Advertisement

ಬಂಟ್ವಾಳ, ಬೆಳ್ತಂಗಡಿ: ಹೆಚ್ಚಿದ ಜನಸಂಚಾರ; ತೆರೆದ ಅಂಗಡಿ

11:01 PM May 04, 2020 | Sriram |

ಬಂಟ್ವಾಳ: ಬಂಟ್ವಾಳ ತಾಲೂಕಿನ ಬಹುತೇಕ ಪ್ರದೇಶಗಳಲ್ಲಿ ಹೆಚ್ಚಿನ ಜನಸಂಚಾರ ಕಂಡುಬಂತು. ತಾಲೂಕಿನ ನಗರ ಪ್ರದೇಶಗಳಲ್ಲಿ ಬಟ್ಟೆ ಮಳಿಗೆಗಳು, ಸೆಲೂನ್‌, ಬ್ಯೂಟಿ ಪಾಲರ್‌ಗಳನ್ನು ಹೊರತುಪಡಿಸಿ ಉಳಿದಂತೆ ಬಹುತೇಕ ಎಲ್ಲ ವಾಪಾರ-ವಹಿವಾಟುಗಳು ನಡೆದವು.

Advertisement

ಬಸ್‌ ಓಡಾಟವಿಲ್ಲ
ಆಟೋಗಳು ಹಾಗೂ ಖಾಸಗಿ ವಾಹನಗಳ ಸಂಚಾರ ಕಂಡುಬಂದಿದ್ದು, ಬಸ್‌ಗಳ ಓಡಾಟವಿರಲಿಲ್ಲ. ದ್ವಿಚಕ್ರ ವಾಹನಗಳ ಓಡಾಟವೂ ಕಂಡುಬಂದಿತ್ತು.

ಸರಕಾರಿ ಕಚೇರಿಗಳು ತೆರೆದಿದ್ದರೂ ಸಾರ್ವಜನಿಕರಿಗೆ ಯಾವುದೇ ಸೇವೆಗಳು ಇರಲಿಲ್ಲ. ಉಳಿದಂತೆ ಬಹುತೇಕ ಖಾಸಗಿ ಕಚೇರಿಗಳು ತೆರೆದುಕೊಂಡಿದ್ದವು.

ತಾಲೂಕಿನ ಬಿ.ಸಿ. ರೋಡ್‌, ಕೈಕಂಬ, ಫರಂಗಿಪೇಟೆ, ಮೆಲ್ಕಾರ್‌, ಕಲ್ಲಡ್ಕ, ಮಾಣಿ, ವಿಟ್ಲ, ಸಿದ್ಧಕಟ್ಟೆ, ವಾಮದಪದವು, ಪುಂಜಾಲಕಟ್ಟೆ ಮೊದಲಾದ ಪ್ರದೇಶಗಳಲ್ಲಿ ಜನಸಂಚಾರ ಕಂಡುಬಂದಿತ್ತು.

ಬಂಟ್ವಾಳ ಪೇಟೆಯ ಸೀಲ್‌ಡೌನ್‌ ಪ್ರದೇಶ ಹೊರತುಪಡಿಸಿ ಬೈಪಾಸ್‌, ಬಡ್ಡಕಟ್ಟೆಗಳಲ್ಲಿ ಅಂಗಡಿ ಮುಂಗಟ್ಟುಗಳು ತೆರೆದಿದ್ದವು.ಗ್ರಾಮೀಣ ಪ್ರದೇಶಗಳಲ್ಲೂ ಅಂಗಡಿಗಳು ತೆರೆದಿದ್ದು, ಜನ ಸಂಚಾರವೂ ಕಂಡುಬಂತು.

Advertisement

ಬೆಳ್ತಂಗಡಿ: ತಾಲೂಕಿನಲ್ಲಿ ಬೇಕರಿ, ಹೋಟೆಲ್‌ ಪಾರ್ಸೆಲ್‌, ವಾಹನ ಶೋರೂಮ್‌, ಫ್ಯಾನ್ಸಿ, ಟೈಲರಿಂಗ್‌, ಕೃಷಿ ಉಪಕರಣ ವಸ್ತುಗಳು, ಗೃಹೋಪಕರಣ ಮಳಿಗೆ, ಎಲೆಕ್ಟ್ರಾನಿಕ್ಸ್‌, ಮೊಬೈಲ್‌ ಅಂಗಡಿ ಮುಂಗಟ್ಟು, ವೈನ್‌ ಶಾಪ್‌ ತೆರೆದಿದ್ದವು. ಜನದಟ್ಟಣೆಯೊಂದಿಗೆ ವಾಹನದಟ್ಟಣೆಯೂ ಕಂಡುಬಂತು.

ಕೆಲವೆಡೆ ಚಿನ್ನಾಭರಣ, ಸ್ಟುಡಿಯೋ, ಪಾದರಕ್ಷೆ ಅಂಗಡಿಗಳನ್ನು ಪೊಲೀಸರು ಬಂದ್‌ ಮಾಡುವಂತೆ ಸೂಚಿಸಿದ್ದರು. ಬಳಿಕ ಜಿಲ್ಲಾಡಳಿತದ ಆದೇಶದಂತೆ ತಹಶೀಲ್ದಾರ್‌ ಸೂಚನೆ ಮೇರೆಗೆ ಅನಂತರ ತೆರೆಯಲಾಯಿತು.ಗ್ರಾಮೀಣ ಭಾಗ ಸಹಿತ ಪ್ರಮುಖ ಪೇಟೆಗಳಲ್ಲಿ ಮಧ್ಯಾಹ್ನ ಬಳಿಕ ಜನರ ಓಡಾಟ ವಿರಳವಾಗುತ್ತು. ಬಹುತೇಕ ಅಂಗಡಿ ಮುಂಗಟ್ಟು ಮಧ್ಯಾಹ್ನದ ಬಳಿಕ ಬಂದ್‌ ಮಾಡಿದ್ದು ಕಂಡುಬಂತು.

ಸಾರ್ವಜನಿಕರಲ್ಲಿ ಮನವಿ
ಅಗತ್ಯ ವಸ್ತುಗಳ ಪೂರೈಕೆಗೆ ಬೇರೆ ಜಿಲ್ಲೆಗಳಿಗೆ ಮತ್ತು ಬೇರೆ ರಾಜ್ಯಗಳಿಗೆ ತೆರಳುತ್ತಿರುವ ಚಾಲಕರು ಮತ್ತು ಸಹಾಯಕರು ರೋಗಾಣು ಹರಡುವ ಸಾಧ್ಯತೆ ಇರುವುದರಿಂದ ಅವರಿಗೆ ಊರಿಗೆ ಬಂದ ಸಮಯದಲ್ಲಿ ಮನೆಯಲ್ಲಿಯೇ ಇರಲು ವಿನಂತಿಸಿದೆ. ಅವರ ಮನೆಯ ಸದಸ್ಯರೂ ಇತರರೊಂದಿಗೆ ಬೆರೆಯಬಾರದು. ಸಾರ್ವಜನಿಕರು ಸಹ ಇಂತಹ ವ್ಯಕ್ತಿಗಳಿಂದ ದೂರವಿರಬೇಕು. ಇದನ್ನು ಪಾಲಿಸದೆ ಇದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್‌ ಗಣಪತಿ ಶಾಸ್ತ್ರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next