Advertisement
ದಿಲ್ಲಿಯಲ್ಲಿ ಆಯೋಜಿಸಲಾಗಿರುವ ಹಿಂದೂಸ್ತಾನ್ ಟೈಮ್ಸ್ ಲೀಡರ್‌ಶಿಪ್ ಸಮ್ಮೇಳನದಲ್ಲಿ ಏರ್ಪಡಿಸಲಾಗಿದ್ದ ಸಂವಾದದಲ್ಲಿ ಮಾತನಾಡಿದ ಅವರು, ತಾವು ಮೋದಿಯವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದಾಗಿ ತಿಳಿಸಿದರಲ್ಲದೆ, ವೈಯಕ್ತಿಕವಾಗಿ ತಾವು ಮೋದಿಯವರನ್ನು ಇಷ್ಟಪಡುವುದಾಗಿ ತಿಳಿಸಿದರು.
ಕಿವಿಮಾತು: ಹಿಂದೊಮ್ಮೆ ಮೋದಿ ಅವರೊಂದಿಗೆ ಖಾಸಗಿಯಾಗಿ ಮಾತನಾಡುವ ವೇಳೆ, ಭಾರತೀಯ ಸಮಾಜ ವನ್ನು ಪಂಥಗಳ ಆಧಾರದ ಮೇಲೆ ಒಡೆಯ ಬಾರದು ಎಂದು ಕಿವಿಮಾತು ಹೇಳಿದ್ದಾಗಿ ಒಬಾಮ ಹೇಳಿದರು. ಆದರೆ, ಇದಕ್ಕೆ ಮೋದಿಯವರ ಪ್ರತಿಕ್ರಿಯೆ ಹೇಗಿತ್ತು ಎಂಬ ಪ್ರಶ್ನೆಗೆ ಅವರು ಉತ್ತರಿಸಲಿಲ್ಲ. ಆದರೆ, ಭಾರತದಲ್ಲಿರುವ ಮುಸ್ಲಿಮರು ತಮ್ಮನ್ನು ಭಾರತೀಯರೆಂದು ಪರಿಚಯಿಸಿಕೊಳ್ಳುವ ಉದಾತ್ತ ಭಾವ ಹೊಂದಿದ್ದಾರೆ. ಕೆಲವು ದೇಶಗಳಲ್ಲಿ ಇಂಥ ಪರಿಸ್ಥಿತಿ ಇಲ್ಲ. ಹಾಗಾಗಿ, ಇಲ್ಲಿನ ಮುಸ್ಲಿಮರನ್ನು ಸಲಹಿ, ಬೆಳೆಸಬೇಕು ಎಂದು ಹೇಳಿದ್ದಾಗಿ ಅವರು ತಿಳಿಸಿದರು.
ತುರ್ತಿನ ವೇಳೆ ನೆರವು: ತಾವು ಅಮೆರಿಕದ ಅಧ್ಯಕ್ಷರಾಗಿ ದ್ದಾಗ ಭಾರತಕ್ಕೆ ನೀಡಿದ ನೆರವಿನ ಬಗ್ಗೆ ನೆನಪಿಸಿಕೊಂಡ ಅವರು, 2008ರಲ್ಲಿ ಮುಂಬೈ ದಾಳಿಯಾಗಿದ್ದಾಗ ತಮ್ಮ ಸರ್ಕಾರವು ಅಮೆರಿಕದ ಗುಪ್ತಚರ ಅಧಿಕಾರಿಗಳ ನೆರವನ್ನು ನೀಡಿದ್ದಾಗಿ ತಿಳಿಸಿದರು. ಸಾಕ್ಷಿಯಿಲ್ಲ!: ಮತ್ತೂಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಉಗ್ರ ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ನೆಲೆಸಿದ್ದು ಪಾಕಿಸ್ತಾನ ಸರ್ಕಾರಕ್ಕೆ ಗೊತ್ತಿತ್ತು ಎಂಬುದರ ಬಗ್ಗೆ ಅಮೆರಿಕ ಸರ್ಕಾರದ ಬಳಿ ಯಾವುದೇ ಸಾಕ್ಷ್ಯಗಳಿಲ್ಲ ಎಂದು ತಿಳಿಸಿದರು.
