ಬಂಟ್ವಾಳ: ನಾವೂರು ಗ್ರಾಮದ ಫರ್ಲ ಚರ್ಚ್ ಸೇರಿದಂತೆ, ಬಂಟ್ವಾಳ ಹೆದ್ದಾರಿಯಲ್ಲಿ ಸಿಗುವ ದಿನಸಿ ಅಂಗಡಿ, ಬಾರ್ ಮುಂತಾದೆಡೆ ನುಗ್ಗಿದ ಕಳ್ಳರು, ಹಣಕ್ಕೆ ತಡಕಾಡಿ, ಅಪಾರ ಸೊತ್ತುಗಳಿಗೆ ಹಾನಿ ಮಾಡಿದ್ದಾರೆ.
ಕಳ್ಳರು ಚರ್ಚಿನೊಳಗೆ ಬರುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದು, ಆದರೆ ಗುರುತು ಪತ್ತೆಯಾಗಿಲ್ಲ. ಚರ್ಚಿನ ಬಾಗಿಲು ಮುರಿದು ಒಳ್ಳ ನುಗ್ಗಿರುವ ಕಳ್ಳರು ಹಣಕ್ಕೆ ಹುಡುಕಾಟ ನಡೆದಿದ್ದು, ಆದರೆ ಚರ್ಚಿನಲ್ಲಿ ಹಣದೇ ಇಡದೇ ಇರುವುದರಿಂದ ಅವರು ಬರಿಗೈಯಲ್ಲಿ ವಾಪಾಸಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಘಟನೆ ಶುಕ್ರವಾರ (ಜ.22) ರಾತ್ರಿ ನಡೆದಿದ್ದು, ಚರ್ಚಿನ ಪವಿತ್ರ ಸೊತ್ತುಗಳಿಗೆ ಹಾನಿ ಮಾಡಿದ್ದಾರೆ.
ಬಂಟ್ವಾಳದಲ್ಲಿ ಸರಣಿ ಕಳ್ಳತನ ನಡೆದಿದ್ದು, ಹೆದ್ದಾರಿಯಲ್ಲಿ ಸಿಗುವ ಬಾರ್, ದಿನಸಿ ಅಂಗಡಿ ಮುಂತಾದೆಡೆ ನುಗ್ಗಿ ಕಳ್ಳರು
ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಅಪ್ಪ ಕೊಡಿಸಿದ ಸೈಕಲ್‌ನಲ್ಲೇ ಊರು ಸುತ್ತುವ ರವೀಂದ್ರ ಕುಮಾರ್ :36 ವರ್ಷಗಳಿಂದ ಸೈಕಲೇ ಆಧಾರ
ಇದನ್ನೂ ಓದಿ: ರೈತ ಮುಖಂಡರಿಗೆ ಗುಂಡಿಕ್ಕಿ, ರ‍್ಯಾಲಿ ಚದುರಿಸಲು ಸಂಚು: ಓರ್ವನ ಸೆರೆಹಿಡಿದ ರೈತರು
ಇದನ್ನೂ ಓದಿ: ಭಾರತೀಯ ಯುವಜನರಿಗೆ ನೇತಾಜಿ ಬರೆದ ಪತ್ರಗಳು