆದಿದ್ದು,  ಹಫಿಜುಲ್‌ ಶೇಖ್‌ ಮೃತ ಕಾರ್ಯಕರ್ತನಾಗಿದ್ದಾನೆ.

Advertisement

ಇತ್ತೀಚೆಗೆ ಬಿಜೆಪಿಗೆ ಸೇರಿದ್ದ. ಈ ಕಾರಣದಿಂದಲೇ ಅವನ ಹತ್ಯೆಯಾಗಿದೆ ಎಂದು ಹಫಿಜುಲ್‌ ಶೇಖ್‌ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಈ ಕೊಲೆಗೆ ಟಿಎಂಸಿ ಮತ್ತು ಸಿಪಿಎಂ ಕಾರಣ ಎಂದು ಬಿಜೆಪಿ ಆರೋಪಿಸಿದೆ.

ಪೊಲೀಸರ ಪ್ರಕಾರ, ಹಫೀಜುರ್ ಶೇಖ್ ಶನಿವಾರ ಸಂಜೆ ರಾಷ್ಟ್ರೀಯ ಹೆದ್ದಾರಿ ಬಳಿಯ ತನ್ನ ಮನೆಯ ಬಳಿ ನೆರೆಹೊರೆಯವರೊಂದಿಗೆ ಕೇರಂ ಆಡುತ್ತಿದ್ದಾಗ 10-12 ಜನರ ಗುಂಪು ಬೈಕ್‌ಗಳಲ್ಲಿ ಬಂದು ಮನಬಂದಂತೆ ಗುಂಡು ಹಾರಿಸಿದ್ದಾರೆ. ಗಾಯಗೊಂಡಿದ್ದ ಶೇಖ್‌ನನ್ನು ದುಷ್ಕರ್ಮಿಗಳ ಗುಂಪು ಹಿಂಬಾಲಿಸಿ ಹತ್ಯೆಗೈದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೆಲವು ದಾಳಿಕೋರರು ಪೊಲೀಸ್ ಸಿಬಂದಿಯ ಸೋಗಿನಲ್ಲಿ ಖಾಕಿ ಸಮವಸ್ತ್ರದಲ್ಲಿದ್ದರು ಎಂದು ಗ್ರಾಮಸ್ಥರು ಹೇಳಿದ್ದಾರೆ.

”ಈ ಘಟನೆಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ಪ್ರಾಥಮಿಕ ತನಿಖೆಯ ನಂತರ, ವೈಯಕ್ತಿಕ ದ್ವೇಷದ ಕಾರಣದಿಂದ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕೃತ್ಯ ಎಸಗಿದವರನ್ನು ಹಿಡಿಯಲು ಪ್ರಯತ್ನಿಸಲಾಗುತ್ತಿದೆ” ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next