Advertisement

ಬಂಟ್ವಾಳ : ರಾಜಿ ಪಂಚಾಯತಿಗೆ ಬಂದವರು ನಡು ಬೀದಿಯಲ್ಲೇ ಹೊಡೆದಾಡಿಕೊಂಡರು : ವಿಡಿಯೋ ವೈರಲ್

05:47 PM Nov 20, 2021 | Team Udayavani |

ಬಂಟ್ವಾಳ : ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿ ಮೆಲ್ಕಾರ್ ನಲ್ಲಿ ರಸ್ತೆ ಬದಿಯಲ್ಲಿ ಯುವಕರ ಎರಡು ತಂಡಗಳು ಹೊಡೆದಾಟ ನಡೆಸಿದ ವಿಡಿಯೋ ವೈರಲ್ ಆಗಿದ್ದು ಘಟನೆಯ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪೋಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

ಮೆಲ್ಕಾರ್ ಸಾರ್ವಜನಿಕ ಸ್ಥಳದಲ್ಲಿ ಯುವಕರ ಎರಡು ತಂಡಗಳು ವೈಯಕ್ತಿಕ ವಿಚಾರಕ್ಕೆ ಗಲಾಟೆ ನಡೆದ ವಿಡಿಯೋ ಇದೀಗ ವೈರಲ್ ಆಗಿದೆ.

ಕಳೆದ ಕೆಲ ದಿನಗಳ ಹಿಂದೆ ಬಂಟ್ವಾಳದಲ್ಲಿ ನಡೆದ ಮೆಹಂದಿ ಕಾರ್ಯಕ್ರಮ ವೊಂದರಲ್ಲಿ ಸಂತೋಷ್ ಎಂಬವರಿಗೆ ಅವಿನಾಶ್ ಎಂಬವರು ಹಲ್ಲೆ ನಡೆಸಿದ್ದು ಇದರ ರಾಜಿ ಪಂಚಾಯತಿಗಾಗಿ ಮೆಲ್ಕಾರ್ ಗೆ ಎರಡು ತಂಡಗಳು ಬಂದು ಸೇರಿದ್ದವು.

ಇದೇ ವಿಚಾರವಾಗಿ ಮಾತಿಗೆ ಮಾತಿಗೆ ಬೆಳೆದು ರಾಜಿ ಪಂಚಾಯಿತಿಗೆ ಮುರಿದು ಪರಸ್ಪರ ಮರದ ಸೊಂಟೆಯಿಂದ ಹಾಗೂ ಸೋಡ ಬಾಟಲಿಯಿಂದ ಹೊಡೆದಾಡಿಕೊಂಡಿದ್ದಾರೆ.
ಬಳಿಕ ಒಂದು ತಂಡ ಒಮ್ನಿ ಕಾರಿನಲ್ಲಿ ಕುಳಿತು ಅಲ್ಲಿಂದ ಕಾಲ್ಕಿತ್ತಿದೆ.

ಇದನ್ನೂ ಓದಿ : 

Advertisement

ಈ ಘಟನೆಯ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಅಗಮಿಸಿದ ಬಂಟ್ವಾಳ ಪೋಲೀಸರನ್ನು ನೋಡಿ ಇನ್ನೊಂದು ತಂಡ ಕೂಡ ಪರಾರಿಯಾಗಿತ್ತು.

ಈ ಘಟನೆಯ ಬಗ್ಗೆ ಎರಡು ತಂಡಗಳು ಯಾವುದೇ ದೂರನ್ನು ಈ ವರಗೆ ಪೋಲೀಸ್ ಠಾಣೆಗೆ ನೀಡಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡಿದ್ದಲ್ಲದೆ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಪ್ರಕರಣವಾಗಿದ್ದರಿಂದ ಪೋಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next