Related Articles
21ನೇ ಶತಮಾನದಲ್ಲಿ ಭಾರತ ಮತ್ತು ಅಮೆರಿಕದ ಬಾಂಧವ್ಯ ನಿರ್ಣಾಯಕವಾಗಿರಲಿದೆ ಎಂದು ಬರಾಕ್ ಒಬಾಮ ಅಭಿಪ್ರಾಯಪಟ್ಟಿದ್ದಾರೆ. ಯುವಜನ ರೊಂದಿಗಿನ ಸಂವಾದದಲ್ಲಿ ಮಾತ ನಾಡಿದ ಅವರು, ಭಾರತ-ಅಮೆರಿಕದ ಬಾಂಧವ್ಯ ನಿರ್ಣಾಯಕವಾಗಲು ಎರಡೂ ದೇಶಗಳ ಯುವ ಸಮೂಹದ ಕೊಡುಗೆಯೂ ಬೇಕೆಂದು ಕರೆ ನೀಡಿದರು.
Advertisement
ಇದೇ ವೇಳೆ, ಲಿಂಗ ಪರಿವರ್ತಿತ ಮಹಿಳೆಯೊಬ್ಬರು, ಭಾರತದಲ್ಲಿ ಲಿಂಗ ಪರಿವರ್ತಿತ ರನ್ನು ತುತ್ಛವಾಗಿ ನೋಡುವ ಪರಿಸ್ಥಿತಿ ಹೋಗ ಲಾಗುವ ಮಾರ್ಗ ಸೂಚಿಸುವಂತೆ ಮನವಿ ಮಾಡಿ ದರು. ಇದಕ್ಕೆ ಉತ್ತರಿಸಿದ ಒಬಾಮ, ಸ್ಥಳೀಯ ಕಾನೂನುಗಳ ಕುರಿತು ಮಾತನಾಡಲಾರೆ. ಆದರೆ, ನಿಮ್ಮ ನೋವು ಎಲ್ಲರಿಗೂ ಕೇಳುವಂತೆ ಮಾಡಿ. ಆಗ, ಮುಂದೊಂದು ದಿನ ನಿಮ್ಮ ನೋವಿಗೆ ಕಾನೂನಿನ ಸಾಂತ್ವನ ಸಿಗಬಹುದು ಎಂದರು.
ನಂಗೆ ದಾಲ್ ಮಾಡೋದು ಗೊತ್ತುನಿಮಗೊಂದು ವಿಷ್ಯ ಗೊತ್ತಾ? ನನಗೆ ರುಚಿ ರುಚಿಯಾಗಿ ದಾಲ್ ಮಾಡಲು ಬರುತ್ತೆ. ಹೀಗೆಂದು ಹೇಳಿದ್ದು ಅಮೆರಿಕ ಮಾಜಿ ಅಧ್ಯಕ್ಷ ಒಬಾಮ. ನನ್ನ ಭಾರತೀಯ ಮತ್ತು ಪಾಕಿಸ್ತಾನಿ ರೂಮ್‌ಮೇಟ್‌ಗಳಿಂದಾಗಿ ನಾನು ದಾಲ್ ಮಾಡಲು ಕಲಿತೆ. ಅವರ ಅಮ್ಮಂದಿರೇ ನನಗೆ ಇದನ್ನು ಕಲಿಸಿಕೊಟ್ಟರು ಎಂದಿದ್ದಾರೆ ಒಬಾಮ. ಅಷ್ಟೇ ಅಲ್ಲ, ಖೀಮಾ ಮಾಡುವುದರಲ್ಲೂ ನನ್ನದು ಎತ್ತಿದ ಕೈ. ಆದ್ರೆ, ಚಪಾತಿ ಮಾಡುವುದು ಕಷ್ಟ ಕಷ್ಟ ಎಂದಿದ್ದಾರೆ.