Advertisement

Bantwal; ನಾಪತ್ತೆಯಾಗಿದ್ದ ಅಮ್ಟಾಡಿ ಗ್ರಾ.ಪಂ.ಕಾರ್ಯದರ್ಶಿ ಪತ್ತೆ

07:02 PM Sep 13, 2023 | Team Udayavani |

ಬಂಟ್ವಾಳ: ಅನಾರೋಗ್ಯಕ್ಕಾಗಿ ಔಷಧಿಗೆಂದು ಹೋಗಿ ಮರಳಿ ಬಾರದೆ ನಾಪತ್ತೆಯಾಗಿದ್ದ ಅಮ್ಟಾಡಿ ಗ್ರಾ.ಪಂ.ನ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಅವರು ಬುಧವಾರ ಸಂಜೆ ವೇಣೂರು ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ.

Advertisement

ಮಡಂತ್ಯಾರು ನಿವಾಸಿ ಲಕ್ಷ್ಮೀನಾರಾಯಣ ನಾಪತ್ತೆಯಾಗಿದ್ದ ಕುರಿತು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅವರ ಮೊಬೈಲ್ ಪೋನ್ ಕೊನೆಯಲ್ಲಿ ಶಿರ್ತಾಡಿಯಲ್ಲಿ ಪತ್ತೆಯಾಗಿದ್ದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು. ಗ್ರಾ.ಪಂ.ನ ತಂಡ ಶಿರ್ತಾಡಿ ಭಾಗದಲ್ಲಿ ಹುಡುಕಾಟ ನಡೆಸಿತ್ತು. ಕೊನೆಗೂ ಪತ್ತೆಯಾಗಿದ್ದಾರೆ.

ನಾಪತ್ತೆಯ ಕುರಿತು ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಅವರು ಬೈಕಿನಲ್ಲಿ ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next