Advertisement
ಆ. 5ರಂದು ತುಂಬೆ ವಳವೂರು ಇಲ್ಲಿನ ಬೋಳಂತೂರುಗುತ್ತು ಗಂಗಾಧರ ರೈ ಕಾಂಪ್ಲೆಕ್ಸ್‌ನ ಬಂಟ್ವಾಳದ ಬಂಟರ ಭವನದ ಬೆಳ್ಳೂರು ಪರಾರಿ ಆರ್. ಎನ್. ಶೆಟ್ಟಿ ಸಭಾಗೃಹದಲ್ಲಿ ಮುಂಬಯಿಯ ಪ್ರತಿಷ್ಠಿತ ಆಲ್‌ಕಾರ್ಗೊ ಲಾಜಿಸ್ಟಿಕ್ ಲಿಮಿಟೆಡ್ ಸಂಸ್ಥೆಯ ಸಹಯೋಗದೊಂದಿಗೆ ಬಂಟರ ಸಂಘ ಬಂಟವಾಳ ತಾಲೂಕು ಇದರ ಶೈಕ್ಷಣಿಕ ಮತ್ತು ಸಮಾಜ ಕಲ್ಯಾಣ ಸಮಿತಿಯಿಂದ ನಡೆದ 2018 ನೇ ವಾರ್ಷಿಕ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಲ್‌ಕಾರ್ಗೋ ಇಡೀ ಸಮಾಜಕ್ಕೆ ವಿದ್ಯಾರ್ಥಿವೇತನ ವಿತರಿಸುತ್ತಿರುವುದು ಸ್ತುತ್ಯರ್ಹ. ಜಾಗತಿಕವಾಗಿ ಭವ್ಯತೆ ಸಾರುವ ಅವರ ಕನಸಿನ ಈ ಕಾರ್ಯಕ್ರಮ ಎಲ್ಲರಿಗೂ ಮಾದರಿ. ಸಮಾಜದಲ್ಲಿ ಎಲ್ಲರೂ ಸುಶಿಕ್ಷಿತರಾಗಿ ಬಾಳುವಂತಾಗಲಿ ಎನ್ನುವುದೇ ನಮ್ಮೆಲ್ಲರ ಆಶಯವಾಗಿದೆ ಎಂದು ಶಾಂತಾರಾಮ ಶೆಟ್ಟಿ ತಿಳಿಸಿ ಲಾಲ್‌ಬಹುದ್ದೂರು ಶಾಸ್ತ್ರೀ ಅವರು ಮುಖತಃ ಕಂಡ ಆಕರ್ಷಣೀಯ ಸ್ಥಾನವಾದ ಬಂಟ್ವಾಳವನ್ನು ಉಲ್ಲೇಖೀಸಿ ಬಂಟ್ವಾಳದ ಸಾಧಕರನ್ನು ಪ್ರಶಂಸಿದರು.
Related Articles
Advertisement
ಕಾರ್ಯಕ್ರಮದಲ್ಲಿ ಶಾಸಕ ಉಳೆಪಾಡಿಗುತ್ತು ರಾಜೇಶ್ ನಾೖಕ್, ಸಂಧ್ಯಾ ವಿವೇಕ್ ಶೆಟ್ಟಿ, ನಕ್ರೆ ಸುರೇಂದ್ರ ಶೆಟ್ಟಿ, ಸವಿಸ್ತಾರ್ ಶೆಟ್ಟಿ ಉಪಸ್ಥಿತರಿದ್ದರು. ಕು| ತೃಪ್ತಿ ರೈ, ಖುಷಿ ಶೆಟ್ಟಿ, ರಿಷಾ ಎಲ್. ಶೆಟ್ಟಿ ಮತ್ತು ಶ್ರೀûಾ ಶೆಟ್ಟಿ ಪ್ರಾರ್ಥನೆಗೈದರು. ಶೈಕ್ಷಣಿಕ, ಸಾಮಾಜಿಕ ಸಮಿತಿಯ ಕಾರ್ಯಾಧ್ಯಕ್ಷ ಎಚ್. ಸಂಕಪ್ಪ ಶೆಟ್ಟಿ ಫಲಾನುಭವಿಗಳ ಪಟ್ಟಿ ವಾಚಿಸಿದರು. ಕೋಶಾಧಿಕಾರಿ ಜಗದೀಶ್ ಶೆಟ್ಟಿ ಇರಾಗುತ್ತು ಫಲಾನುಭವಿಗಳ ಯಾದಿ ವಾಚಿಸಿದರು. ಬಾಲಕೃಷ್ಣ ಆಳ್ವ ಕೋಡಾಜೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಚಂದ್ರÅಹಾಸ ಡಿ. ಶೆಟ್ಟಿ ವಂದಿಸಿದರು.
