Advertisement
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಮುಖ ಮಾರ್ಗಸೂಚಿಗಳನ್ನು ಕಳುಹಿಸಿದ್ದು, ತಾಲೂಕಿನಲ್ಲಿ ಒಟ್ಟು 16 ಪರೀಕ್ಷಾ ಕೇಂದ್ರಗಳಿವೆ. ವಾಮದಪದವು ಮತ್ತು ವಗ್ಗ ಸ.ಪ.ಪೂ.ಕಾಲೇಜು ಗಳಲ್ಲಿ 2 ಸ್ವತಂತ್ರ ಪರೀಕ್ಷಾ ಕೇಂದ್ರ, 14 ಕ್ಲಸ್ಟರ್ ಕೇಂದ್ರಗಳಿವೆ. ಒಟ್ಟು 6,137 ವಿದ್ಯಾರ್ಥಿಗಳು ಹಾಜರಾಗುವರು.
ಸರಕಾರಿ ಶಾಲೆಗಳಲ್ಲಿ ಒಟ್ಟು 2,290 ಹೊಸ ವಿದ್ಯಾರ್ಥಿಗಳಿದ್ದು, 1,035 ಹುಡುಗರು ಮತ್ತು 1,055 ಹುಡುಗಿಯರು, 169 ಪುನರಾವರ್ತಿತ ವಿದ್ಯಾರ್ಥಿಗಳು ಮತ್ತು 141 ವಿದ್ಯಾರ್ಥಿಗಳು ಖಾಸಗಿಯಾಗಿ ಪರೀಕ್ಷೆ ಬರೆಯುವರು. ಒಟ್ಟು 1,271 ಹುಡುಗರು ಮತ್ತು 1,329 ಹುಡುಗಿಯರು ಸೇರಿ 2,600 ವಿದ್ಯಾರ್ಥಿಗಳಿದ್ದಾರೆ. ಅನುದಾನಿತ ಶಾಲೆ
ಅನುದಾನಿತ ಶಾಲೆಗಳಲ್ಲಿ 864 ಹುಡುಗರು, 946 ಹುಡುಗಿಯರಿದ್ದು ಒಟ್ಟು 1,810 ಹೊಸ ವಿದ್ಯಾರ್ಥಿಗಳಿದ್ದಾರೆ. 192 ಹುಡುಗರು ಮತ್ತು 78 ಹುಡುಗಿಯರು ಒಟ್ಟು 270 ಪುನರಾವರ್ತಿತ ವಿದ್ಯಾರ್ಥಿಗಳಿದ್ದಾರೆ. 6 ಹುಡುಗರು ಮತ್ತು ಓರ್ವ ವಿದ್ಯಾರ್ಥಿನಿ ಖಾಸಗಿಯಾಗಿ ಪರೀಕ್ಷೆ ಬರೆಯಲಿದ್ದಾರೆ. ಒಟ್ಟು 2087. ಅನುದಾನ ರಹಿತ ಶಾಲೆಗಳಲ್ಲಿ 688 ಹುಡುಗರು ಮತ್ತು 713 ಹುಡುಗಿಯರಿದ್ದು ಒಟ್ಟು 1,397 ಹೊಸ ವಿದ್ಯಾರ್ಥಿಗಳಿದ್ದಾರೆ. 20 ಹುಡುಗರು ಮತ್ತು 4 ಹುಡುಗಿಯರು ಒಟ್ಟು 24 ಪುನರಾವರ್ತಿತ ವಿದ್ಯಾರ್ಥಿಗಳಿದ್ದು ಒಟ್ಟು 1,421 ವಿದ್ಯಾರ್ಥಿಗಳು ಹಾಜರಾಗುವರು. ಪರೀಕ್ಷೆಯು ಪೂರ್ವಾಹ್ನ 9.30ರಿಂದ ಆರಂಭಗೊಳ್ಳಲಿದೆ.
Related Articles
ಕೊಠಡಿ ಮೇಲ್ವಿಚಾರಕರನ್ನು ಅಂತರ್ ಕ್ಲಸ್ಟರ್ ಮಾದರಿಯಲ್ಲಿ ನೇಮಿಸಲಾಗಿದೆ. ಕೇಂದ್ರಗಳಲ್ಲಿ ಅತಿ ಅಗತ್ಯದ ಮೂಲಸೌಕರ್ಯಗಳಾದ ಆಸನ, ಕುಡಿಯುವ ನೀರು ಮತ್ತು ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ. ಇದನ್ನು ಪರಿಶೀಲಿಸಲು ತಾಲೂಕು ಮಟ್ಟದಲ್ಲಿ ತ್ರಿಸದಸ್ಯ ಸಮಿತಿ ರಚಿಸಲಾಗಿದೆ.
Advertisement
ಯಾವುದೇ ಅವ್ಯವಹಾರ, ಅಕ್ರಮ ತಡೆಯಲು ಸಂಬಂಧಪಟ್ಟ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರಿಗೆ ಸೂಕ್ತ ಮಾರ್ಗದರ್ಶನ ನೀಡಿದ್ದು, ಅಂತಹ ಪ್ರಕರಣಗಳು ಕಂಡುಬಂದಲ್ಲಿ ಇಲಾಖಾ ನಿಯಮಾನುಸಾರ ಶಿಸ್ತು ಕ್ರಮಕ್ಕೆ ಒಳಪಡಿಸುವ ಬಗ್ಗೆ ಸೂಚನೆ ನೀಡಲಾಗಿದೆ.
