ಬಂಟ್ವಾಳ : ಆಡಳಿತ ಯಂತ್ರದಲ್ಲಿ ಸರಕಾರಿ ನೌಕರರ ಪಾತ್ರ ಮಹತ್ವದ್ದು. ಜಾತ್ಯತೀತ ಅಧಾರದಲ್ಲಿ ವೃತ್ತಿ ಪರ ಯೋಚನೆಯಲ್ಲಿ ಉತ್ತಮ ವಾತಾವರಣದಲ್ಲಿ ಸರಕಾರಿ ನೌಕರರು ಕೆಲಸ ಮಾಡಬೇಕು. ಆಗ ಸರಕಾರದ ಕಾರ್ಯವೈಖರಿ ಉತ್ತಮವಾಗಿ ನಡೆಯಲು ಸಾಧ್ಯ ಎಂದು ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು. ಅವರು ಡಿ.9ರಂದು ಬಂಟ್ವಾಳ ತಾ| ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ನೂತನ ಸಭಾ ಭವನದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
6ನೇ ವೇತನ ಆಯೋಗ ವಿಚಾರವಾಗಿ ಈಗಾಗಲೇ ಸರಕಾರ ವೇತನ ಆಯೋಗದ ರಚನೆ ಮಾಡಿದೆ. ಇದು ಸಿಗಲು ಪೂರಕ ನಡವಳಿಕೆಯ ಒಂದು ಭಾಗವಾಗಿದೆ. ಗುರುಭವನ ನಿರ್ಮಾಣಕ್ಕೆ ಬೇಕಾದ ಪೂರಕ ವ್ಯವಸ್ಥೆ ಮಾಡಲು ಸರಕಾರದ ಜತೆ ಪ್ರಯತ್ನಿಸುತ್ತೇನೆ. ವಸತಿ ಸಮುಚ್ಚಯ ನಿರ್ಮಾಣದ ಬಗ್ಗೆ ಗಮನದಲ್ಲಿಟ್ಟುಕೊಂಡು ಮುಂದೆ ಪೂರ್ಣ ಬೆಂಬಲ ನೀಡುತ್ತೇನೆ ಎಂದರು.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ ರೈ ಮೇರಾವು ಶುಭ ಹಾರೈಸಿದರು. ತಾಲೂಕು ಪಂಚಾಯತ್ ಅದ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಟಾಸ್ ಅಲಿ, ಪುರಸಭಾ ಅದ್ಯಕ್ಷ ಪಿ. ರಾಮಕೃಷ್ಣ ಆಳ್ವ, ತಹಶಿಲ್ದಾರ್ ಪುರಂದರ ಹೆಗ್ಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯಾನ್ ಮಿರಾಂದ, ನೌಕರರ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್ ನಾಯಕ್, ಸಿವಿಲ್ ಎಂಜಿನಿಯರ್ ರಾಮ್ ಪ್ರಸಾದ್, ಮಾಜಿ ಅಧ್ಯಕ್ಷರಾದ ನಾರಾಯಣ ಬೆಳ್ಚಪ್ಪಾಡ, ಕೆ. ಮೋಹನ್ ರಾವ್, ಸಂಘದ ಖಜಾಂಚಿ ಜೆ. ಜನಾರ್ದನ, ಉಪಾಧ್ಯಕ್ಷರಾದ ಸುನಂದಾ ಕೆ., ಪಿ.ಹರಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.
ಪ್ರಶಸ್ತಿ ಪುರಸ್ಕೃತರಾದ ರಮೇಶ್ ಬಾಯಾರು, ರಮಾನಂದ, ಶೇಕ್ ಆದಂ ಸಾಹೇಬ್, ಕುಂಞಿ ನಾೖಕ, ಸಂಜೀವ ನಾಯ್ಕ, ನಾರಾಯಣ ಪೂಜಾರಿ, ಹೊನ್ನಪ್ಪ ನಾೖಕ, ಶಿವಪ್ರಸಾದ ಶೆಟ್ಟಿ, ವಿಶೇಷ ಸಾಧಕರಾದ ಚಿನ್ನಪ್ಪ ಶಂಭೂರು, ಕ್ಯಾರೆಲ್ ರೊಸಾರಿಯೊ, ಲಕ್ಷ್ಮಣ ಗೌಡ, ಕೆ.ಪಿ. ಆಶಾ, ನೀತಲ್ ಮಲೊನಿ ಬ್ರಾಗ್ಸ್ ಅವರನ್ನು ಸಮ್ಮಾನಿಸಲಾಯಿತು. ನಿವೃತ್ತರಿಗೆ ಸಮ್ಮಾನ ಮಾಡಲಾಯಿತು. ಸಂಘದ ಅಧ್ಯಕ್ಷರು ಸ್ವಾಗತಿಸಿ, ಪ್ರಸ್ತಾವಿಸಿದರು. ಕಾರ್ಯದರ್ಶಿ ಕೆ. ರಮೇಶ್ ನಾಯಕ್ ರಾಯಿ ವಂದಿಸಿದರು.