Advertisement

ಕುಡಿದವರನ್ನು ಮನೆಗೆ ತಲುಪಿಸುವುದು ಬಾರ್ ಮಾಲೀಕರ ಜವಾಬ್ದಾರಿ : ಗೋವಾ ಸಚಿವ

04:47 PM Oct 10, 2022 | Team Udayavani |

ಪಣಜಿ:  ಕುಡಿಯುವವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವುದು ಸಂಬಂಧಪಟ್ಟ ಬಾರ್ ಮಾಲೀಕರ ಜವಾಬ್ದಾರಿಯಾಗಿದೆ ಎಂದು ಸಚಿವ ಮೌವಿನ್ ಗೋಡಿನ್ಹೊ ಹೇಳಿಕೆ ನೀಡಿದ್ದಾರೆ.

Advertisement

ಕಾನೂನಾತ್ಮಕ ನಿಬಂಧನೆಗಳನ್ನು ಪರಿಶೀಲಿಸಲು ಮತ್ತು ಪರಿಣಾಮಕಾರಿ ಅನುಷ್ಠಾನಕ್ಕಾಗಿ ಮುಖ್ಯಮಂತ್ರಿಯೊಂದಿಗೆ ಚರ್ಚಿಸುವುದಾಗಿ ಗುಡಿನ್ಹೋ ಹೇಳಿದ್ದಾರೆ. ಗೂಡಿನ್ಹೋ ಅವರು ಇತ್ತೀಚೆಗೆ ನೀಡಿರುವ ಈ  ಹೇಳಿಕೆ ಗೋವಾ ರಾಜ್ಯಾದ್ಯಂತ  ಭಾರಿ ಚರ್ಚೆ ಪ್ರಾರಂಭವಾಗಿದೆ.

ಪ್ರವಾಸೋದ್ಯಮಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಗೋವಾಕ್ಕೆ ಆಗಮಿಸುತ್ತಾರೆ.  ಗೋವಾದಲ್ಲಿ ಆಲ್ಕೋಹಾಲ್ ಅಗ್ಗವಾಗಿದೆ ಎಂಬ ಕಾರಣಕ್ಕೆ ಹೆಚ್ಚಿನ ಪ್ರವಾಸಿಗರು ಕುಡಿದು ವಾಹನ ಚಲಾಯಿಸುತ್ತಾರೆ. ಪ್ರಸ್ತುತ, ಗೋವಾದಲ್ಲಿ ಅಪಘಾತಗಳ ಸಂಖ್ಯೆ ಅಪಾರವಾಗಿ ಹೆಚ್ಚಾಗಿದೆ. ಈ ಅಪಘಾತಗಳ ಹಿಂದಿನ ಪ್ರಮುಖ ಕಾರಣ ಕುಡಿದು ವಾಹನ ಚಲಾಯಿಸುವುದು ಎಂಬ ಅಂಶವೂ ಬೆಳಕಿಗೆ ಬಂದಿದೆ. ಹಾಗಾಗಿ ಸಚಿವ ಮೌವಿನ್ ಗುಡಿನ್ಹೊ ಈಗ ಇದೆಲ್ಲದರ ಹೊರೆಯನ್ನು ಬಾರ್ ಮಾಲೀಕರ ಮೇಲೆ ಹಾಕಲು ನಿರ್ಧರಿಸಿದ್ದಾರೆ ಎಂದೇ ಹೇಳಲಾಗುತ್ತಿದೆ.  ಆದರೆ, ಗೂಡಿನೊ ಅವರ ಈ ನಿಲುವನ್ನು ಬಾರ್ ಮಾಲೀಕರು ಇದನ್ನು ವಿರೋಧಿಸುವ ಸಾಧ್ಯತೆಯಿದೆ ಎಂದೇ ಹೇಳಲಾಗುತ್ತಿದೆ.

ಈ ಮಧ್ಯೆ, ಸದ್ಯ ಗೋವಾದಲ್ಲಿ ಕುಡಿದು ವಾಹನ ಚಲಾಯಿಸುವವರ ವಿರುದ್ಧ ಕಠಿಣ ಕ್ರಮ ಜಾರಿಯಲ್ಲಿದೆ. ಕೆಲ ತಿಂಗಳ ಹಿಂದೆ ಕುಡಿದು ವಾಹನ ಚಲಾಯಿಸುವವರ ವಿರುದ್ಧ ಸಂಚಾರ ಪೊಲೀಸರು ಧಡಕ್ ಅಭಿಯಾನ ಆರಂಭಿಸಿದ್ದರು. ಹೆಚ್ಚಿನ ಅಪಘಾತಗಳು ಮದ್ಯದ ಅಮಲಿನಲ್ಲಿ ನಡೆಯುವುದರಿಂದ ಪೊಲೀಸರು ವಾಹನ ಚಾಲಕರ  ಮೀಟರ್ ಪರೀಕ್ಷೆ ಆರಂಭಿಸಿದ್ದರು. ಈ ಅಭಿಯಾನದ ಸಂದರ್ಭದಲ್ಲಿ  1011 ಜನರು  ಕುಡಿದು ವಾಹನ ಚಲಾಯಿಸುತ್ತಿರುವುದು ಬೆಳಕಿಗೆ ಬಂದಿತ್ತು.  ಕುಡಿದು ವಾಹನ ಚಲಾಯಿಸುವ  ಅಪರಾಧಕ್ಕೆ ಗರಿಷ್ಠ ಆರು ತಿಂಗಳ ಜೈಲು ಶಿಕ್ಷೆ ಮತ್ತು ಹತ್ತು ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next