Advertisement

ಅಜಿಲಮೊಗರು: ಮಕ್ಕಳ ಅಪಹರಣಕ್ಕೆ ಯತ್ನ? ಘಟನೆ ಬಗ್ಗೆ ಅಸ್ಪಷ್ಟ ಮಾಹಿತಿ; ಪೊಲೀಸರಿಂದ ಪರಿಶೀಲನೆ

12:47 AM Dec 15, 2022 | Team Udayavani |

ಬಂಟ್ವಾಳ : ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ಸಮೀಪ ಬುಧವಾರ ಬೆಳಗ್ಗೆ ಶಾಲೆಗೆ ತೆರಳುತ್ತಿದ್ದ ಮಕ್ಕಳಿಬ್ಬರು ಕಾರೊಂದರಲ್ಲಿ ಬಂದ ವ್ಯಕ್ತಿಯೊಬ್ಬ ಅಪಹರಣಕ್ಕೆ ಯತ್ನಿಸಿದ್ದಾನೆ ಎಂದು ಹೇಳಿರುವ ಸುದ್ದಿಯೊಂದು ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ. ಆದರೆ ಘಟನೆಯ ಸತ್ಯಾಸತ್ಯತೆಯ ಕುರಿತು ಸ್ಪಷ್ಟವಾದ ಮಾಹಿತಿ ತಿಳಿದುಬಂದಿಲ್ಲ.

Advertisement

ಮಕ್ಕಳ ಹೇಳಿಕೆಯ ಆಧಾರದಲ್ಲಿ ಗ್ರಾಮಾಂತರ ಪೊಲೀಸರು ದಿನವಿಡೀ ಸ್ಥಳೀಯ ಸಿಸಿ ಕೆಮರಾಗಳನ್ನು ಪರಿಶೀಲನೆ ನಡೆಸಿದ್ದು, ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಪರಿಶೀಲನೆ ವೇಳೆ ಕಾರೊಂದು ಹಾದು ಹೋಗಿರುವುದು ಬೆಳಕಿಗೆ ಬಂದಿದ್ದು, ಆ ಕಾರನ್ನು ಪರಿಶೀಲಿಸಿದಾಗ ಅದರಲ್ಲಿ ಕುಟುಂಬವೊಂದು ತೆರಳುತ್ತಿತ್ತು ಎನ್ನಲಾಗಿದೆ.

ಇಲ್ಲಿನ ಕುಟ್ಟಿಕಳ ಸರಕಾರಿ ಶಾಲೆಯ ವಿದ್ಯಾರ್ಥಿಗಳು ನಡೆದುಕೊಂಡು ಹೋಗುತ್ತಿದ್ದ ವೇಳೆ ಬಾಲಕಿ ಹಾಗೂ ಬಾಲಕನನ್ನು ಅಪಹರಣಕ್ಕೆ ಯತ್ನಿಸಿದ್ದರು ಎಂದು ಮಕ್ಕಳು ಹೇಳಿಕೆ ನೀಡಿದ್ದರು. ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ಅಂಗಿಯಲ್ಲಿ ಹಿಡಿದು ಕಾರಿಗೆ ಎಳೆದು ಹಾಕಲು ನೋಡಿದ್ದು, ಇದರಿಂದ ಅಂಗಿಯ ಬಟನ್‌ಗಳಿಗೂ ಹಾನಿಯಾಗಿದೆ ಎಂಬ ಮಾಹಿತಿ ನೀಡಿದ್ದರು.

ಈ ವಿಚಾರವನ್ನು ಅವರು ಪೋಷಕರಿಗೆ ತಿಳಿಸಿ, ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕಾಗಮಿಸಿದ ಪೊಲೀಸರ ಜತೆ ಶಾಲೆಯ ಶಿಕ್ಷಕರು ಸ್ಥಳೀಯ ಸಿಸಿ ಕೆಮರಾಗಳನ್ನು ಪರಿಶೀಲಿಸಿದ್ದರು. ಘಟನೆಗೆ ಮಕ್ಕಳೇ ಸಾಕ್ಷಿಯಾಗಿರುವುದರಿಂದ ಘಟನೆಯ ಸತ್ಯಾಸತ್ಯತೆಯ ಕುರಿತು ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲ ಎಂದು ಬಂಟ್ವಾಳ ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ.

ಎಚ್ಚರಿಕೆಯ ಸಂದೇಶ ವೈರಲ್‌
ಬೆಳ್ತಂಗಡಿ ಭಾಗದ ಗೇರುಕಟ್ಟೆ, ನಾಳ, ಜಾರಿಗೆಬೈಲು ಭಾಗದಲ್ಲಿ ಇದೇ ರೀತಿ ಮಕ್ಕಳು ರಸ್ತೆ ಬದಿ ನಡೆದುಕೊಂಡು ಹೋಗುತ್ತಿರುವ ವೇಳೆ ಕಾರು, ಬೈಕಿನಲ್ಲಿ ಅವರನ್ನು ಹಿಂಬಾಲಿಸಿ
ಕೊಂಡು ಹೋಗಲಾಗುತ್ತಿದ್ದು, ಅಧ್ಯಾಪಕರು, ಪೋಷಕರು ಎಚ್ಚರಿಕೆ ವಹಿಸಬೇಕು. ಈ ರೀತಿಯ ಘಟನೆಗಳು ಗಮನಕ್ಕೆ ಬಂದರೆ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶವೊಂದು ಹರಿದಾಡುತ್ತಿದೆ. ಇದರ ಕುರಿತು ಕೂಡ ಸ್ಪಷ್ಟತೆ ಇಲ್ಲ.

Advertisement

ಜಕ್ರಿಬೆಟ್ಟು ಅಗ್ರಾರ್‌ ಭಾಗದಲ್ಲೂ ಘಟನೆ ?
ಬಂಟ್ವಾಳ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಜಕ್ರಿಬೆಟ್ಟು ಅಗ್ರಾರ್‌ ಬಳಿಯಲ್ಲೂ ಕಳೆದ ಕೆಲವು ದಿನಗಳ ಹಿಂದೆ ಇದೇ ರೀತಿ ಜೀಪಿನಲ್ಲಿ ಬಂದ ತಂಡ ಮಕ್ಕಳಿಗೆ ಚಾಕಲೇಟ್‌ ನೀಡಲು ಮುಂದಾಗಿದ್ದು, ಎರಡು ದಿನಗಳ ಬಳಿಕ ಅದು ಪುನರಾವರ್ತನೆಯಾಗಿತ್ತು. ಈ ಕುರಿತು ನಗರ ಪೊಲೀಸರಿಗೂ ಮಾಹಿತಿ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next