Advertisement

‘ಬದುಕಲು ಅವಕಾಶ ಸ್ವಾತಂತ್ರ್ಯ ಸಿದ್ಧಾಂತ’

12:24 PM Aug 16, 2018 | Team Udayavani |

ಬಂಟ್ವಾಳ : ನಾವು ಬದುಕಿ ಇತರರಿಗೆ ಬದುಕಲು ಅವಕಾಶ ನೀಡುವುದು ನಿಜವಾದ ಸ್ವಾತಂತ್ರ್ಯದ ಸಿದ್ಧಾಂತ. ದೇಶದ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವುದರಲ್ಲಿ ನಮ್ಮ ಶಕ್ತಿಯ ವ್ಯಯ ಆಗಬೇಕೆಂದು ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಹೇಳಿದರು. ಅವರು ಬಿ.ಸಿ. ರೋಡ್‌ನ‌ ಮಿನಿ ವಿಧಾನ ಸೌಧದಲ್ಲಿ ನಡೆದ 72ನೇ ಸ್ವಾತಂತ್ರ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಸ್ವಾತಂತ್ರ್ಯೋತ್ಸವ ಮೆರವಣಿಗೆ ಬಳಿಕ ತಹಶೀಲ್ದಾರ್‌ ಪುರಂದರ ಹೆಗ್ಡೆ ಧ್ವಜಾರೋಹಣ ಮಾಡಿದರು. ಪೊಲೀಸ್‌, ಗೃಹರಕ್ಷಕ ದಳ, ಎನ್‌ಸಿಸಿ, ಭಾರತ ಸೇವಾದಳ, ಸ್ಕೌಟ್ಸ್‌-ಗೈಡ್ಸ್‌, ಕಬ್‌- ಗೈಡ್ಸ್‌, ಬುಲ್‌ – ಬುಲ್‌ ಹಾಗೂ ವಿವಿಧ ಪದಾತಿದಳಗಳ ಪಥ ಸಂಚಲನ, ಗೌರವ ವಂದನೆ ಸ್ವೀಕಾರ ನಡೆಯಿತು. ಬಂಟ್ವಾಳ ಉಪವಿಭಾಗ ಎಎಸ್‌ಪಿ ಸೋನಾವಣೆ ಋಷಿಕೇಶ್‌ ಭಗವಾನ್‌ ಉಪಸ್ಥಿತರಿದ್ದರು. ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್‌ ಧ್ವಜವಂದನೆ ನಡೆಸಿ ಪಥ ಸಂಚಲನದ ನೇತೃತ್ವ ವಹಿಸಿದ್ದರು. ನಗರ, ಗ್ರಾಮಾಂತರ, ಸಂಚಾರ ಪೊಲೀಸ್‌ ಉಪ ನಿರೀಕ್ಷಕರು, ಸಿಬಂದಿ ಭಾಗವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿದ್ದ ಮಂಗಳೂರು ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಡಾ| ಕುಮಾರ್‌ ಸ್ವಾಮಿ ಎಚ್‌. ಮಾತನಾಡಿ, ಸಾಮಾಜಿಕ ಬಂಧಗಳನ್ನು ಮತ್ತಷ್ಟು ಭದ್ರವಾಗಿಸುವುದು ಐಕಮತ್ಯವೇ ನಮ್ಮ ಸಾಂವಿಧಾನಿಕ ಸ್ವಾತಂತ್ರ್ಯವಾಗಿದೆ. ನಾವು ಸರಿಯಾಗಿ ಬದುಕುವುದೇ ದೇಶ ಕಾಯುವ ಸೈನಿಕರಿಗೆ ನೀಡುವ ಭಕ್ತಿಗೌರವ ಎಂದರು. ಬಂಟ್ವಾಳ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಆಬ್ಟಾಸ್‌ ಅಲಿ ಮಾತನಾಡಿದರು. ಸರ್ವೋತ್ತಮ ಸೇವಾ ಪ್ರಶಸ್ತಿ ಪುರಸ್ಕೃತ ರಾದ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಎನ್‌. ಶಿವಪ್ರಕಾಶ್‌ ಅವರನ್ನು ಶಾಸಕರು ಸಮ್ಮಾನಿಸಿದರು.

ಗಿಡಗಳ ವಿತರಣೆ 
‌ಸುರು ಕರ್ನಾಟದ ಕಾರ್ಯಕ್ರಮದಂತೆ ಶಾಲಾ ವಿದ್ಯಾರ್ಥಿಗಳಿಗೆ ಅರಣ್ಯ ಇಲಾಖೆಯಿಂದ ಗಿಡಗಳ ವಿತರಣೆ ನಡೆಯಿತು. ವಲಯ ಅರಣ್ಯಾಧಿಕಾರಿ ಸುರೇಶ್‌ ಬಿ. ಹಸುರು ಉಳಿಸಿ ಬೆಳೆಸುವ ಪ್ರಮಾಣವಚನ ಬೋಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next