Advertisement

“ರಾಮ ಕಥಾ’ಬೋಧನೆ ವಿವಾದದಲ್ಲಿ ಬಾಪು

06:20 AM Dec 24, 2018 | |

ಅಯೋಧ್ಯೆ: ಸುಮಾರು 200 ಲೈಂಗಿಕ ಕಾರ್ಯಕರ್ತೆಯರ ತಂಡವೊಂದಕ್ಕೆ ರಾಮ ಕಥೆಯನ್ನು ಬೋಧಿಸಿದ ಕಾರಣಕ್ಕಾಗಿ ಅಯೋಧ್ಯೆಯ ಅಧ್ಯಾತ್ಮ ಗುರು ಮೊರಾರಿ ಬಾಪು ವಿವಾದಕ್ಕೀಡಾಗಿದ್ದಾರೆ. ಮುಂಬೈನ “ಕೆಂಪು ದೀಪದ ಪ್ರಾಂತ್ಯ’ವೆಂದೇ ಕುಖ್ಯಾತಿ ಪಡೆದಿರುವ ಕಾಮಾಟಿಪುರದಿಂದ ಸುಮಾರು 200 ಲೈಂಗಿಕ ಕಾರ್ಯಕರ್ತೆಯರನ್ನು ತಮ್ಮ ಆಶ್ರಮದಲ್ಲಿ ಇತ್ತೀಚೆಗೆ ನಡೆದ ಧಾರ್ಮಿಕ ಕಾರ್ಯಕ್ರಮವೊಂದಕ್ಕೆ ಆಹ್ವಾನಿಸಿದ್ದ ಬಾಪು, ಅಲ್ಲಿ ಅವರಿಗೆ ರಾಮ ಕಥೆಯನ್ನು ಬೋಧಿಸಿದ್ದನ್ನು ಕೆಲ ಸ್ವಾಮೀಜಿಗಳು, ಧಾರ್ಮಿಕ ಸಂಘಟನೆಗಳ ನಾಯಕರು ಖಂಡಿಸಿದ್ದಾರೆ. ಅಲ್ಲದೆ, ಅಯೋಧ್ಯೆ ಯನ್ನು ಅಪವಿತ್ರಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ.

Advertisement

ಈ ಬಗ್ಗೆ ಮಾತನಾಡಿರುವ ಧರಮ್‌ ಸೇನಾದ ಅಧ್ಯಕ್ಷ ಸಂತೋಷ್‌ ದುಬೆ, “ಅಯೋಧ್ಯೆ ಘನತೆಗೆ ಕುಂದು ತರುವ ಉದ್ದೇಶದಿಂದಲೇ ಬಾಪು ಅವರು ಲೈಂಗಿಕ ಕಾರ್ಯಕರ್ತೆಯರನ್ನು ಅಯೋಧ್ಯೆಗೆ ಆಹ್ವಾನಿಸಿದ್ದಾರೆ. ಸಮಾಜದಲ್ಲಿ ಪರಿವರ್ತನೆ ತರುವುದು ಅವರ ಉದ್ದೇಶವಾಗಿದ್ದರೆ ನಕ್ಸಲರು, ವೇಶ್ಯಾ ಗೃಹಗಳಿಗೆ ತೆರಳಿ ಅಲ್ಲಿ ರಾಮ ಕಥಾ ಬೋಧಿಸಲಿ”ಎಂದು ಗುಡುಗಿದ್ದಾರೆ. 

ದಾಂಡಿಯಾ ದೇಗುಲದ ಸ್ವಾಮೀಜಿ ಮಹಾಂತ ಭಾರತ್‌ ವ್ಯಾಸ್‌ ಅವರು, “”ಜನರು ತಮ್ಮ ಪಾಪ ತೊಳೆದುಕೊಳ್ಳಲೆಂದು ಅಯೋಧ್ಯೆಗೆ ಬರುತ್ತಾರೆ. ಅಂಥದ್ದರಲ್ಲಿ ಲೈಂಗಿಕ ಕಾರ್ಯಕರ್ತೆಯರನ್ನು ಕರೆಸಿಕೊಳ್ಳುವ ಮೂಲಕ ಬಾಪು ಅವರು ಯಾವ ಸಂದೇಶ ರವಾನಿಸುತ್ತಿದ್ದಾರೆ? ಇದನ್ನು ಧಾರ್ಮಿಕ ಮುಖಂಡರಾದ ನಾವು ವಿರೋಧಿಸುತ್ತೇವೆ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next