ಭಾರತೀಯರಾಗಿ ಬಾಳಿದಾಗ ಶ್ರೇಯಸ್ಸುಸಮಾಜ ಸೇವೆ ನನ್ನ ಅತಿ ಪ್ರಿಯ ವಿಚಾರವಾಗಿದೆ. ಸಮಾಜ ಸೇವೆಗೆ ಹೃದಯಶೀಲತ ಮನೋಭಾವ ಅಗತ್ಯವಿದೆ. ಇದು ಶಶಿಕಿರಣ್ ಮತ್ತು ಆರತಿ ಶೆಟ್ಟಿ ದಂಪತಿಯ ರಕ್ತದಲ್ಲೇ ಅಡಗಿದೆ. ನಾವೆಲ್ಲರೂ ಜಾತಿ ಧರ್ಮದ ಸ್ವಾರ್ಥ ಕಾಣದೆ ಮೊದಲಾಗಿ ಭಾರತೀಯರಾಗಿ ಬಾಳಿದಾಗ ಎಲ್ಲರ ಶ್ರೇಯಸ್ಸು ಸಾಧ್ಯವಾಗುವುದು. ಎಲ್ಲರೂ ಸುಖೀಯಾಗಿ ಬಾಳಬೇಕು. ನಾವೆಲ್ಲ ಮಾನವತಾ ಮನೋಭಾವ ಬೆಳೆಸಿಕೊಳ್ಳಬೇಕು. ಮಾತಾ ಪಿತರಿಗೆ ಆದರಣೀಯರಾಗಿ ಬದುಕು ಬಂಗಾರವಾಗಿಸಬೇಕು ಎಂದು ಕೆ. ಎಲ್. ಪ್ರಸಾದ್ (ಸಲಹೆಗಾರರು : ಸಿಎಸ್‌ಆರ್ ಆಲ್‌ಕಾರ್ಗೋ) ಹೇಳಿದರು. ಇದು ಕಲ್ಲು ಸಿಮೆಂಟಿನ ಭವನವಲ್ಲ. ಸಮಾಜದ ಜನತೆಯ ಪ್ರೀತಿಯ ದ್ಯೋತಕವಾಗಿದ್ದು, ಸಾಮಾಜಿಕ ಶ್ರೇಯೋಭಿವೃದ್ಧಿಯ ಹಣತೆ ಇದಾಗಿದೆ. ಜಾತಿ ಮತ ಧರ್ಮದ ಅಂತರವಿಲ್ಲದೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು ಎನ್ನುವ ಶಶಿಕಿರಣ್ ಶೆಟ್ಟಿ ಆಶಯದಂತೆ ಈ ವಿದ್ಯಾರ್ಥಿವೇತನ ವಿತರಿಸಲಾಗುತ್ತಿದೆ. ವಿದ್ಯಾರ್ಥಿ ವೇತನ ಕೊಂಡುಕೊಳ್ಳುವುದರ ಬಗ್ಗೆ ಮಾಹಿತಿ ಮತ್ತು ಅದರ ಬಗ್ಗೆ ಜವಾಬ್ದಾರಿ ಇರುವುದು ತಮ್ಮ ತಮ್ಮ ಕರ್ತವ್ಯ. ಮುಂದಿನ ದಿನಗಳಲ್ಲಿ ಸಮಾಜದ ಮಕ್ಕಳಿಗೆ ಬಡ್ಡಿ ರಹಿತ ಸಾಲವನ್ನು ನೀಡಿ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಮತ್ತು ಸಂಪೂರ್ಣ ಶಿಕ್ಷಣಕ್ಕಾಗಿ ಕನಿಷ್ಠ 100 ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸುವ ಉದ್ದೇಶ ಈ ಸಂಸ್ಥೆಗಿದೆ. ಸರ್ವ ಬಂಧುಗಳನ್ನು ಬಂಟ ಸಂಘ ಗೌರವಿಸುತ್ತಿದೆ. ಅದನ್ನೆ ಮಕ್ಕಳು ಮತ್ತು ಪಾಲಕರು ಸಮಾಜದಲ್ಲಿ ಪ್ರದರ್ಶಿಸಿ ರಾಷ್ಟ್ರೀಯ ಭಾವೈಕ್ಯತೆಗೆ ಪ್ರೇರಕರಾಗಬೇಕು
-ನಗ್ರಿಗುತ್ತು ವಿವೇಕ್ ಶೆಟ್ಟಿ
(ಅಧ್ಯಕ್ಷರು : ಬಂಟವಾಳ ಬಂಟರ ಸಂಘ) ಆಲ್‌ಕಾರ್ಗೊ ಸಂಸ್ಥೆಯ ಉದ್ದೇಶವೇ ಸದೃಢ ರಾಷ್ಟ್ರ ನಿರ್ಮಾಣ. ಸ್ವಾರ್ಥದಿಂದ ಹೊರಬಂದು ಪರಿಶ್ರಮಿಗಳಾಗಿ ಮುನ್ನಡೆದಾಗ ಜೀವನ ಸಫಲಾಗುವುದು. ಮಕ್ಕಳಲ್ಲಿ ಕನಸುಗಳೇ ಬದುಕಿಗೆ ಮಾರ್ಗದರ್ಶನ ಆಗಬೇಕು. ಇದನ್ನು ತಾವೆಲ್ಲರೂ ಪೂರ್ಣ ಗೊಳಿಸಬೇಕು. ತಮ್ಮಲ್ಲಿನ ಪ್ರತಿಭೆಗಳನ್ನು ಪ್ರಾಮಾಣಿಕವಾಗಿ ಪ್ರದರ್ಶಿಸಿ ಮುನ್ನಡೆದಾಗ ತಾವೆಲ್ಲರೂ ಸಾಧಕರಾಗುತ್ತೀರಿ
-ಡಾ| ನೀಲ್‌ರತ್ನ ಆರ್. ಶೆಂಡೆ (ಸಲಹೆಗಾರರು : ಸಿಎಸ್‌ಆರ್ ಆಲ್‌ಕಾರ್ಗೋ) ಚಿತ್ರ-ವರದಿ : ರೋನ್ಸ್ ಬಂಟ್ವಾಳ್