Advertisement
ಅಂತರ ಮಣಿಗುತ್ತು ನಿವಾಸಿ ಪೂರ್ಣಿಮಾ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಸಂಜೆ 5.45ರ ಸುಮಾರಿಗೆ ಮನೆಯ ಬಳಿ ನಾಯಿಗಳು ಬೊಗಳುವ ಶಬ್ದ ಕೇಳಿದ್ದು, ಆಗ ಅವರ ಜತೆಯಲ್ಲಿದ್ದ ಧನುಷ್ ಮನೆಗೆ ಬಂದಾಗ ಅಪರಿಚಿತ ವ್ಯಕ್ತಿ ಮನೆಯ ಒಳಗಿನಿಂದ ಪ್ಲಾಸ್ಟಿಕ್ ಬಾಕ್ಸ್ ಹಿಡಿದುಕೊಂಡು ಓಡುತ್ತಿದ್ದಾಗ ಬಾಕ್ಸ್‌ನಲ್ಲಿದ್ದ 500 ರೂ.ಗಳ 4 ಕಟ್ಟುಗಳು ನೆಲಕ್ಕೆ ಬಿದ್ದಿದೆ. ಅದರಲ್ಲಿ 1 ಕಟ್ಟನ್ನು ಆತ ಹೆಕ್ಕಿ ಪರಾರಿಯಾಗಿದ್ದಾನೆ. ಈ ವೇಳೆ ಧನುಷ್ ಬೊಬ್ಬೆ ಹಾಕಿದ್ದು, ತೋಟದಲ್ಲಿದ್ದ ಪೂರ್ಣಿಮಾ ಕೂಡ ಓಡಿ ಬಂದಿದ್ದಾರೆ.
ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.