Advertisement
ಇದೊಂದು ಪಿಎಫ್‌ಐಯ ಭಯೋತ್ಪಾದಕ ಚಟುವಟಿಕೆಯ ಬಹುರಾಜ್ಯ ಹವಾಲಾ ಸಂಪರ್ಕ ಜಾಲವಾಗಿದ್ದು,ದ.ಕ. ಹಾಗೂ ಕಾಸರಗೋಡಿನ ಪಿಎಫ್‌ಐ ಕಾರ್ಯಕರ್ತರು ಭಾಗಿಯಾಗಿ ರುವ ಕುರಿತು ಎನ್‌ಐಎ ಅಧಿಕಾರಿಗಳು ದಾಖಲೆ ಸಹಿತ ಪತ್ತೆಹಚ್ಚಿದ್ದಾರೆ.
ಸುತ್ತಿದ್ದು, ಫುಲ್ವಾರಿ ಶರೀಫ್ಪ್ರಕರಣದ ತನಿಖೆ ವೇಳೆ ಹವಾಲಾ ಮೂಲಕ ಹಣ ಸಂದಾಯ ಗೊತ್ತಾಗಿತ್ತು. ನವಾಜ್, ಸಿನಾನ್‌ಗೆ ಹಣ ಹಂಚುವ ಜವಾಬ್ದಾರಿ
ವಿದೇಶದಿಂದ ಬರುತ್ತಿದ್ದ ಭಾರೀ ಮೊತ್ತದ ಹಣವನ್ನು ಪಿಎಫ್ಐ ಸಂಘಟನೆಯ ಸದಸ್ಯರ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾ ಯಿಸುವ ಜವಾಬ್ದಾರಿಯನ್ನು ನವಾಜ್ ಮತ್ತು ಮಹಮ್ಮದ್ ಸಿನಾನ್ ನಿರ್ವಹಿಸು ತ್ತಿದ್ದರು. ಆದುದರಿಂದ ಹೆಚ್ಚಿನ ಮೊತ್ತ ಇವರ ಮೂಲಕವೇ ವಿವಿಧೆಡೆ ಹೋಗುತ್ತಿತ್ತು; ಇವರೀರ್ವರು ಬೇರೆ ಬೇರೆ ವ್ಯಕ್ತಿಗಳ ಅಕೌಂಟ್‌ನಿಂದ ಹಣವನ್ನು ವರ್ಗಾಯಿಸುತ್ತಿದ್ದರು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.
Related Articles
Advertisement
ಬಂಧಿತರು ಕೆಲವೊಂದು ಶಂಕಿತ ಭಯೋತ್ಪಾದಕರ ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಇಡುತ್ತಿರುವುದು ಬೆಳಕಿಗೆ ಬಂದಿದೆ. ಬಂಧಿತರನ್ನು ಶೀಘ್ರದಲ್ಲಿ ಪಟ್ನಾದ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ನಿಷೇಧಿತ ಪಿಎಫ್‌ಐ ಸಂಘಟನೆಯ ದೇಶೀಯ, ಅಂತಾರಾಷ್ಟ್ರೀಯ ಅಕ್ರಮ ಹಣದ ದಂಧೆಯ ಕುರಿತು ಉನ್ನತ ತನಿಖೆಗೆ ಪ್ರಗತಿಯಲ್ಲಿದೆ ಎಂದು ಎನ್‌ಐಎ ವಿವರಿಸಿದೆ.
ಬಂಧಿತರುಬಂಟ್ವಾಳ ತಾಲೂಕಿನ ಪಾಣೆಮಂಗಳೂರು ನಂದಾ ವರದ ಮಹಮ್ಮದ್ ಸಿನಾನ್, ಇಕ್ಬಾಲ್, ಸಜೀಪ ಮೂಡದ ಸಫ್ರಾìಜ್ ನವಾಜ್, ಪುತ್ತೂರಿನ ಅಬ್ದುಲ್ ರಫೀಕ್ ಹಾಗೂ ಕಾಸರಗೋಡು ಜಿಲ್ಲೆಯ ಮಂಜೇ ಶ್ವರ ಸಮೀಪದ ಕುಂಜ ತ್ತೂರಿನ ಅಬೀದ್ ಸೇರಿ ಒಟ್ಟು ಐವರನ್ನು ಬಂಧಿಸಿ ಪಟ್ನಾಕ್ಕೆ ಕರೆದೊಯ್ದಿದ್ದಾರೆ.