Advertisement
ಬಿ.ಸಿ.ರೋಡು – ಅಡ್ಡಹೊಳೆ ಹೆದ್ದಾರಿಯ ಕಾಮಗಾರಿಯಲ್ಲಿ ಫ್ಲೈಓವರ್ ನಿರ್ಮಾಣವೇ ಬಹುದೊಡ್ಡ ಯೋಜನೆಯಾಗಿದ್ದು, ಹೀಗಾಗಿ ಕಲ್ಲಡ್ಕ ಪೇಟೆಯು ಸಾಕಷ್ಟು ತೊಂದರೆಯನ್ನೂ ಅನುಭವಿಸಿತ್ತು. ಹೆದ್ದಾರಿ ಕಾಮಗಾರಿ ಆರಂಭದಲ್ಲೇ ಕಲ್ಲಡ್ಕದಲ್ಲೂ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಅಲ್ಲಿಂದ ಇಲ್ಲಿಯವರೆಗೂ ಕೆಸರು, ಮಳೆ ನೀರು, ಚರಂಡಿ ಮೊದಲಾದ ಸಮಸ್ಯೆಗಳಿಂದ ಪೇಟೆಯ ಜನತೆ ಸಂಕಷ್ಟ ಅನುಭವಿಸಿದ್ದರು.
ಹೆದ್ದಾರಿ ಕಾಮಗಾರಿ ನಿರ್ವಹಿಸುವ ಗುತ್ತಿಗೆ ಸಂಸ್ಥೆ ಕೆಎನ್‌ಆರ್ ಅಧಿಕಾರಿಗಳು 2025ರ ಎಪ್ರಿಲ್ ಆರಂಭಕ್ಕೆ ಕಲ್ಲಡ್ಕ ಫ್ಲೈಓವರ್‌ನ್ನು ಸಂಚಾರಕ್ಕೆ ಮುಕ್ತಗೊಳಿಸುವ ಯೋಜನೆ ಹಾಕಿಕೊಂಡಿದ್ದು, ಇದೀಗ ಸುಮಾರು 70 ಪಿಲ್ಲರ್‌ಗಳ ಮಧ್ಯೆ ಗಾರ್ಡ್‌ಗಳ ಅಳವಡಿಕೆ ಪೂರ್ಣಗೊಂಡಿದೆ. ನರಹರಿಪರ್ವತದ ಬಳಿಕ ಮೂರ್‍ನಾಲ್ಕು ಪಿಲ್ಲರ್‌ಗಳ ಮಧ್ಯೆ ಕಾಂಕ್ರೀಟ್ ರಸ್ತೆ ನಿರ್ಮಾಣದ ಕೆಲಸ ಪ್ರಗತಿಯಲ್ಲಿದೆ. ಇದರ ಜತೆಗೆ ಫ್ಲೈಓವರ್‌ನ ಎರಡೂ ಭಾಗದಲ್ಲೂ ಕಾಂಕ್ರೀಟ್ ರಸ್ತೆಗೆ ಸಂಪರ್ಕಿಸುವ ದೃಷ್ಟಿಯಿಂದ ಕಾಮಗಾರಿ ನಡೆಯುತ್ತಿದೆ.
Related Articles
Advertisement
ಉದಯವಾಣಿ ಸುದಿನ ಚೆಲ್ಲಿದ ಬೆಳಕುಬಿ.ಸಿ.ರೋಡು- ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯಿಂದ ಜನತೆಗೆ ಆಗಿರುವ ತೊಂದರೆಗಳ ಕುರಿತು ಉದಯವಾಣಿ ಸುದಿನದಲ್ಲಿ ಅ. 19ರಿಂದ 30ರ ವರೆಗೆ ರಾ.ಹೆದ್ದಾರಿ ಕಾಮಗಾರಿ; ಯಾವಾಗ ಮುಗಿಸ್ತೀರಿ ಅಭಿಯಾನವನ್ನು ನಡೆಸಲಾಗಿತ್ತು. ಯಾವ ಭಾಗದಲ್ಲಿ ಏನೇನು ತೊಂದರೆಗಳಾಗಿವೆ ಎಂಬುದನ್ನು ವಿವರವಾಗಿ ತಿಳಿಸಲಾಗಿತ್ತು. ಈ ಅಭಿಯಾನಕ್ಕೆ ಓದುಗರು, ಸಾರ್ವಜನಿಕರ ವಲಯದಿಂದ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿತ್ತು. ವರದಿಗೆ ಸ್ಪಂದನೆ ನೀಡಿ ದ.ಕ.ಸಂಸದರು, ಬಂಟ್ವಾಳ, ಪುತ್ತೂರು, ಸುಳ್ಯ ಶಾಸಕರು ಹಾಗೂ ಕೆಎನ್‌ಆರ್ ಕನ್‌ಸ್ಟ್ರಕ್ಷನ್ಸ್‌ನವರು ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವ ಭರವಸೆಯನ್ನು ನೀಡಿದ್ದರು. ಅದಾದ ಬಳಿಕ ಹೆದ್ದಾರಿಯ ಹಲವು ಭಾಗಗಳ ಸಂಚಾರಕ್ಕೆ ಮುಕ್ತಗೊಂಡಿದ್ದು, ಸರ್ವೀಸ್ ರಸ್ತೆಗಳ ಕಾಂಕ್ರೀಟ್ ಕಾಮಗಾರಿಗಳು, ಫ್ಲೈಓವರ್ ಕಾಮಗಾರಿ ಭರದಿಂದ ಸಾಗುತ್ತಿದೆ. ಮತ್ತೂಂದು ಭಾಗದ ಸರ್ವೀಸ್ ರಸ್ತೆ ಕಾಂಕ್ರೀಟ್ ಕಾಮಗಾರಿಗೆ ಸಿದ್ಧತೆ
ಕಲ್ಲಡ್ಕ ಪೇಟೆಯಲ್ಲಿ ಒಂದು ಭಾಗದ ಸರ್ವೀಸ್ ರಸ್ತೆಯ ಕಾಂಕ್ರೀಟ್ ಕಾಮಗಾರಿ ಬಹುತೇಕ ಪೂರ್ಣಗೊಂಡು ಕ್ಯೂರಿಂಗ್ ಅವಧಿಯೂ ಮುಗಿದು ಪ್ರಸ್ತುತ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದೀಗ ಮತ್ತೂಂದು ಭಾಗದ ಸರ್ವೀಸ್ ರಸ್ತೆಯ ಕಾಂಕ್ರೀಟ್ ಕಾಮಗಾರಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸದ್ಯಕ್ಕೆ ಮೆಲ್ಕಾರಿನಿಂದ ಪಾಣೆಮಂಗಳೂರು ಸೇತುವೆವರೆಗಿನ ಕಾಂಕ್ರೀಟ್ ಕಾಮಗಾರಿ ಪ್ರಗತಿಯಲ್ಲಿದ್ದು, ಪೂರ್ಣಗೊಂಡ ಭಾಗದಲ್ಲಿ ಕ್ಯೂರಿಂಗ್ ಹಿನ್ನೆಲೆಯಲ್ಲಿ ಸಂಚಾರಕ್ಕೆ ಅವಕಾಶ ಸಿಕ್ಕಿಲ್ಲ.