ಸಲಹೆ ಸೂಚನೆ ಮಾರ್ಗದರ್ಶಿಅ.29ರಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ನೇತೃತ್ವದಲ್ಲಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆ ನಡೆಸಲಾಗಿತ್ತು. ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಜಿಲ್ಲಾ ಉಪನಿರ್ದೇಶಕರು (ಆಡಳಿತ), ಸಾರ್ವಜನಿಕ ಶಿಕ್ಷಣ ಇಲಾಖೆ, ಉಪನಿರ್ದೇಶಕರು (ಅಭಿವೃದ್ಧಿ), ಡಯಟ್, ತಾಲೂಕಿನ ಎಲ್ಲ ಜನಪ್ರತಿನಿಧಿಗಳು, ಪ್ರೌಢಶಿಕ್ಷಣ ಪರೀಕ್ಷಾ ಅಧಿಕಾರಿಗಳು, ವಿಷಯ ಪರಿವೀಕ್ಷಕರು, ಡಯಟ್ ಉಪನ್ಯಾಸಕರು, ತಾ| ಹಂತದ ಶಿಕ್ಷಣ ಸಂಯೋಜಕರು, ಶಿಕ್ಷಕರ ಸಂಘದ ಎಲ್ಲ ಪ್ರತಿನಿಧಿಗಳು – ತಾಲೂಕಿನ ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಉನ್ನತೀಕರಣಕ್ಕಾಗಿ ಹಾಗೂ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ಕಾರ್ಯ ನಿರತರಾಗಿದ್ದಾರೆ. ವಿಷಯವಾರು ಶಿಕ್ಷಕರ ಕೊರತೆಯಿದ್ದ ಶಾಲೆಗಳನ್ನು ಗುರುತಿಸಿ ಪರೀಕ್ಷಾ ತಯಾರಿಗೆ ಪೂರಕವಾಗಿ ಹತ್ತಿರದ ಶಾಲೆಗಳಿಂದ 16 ಶಿಕ್ಷಕರನ್ನು ನಿಯೋಜಿಸಲಾಗಿತ್ತು. ತಾಲೂಕಿನ ಫಲಿತಾಂಶ ಉನ್ನತೀಕರಣಕ್ಕಾಗಿ ನಿಧಾನ ಕಲಿಕೆಯ ವಿದ್ಯಾರ್ಥಿಗಳಿಗೆ ವಿಷಯವಾರು 6 ಕಾರ್ಯಾಗಾರ ಮತ್ತು 8 ಮುಖ್ಯಶಿಕ್ಷಕರ ಸಭೆಗಳನ್ನು ಆಯೋಜಿಸಲಾಗಿತ್ತು. ಶಿಕ್ಷಕರಿಗೆ ವಿಷಯವಾರು 6 ಕಾರ್ಯಾಗಾರಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವೆನಾÉಕ್ ಆಸ್ಪತ್ರೆಯ ವತಿಯಿಂದ ಕಾರ್ಯಾಗಾರ ಏರ್ಪಡಿಸಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಣ ಸಂಯೋಜಕರೊಂದಿಗೆ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಸಮಾಲೋಚಿಸಿ, ವಿದ್ಯಾರ್ಥಿಗಳಲ್ಲಿ ಮನೋಸ್ಥೈರ್ಯ ಹೆಚ್ಚಿಸಲು ಪ್ರಯತ್ನಿಸಲಾಗಿದೆ. ವಿದ್ಯಾರ್ಥಿಗಳಿಗಾಗಿ ಆರು ತಾಲೂಕು ಮಟ್ಟದ ಕಾರ್ಯಾಗಾರಗಳನ್ನು ಅಯೋಜಿಸಲಾಗಿದೆ. ಉತ್ತಮ ಫಲಿತಾಂಶಕ್ಕೆ ಕ್ರಮ
ತಾಲೂಕಿನ ಶಾಲೆಗಳ 3 ವರ್ಷಗಳ ಎಸೆಸೆಲ್ಸಿ ವಾರ್ಷಿಕ, ಅರ್ಧ ವಾರ್ಷಿಕ ಪರೀಕ್ಷಾ ಫಲಿತಾಂಶ ವಿಶ್ಲೇಷಣೆ ನಡೆಸಿ, ಉತ್ತಮಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. 8ನೇ ತರಗತಿಯಿಂದಲೇ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲು 8 ಮತ್ತು 9ನೇ ತರಗತಿ ಅರ್ಧವಾರ್ಷಿಕ ಪರೀಕ್ಷೆಗಳ ಫಲಿತಾಂಶವನ್ನು ವಿಶ್ಲೇಷಣೆ ನಡೆಸಲಾಗಿತ್ತು. ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಸಮಾಲೋಚನಾ ಸಭೆಗಳನ್ನು ನಡೆಸಲಾಗಿದೆ. ವಿಶೇಷ ಕಾರ್ಯಾಗಾರಗಳನ್ನು ನಡೆಸಲಾಗಿದೆ.
– ಲೋಕೇಶ್ ಸಿ., ಕ್ಷೇತ್ರ ಶಿಕ್ಷಣಾಧಿಕಾರಿ, ಬಂಟ್ವಾಳ – ರತ್ನದೇವ್ ಪುಂಜಾಲಕಟ್ಟೆ