ಕುಷ್ಟಗಿ: ತಾಲೂಕಿನ ನಿಡಶೇಸಿ ಕೆರೆಗೆ ಚಳಿಗಾಲದ ಅತಿಥಿಗಳಾದ ಮುಂಗೋಲಿಯಾ, ಕಜಕೀಸ್ತಾನ ಪ್ರದೇಶದ ಪಟ್ಟೆ ತಲೆಯ ಹೆಬ್ಬಾತುಗಳು ( Bar headed geese) ಮತ್ತೆ ಬಂದಿವೆ.
ಗದಗ ಜಿಲ್ಲೆಯ ಮಾಗಡಿ ಕೆರೆ ಮೊದಲಾದ ಪ್ರದೇಶಗಳಿಗೆ ಖಾಯಂ ವಲಸೆ ಹಕ್ಕಿಗಳಾಗಿರುವುದು ವಿಶೇಷ. ಮುಂಗೋಲಿಯಾ, ಕಜಕೀಸ್ತಾನ ಈ ಸಂದರ್ಭದ ಚಳಿಯಿಂದ ಪಾರಾಗಲು ಈ ಭಾರತದೆಡೆಗೆ ಮುಖ ಮಾಡುತ್ತವೆ. ಪ್ರತಿ ವರ್ಷವೂ ಗುಂಪು ಗುಂಪಾಗಿ ಬರುವ ಈ ಹಕ್ಕಿಗಳಿಗೆ ಕೆರೆಗಳು ವಿಶ್ರಾಂತಿ ಸ್ಥಳಗಳಾಗಿವೆ. ಬೆಳಗ್ಗೆಯಿಂದ ಸಂಜೆಯವರೆಗೂ ಈ ಪ್ರದೇಶದಲ್ಲಿ ಹಿಂಗಾರು ಹಂಗಾಮಿನ ಕಡಲೆ,ಜೋಳ ಭಕ್ಷಿಸಿಸುತ್ತವೆ. ಉಳಿದ ಸಮಯದಲ್ಲಿ ಕೆರೆಗಳಲ್ಲಿರುವ ಜಲಚರಗಳನ್ನು ತಿನ್ನುವ ಈ ಹಕ್ಕಿಗಳು ಅತ್ಯಂತ ಸೂಕ್ಷ್ಮಗ್ರಹಿಗಳು, ಮಾನವ ಚಲನ ವಲನ ಕಂಡರೆ ಆಗದು ಕೂಡಲೇ ಸುರಕ್ಷಿತ ಪ್ರದೇಶಕ್ಕೆ ದೌಡಾಯಿಸುತ್ತವೆ. ಹಿಂಡು ಹಿಂಡಾಗಿ ಕೆರೆಯ ದಡದಲ್ಲಿ ನಿಂತಾಗ ಈ ಪಕ್ಷಿಗಳ ಸಮೂಹ ನೋಡುವುದೇ ಕಣ್ಮನ ಸೆಳೆಯುತ್ತವೆ.
ಕುಷ್ಟಗಿ ಪಕ್ಷಿ ಛಾಯಾಗ್ರಾಹಕ ಪಾಂಡುರಂಗ ಆಶ್ರೀತ್ , ಕಪ್ಪು ತಲೆಯ ಹೆಬ್ಬಾತುಗಳ ಸಮೂಹ ವೀಕ್ಷಣೆ ಗಮನಾರ್ಹವಾಗಿದೆ. ಕಳೆದ ಏಳೆಂಟು ವರ್ಷಗಳಿಂದ ಚಳಿಗಾಲದ ಸಂದರ್ಭದಲ್ಲಿ ತಪ್ಪದೇ ಈ ಪ್ರದೇಶಗಳಿಗೆ ಹಾಜರಾಗುತ್ತವೆ. ಅಕ್ಟೋಬರ್ ಕೊನೆಯ ವಾರದಲ್ಲಿ ಬರುವ ಈ ಹಕ್ಕಿಗಳು ಹವಮಾನದ ವೈಪರೀತ್ಯ ದ ಹಿನ್ನೆಲೆಯಲ್ಲಿ ಡಿಸೆಂಬರ ತಿಂಗಳಿನಲ್ಲಿ ಆಗಮಿಸಿವೆ. ಇವು ಕಜಕೀಸ್ತಾನ, ಮುಂಗೋಲಿಯಾ ಪ್ರಾಂತ್ಯದಿಂದ 4 ಸಾವಿರ ಮೀಟರ್ ನಲ್ಲಿ ಹಗಲು ರಾತ್ರಿ ಎನ್ನದೇ ಹಾರುವ ಬಲಿಷ್ಠ ಪಕ್ಷಿ ಇದಾಗಿದೆ. ಹಿಮಾಚ್ಛಾದಿತ ಪ್ರದೇಶಗಳಲ್ಲಿ ಮೈನಸ್ ಸೊನ್ನೆ ಡಿಗ್ರ ಸೆಂಟಿಗ್ರೇಡ್ ನಲ್ಲಿ ಹಾರುವ ಈ ಪಕ್ಷಿ ದೈವೀ ಹಕ್ಕಿಗಳು ಎನ್ನಬಹುದಾಗಿದೆ ಎಂದರು.
ಇದನ್ನೂ ಓದಿ : ಶಾಸಕ ರವೀಂದ್ರ ಶ್ರೀಕಂಠಯ್ಯ ವಿರುದ್ದ ಸಚಿವ ನಾರಾಯಣ ಗೌಡ ಕಿಡಿ