Advertisement

Bantwal ಸಂಘಟಿತ ಹಿಂದೂ ಸಮಾಜ ಅಗತ್ಯ: ಸಾಧ್ವಿ ದೇವಿ ಸರಸ್ವತಿ

11:26 PM Oct 08, 2023 | Team Udayavani |

ಬಂಟ್ವಾಳ: ದೇಶದಲ್ಲಿ ನಡೆಯುತ್ತಿರುವ ಗೋಹತ್ಯೆ, ಲವ್‌ ಜೆಹಾದ್‌, ಹಿಂದೂ ವಿರೋಧಿಗಳನ್ನು ಮಟ್ಟ ಹಾಕುವ ಜತೆಗೆ ಹಿಂದೂ ಸಮಾಜದ ಸುರಕ್ಷೆಯ ದೃಷ್ಟಿಯಿಂದ ಹಿಂದೂಗಳು ಯಾವುದೇ ಜಾತಿ, ಮತದ ಭೇದವಿಲ್ಲದೆ ಸಂಘಟಿತರಾಗುವಂತೆ ತಮ್ಮಲ್ಲಿ ಸೆರಗೊಡ್ಡಿ ಭಿಕ್ಷೆ ಬೇಡುತ್ತಿದ್ದೇವೆ ಎಂದು ಪ್ರಖರ ವಾಗ್ಮಿ ಸಾಧ್ವಿ ದೇವಿ ಸರಸ್ವತಿ ಜೀ ಹೇಳಿದರು.

Advertisement

ಅವರು ಶೌರ್ಯ ಜಾಗರಣ ರಥಯಾತ್ರೆಯ ಭಾಗವಾಗಿ ಬಂಟ್ವಾಳ ವಿಶ್ವ ಹಿಂದೂ ಪರಿಷತ್‌ – ಬಜರಂಗ ದಳದ ವತಿಯಿಂದ ಬಿ.ಸಿ.ರೋಡಿನ ಬಸ್ತಿಪಡು³ ಶೌರ್ಯ ಮೈದಾನದಲ್ಲಿ ರವಿವಾರ ಆಯೋಜನೆಗೊಂಡಿದ್ದ ಜಾಗೃತ ಹಿಂದೂ ಸಮಾಜೋತ್ಸವದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ಹಿಂದೂ ಸಮಾಜವು ಬೇರೆ ಬೇರೆ ಸಂಘಟನೆಗಳ ಮೂಲಕ ಹರಿದು ಹಂಚಿ ಹೋಗಿದ್ದು, ಇದರಿಂದಾಗಿ ಗೋಹತ್ಯೆ, ಭ್ರಷ್ಟಾಚಾರ, ಲವ್‌ ಜೆಹಾದ್‌ ವಿಜೃಂಭಿಸುತ್ತಿದೆ. ನೀರು, ಗಾಳಿ, ಮಣ್ಣನ್ನು ಪುಣ್ಯವೆಂದು ನಂಬಿ ಸರ್ವರಿಗೂ ಸುಖವನ್ನೇ ಬಯಸುವ ಸನಾತನ ಧರ್ಮವನ್ನು ಉದಯನಿಧಿ ಸ್ಟಾಲಿನ್‌ನಂತಹವರು ನಿಂದಿಸುತ್ತಿರುವುದು ದುರದೃಷ್ಟಕರ ಎಂದರು.

ಮಾತೆಯರು ಶಸ್ತ್ರ
ಧರಿಸುವ ಅನಿವಾರ್ಯ
ಮಿಲಾದ್‌ ಆಚರಣೆ ವೇಳೆ ಶಿವಮೊಗ್ಗ ದಲ್ಲಿ ಟಿಪ್ಪು ಸುಲ್ತಾನ, ಔರಂಗಜೇಬನ ಕಟೌಟ್‌ ಹಾಕಲಾಗಿದ್ದು, ಅಂತಹ ಕೃತ್ಯಗಳನ್ನು ಮಟ್ಟ ಹಾಕಬೇಕಿದೆ. ನಾವು ಅಬ್ದುಲ್‌ ಕಲಾಂರಂತಹ ಮುಸ್ಲಿಮರನ್ನು ಗೌರವಿಸುತ್ತೇವೆಯೇ ವಿನಃ ಟಿಪ್ಪು, ಬಾಬರ್‌, ಔರಂಗಜೇಬನಂತಹವರನ್ನಲ್ಲ. ರಾಜರಾಜೇಶ್ವರಿಯು ಚಂಡಮುಂಡ ರನ್ನು ಚೆಂಡಾಡಿದಂತೆ ಮಾತೆಯರು ಶಸ್ತ್ರಧಾರಿಗಳಾಗಿ ಲವ್‌ ಜೆಹಾದ್‌ನಂತಹ ಕೃತ್ಯಗಳಿಂದ ಹಿಂದೂ ಧರ್ಮವನ್ನು ರಕ್ಷಣೆ ಮಾಡಬೇಕಿದೆ ಎಂದು ಸಾಧ್ವಿ ದೇವಿ ಸರಸ್ವತಿ ಜೀ ಹೇಳಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕ ಸು.ರಾಮಣ್ಣ ಮಾತನಾಡಿ, ಆಯೋಧ್ಯೆಯ ಆಂದೋಲನದ ತಾರ್ಕಿಕ ಅಂತ್ಯ ಕಾಲಘಟ್ಟದಲ್ಲಿ ನಾವಿದ್ದೇವೆ. ಹಿಂದೂ ತರುಣರಲ್ಲಿ ಶೌರ್ಯ ವಿಜೃಂಭಿಸಿದಾಗ ಕ್ರೌರ್ಯ ತಾನಾಗಿಯೇ ಬದಿಗೆ ಸರಿಯುತ್ತದೆ. ಈ ನಿಟ್ಟಿನಲ್ಲಿ ಶೌರ್ಯವನ್ನು ಬೆಳೆಸುವ ಕಾರ್ಯ ಬಜರಂಗ ದಳ ಮಾಡುತ್ತಿದೆ ಎಂದು ತಿಳಿಸಿದರು.

Advertisement

ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕಣಿಯೂರು ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ, ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದಜಿ, ವಿಹಿಂಪ ದಕ್ಷಿಣ ಪ್ರಾಂತದ ಕಾರ್ಯಾಧ್ಯಕ್ಷ ಡಾ| ಎಂ.ಬಿ. ಪುರಾಣಿಕ್‌, ಸಮಾಜೋತ್ಸವದ ಸ್ವಾಗತ ಸಮಿತಿ ಅಧ್ಯಕ್ಷ ರಘು ಎಲ್‌.ಶೆಟ್ಟಿ ಬೆಳ್ಳೂರು, ವಿಹಿಂಪ ಪುತ್ತೂರು ಜಿಲ್ಲಾ ಅಧ್ಯಕ್ಷ ಡಾ| ಕೃಷ್ಣಪ್ರಸಾದ್‌ ವೇದಿಕೆಯಲ್ಲಿದ್ದರು.

ವಿಹಿಂಪ ಬಂಟ್ವಾಳ ಅಧ್ಯಕ್ಷ ಪ್ರಸಾದ್‌ ಕುಮಾರ್‌ ರೈ ಸ್ವಾಗತಿಸಿ, ಕಲ್ಲಡ್ಕ ಪ್ರಖಂಡದ ಅಧ್ಯಕ್ಷ ಸಚಿನ್‌ ಮೆಲ್ಕಾರ್‌ ವಂದಿಸಿದರು. ನವೀನ್‌ ಕುಲಾಲ್‌ ಹಾಗೂ ಬುಡಾ ಮಾಜಿ ಅಧ್ಯಕ್ಷ ಬಿ. ದೇವದಾಸ್‌ ಶೆಟ್ಟಿ ನಿರ್ವಹಿಸಿದರು. ಗಾಯಕ ಬಿ. ಭಾಸ್ಕರ್‌ ರಾವ್‌ ಪ್ರೇರಣ ಗೀತೆ ಹಾಡಿದರು. ಪ್ರಾರಂಭದಲ್ಲಿ ಕೈಕಂಬ ಪೊಳಲಿ ದ್ವಾರದ ಬಳಿಯಿಂದ ಸಹಸ್ರಾರು ಕಾರ್ಯಕರ್ತರ ಪಾಲ್ಗೊಳ್ಳುವಿಕೆಯಲ್ಲಿ ಬೃಹತ್‌ ಮೆರವಣಿಗೆ ನಡೆಯಿತು.

ತುಳುವಿನಲ್ಲಿ ಮಾತು ಆರಂಭಿಸಿದ ಸಾಧ್ವಿ
“ತುಳುನಾಡ್‌ದ ಸಿಂಹ ಸ್ವರೂಪಿ ಕಾರ್ಯಕರ್ತೆರೆಗ್‌, ಅಬ್ಬಕ್ಕನಂಚಿನ ಅಕ್ಕನಕ್ಲೆಗ್‌ ಎನ್ನ ಸೊಲ್ಮೆಲ್‌’ ಎಂದು ತುಳುವಿನಲ್ಲಿ ಮಾತು ಆರಂಭಿಸಿದ ಸಾಧ್ವಿಯವರು, ಶ್ರೀ ರಾಜರಾಜೇಶ್ವರೀ, ಮಂಜುನಾಥ, ಪರಶುರಾಮ, ಹನುಮಂತನ ಭೂಮಿಗೆ ನಮಸ್ಕರಿಸುವೆ. ಕರ್ನಾಟಕಕ್ಕೆ ಆಗಮಿಸಿದ ಸಂದರ್ಭ ಅತಿ ಹೆಚ್ಚು ಬಾರಿ ಮಂಗಳೂರು, ಉಡುಪಿಗೆ ಭೇಟಿ ನೀಡಿದ್ದು, ನಿಮ್ಮ ಪ್ರೀತಿಗೆ ಪ್ರಣಾಮಗಳು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next