Advertisement

ಬಂಟರ ಸಂಘ ಪೆರ್ಡೂರು: ಫೆ.11ರಂದು ಸಮುದಾಯ ಭವನ, Conventional Hall ಉದ್ಘಾಟನೆ

12:58 PM Feb 06, 2024 | Team Udayavani |

ಉಡುಪಿ: ಬಾಳೆ ಹಣ್ಣಿಗೆ ಒಲಿವ ಭಗವಂತ ನೆಂದ ಖ್ಯಾತಿಯಾದ ಪೆರ್ಡೂರು ಕದಳೀಪ್ರಿಯ ಶ್ರೀ ಅನಂತಪದ್ಮನಾಭನದ ಪುಣ್ಯ ಕ್ಷೇತ್ರದಲ್ಲಿ ಇದೀಗ ಸಂಭ್ರಮ. ಈಗಾಗಲೇ ಹತ್ತು ಹಲವಾರು ಸಮಾಜಮುಖೀ ಚಟುವಟಿಕೆಯಲ್ಲಿ ಗುರುತಿಸಿಕೊಂಡ ಬಂಟರ
ಸಂಘ ಪೆರ್ಡೂರು ಮಂಡಲದಿಂದ ಅತ್ಯಾಧುನಿಕ ಸೌಲಭ್ಯದ ಆಕರ್ಷಕ ಸಮುದಾಯ ಭವನ ನಿರ್ಮಾಣಗೊಂಡಿದ್ದು ಫೆ.11ರಂದು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಲೋಕಾರ್ಪಣೆಗೊಳ್ಳಲಿದೆ.

Advertisement

ಉಡುಪಿ ಆಗುಂಬೆ ರಾಷ್ಟ್ರೀಯ ಹೆದ್ದಾರಿ 169(ಎ)ಗೆ ತಾಗಿ ಕೊಂಡು ಪೆಡೂ೯ರಿನಲ್ಲಿ ಹಚ್ಚ ಹಸಿರಿನ ಪರಿಸರದ ನಡುವೆ 3.5 ಎಕರೆ ವಿಶಾಲವಾದ ಪ್ರದೇಶದಲ್ಲಿ ನಿಮಾ೯ಣಗೊಂಡಿರುವ ಈ ಸಮುದಾಯ ಭವನವನ್ನು ಅತ್ಯಾಧುನಿಕ ಹಾಗೂ ಗುಣಮಟ್ಟದ ಪರಿಕರಗಳನ್ನು ಬಳಸಿಕೊಂಡು ಪರಿಸರ ಸ್ನೇಹಿ ಕಟ್ಟಡವಾಗಿ ನಿರ್ಮಿಸಲಾಗಿದೆ.

2022 ಮೇ 8 ರಂದು ಮಣಿಪಾಲ ಮಾಹೆಯ ಕುಲಪತಿ ಎಚ್ .ಎಸ್ .ಬಲ್ಲಾಳ್ ಅವರ ಅಮೃತ ಹಸ್ತದಿಂದ ಶಿಲಾನ್ಯಾಸಗೊಂಡ ಕಟ್ಟಡ ಅತೀ ಕಡಿಮೆ ಅವಧಿಯಲ್ಲಿ ಪರಿಸರ ಪೂರಕವಾಗಿ ನಿಮಾ೯ಣಗೊಂಡಿದೆ.

ಈ ಸಮುದಾಯ ಭವನ ಕೇವಲ ಉಡುಪಿ ,ದ.ಕ.ಜಿಲ್ಲೆ ಮಾತ್ರವಲ್ಲದೆ ರಾಜ್ಯ ಹಾಗೂ ಹೊರ ರಾಜ್ಯದ ಜನರನ್ನು ಆಕಷಿ೯ಸುವಂತೆ ಇದೆ. ಅದ್ದೂರಿ ಮದುವೆ ನಡೆಸಲು ಅದ್ದೂರಿ ಸಮುದಾಯ ಭವನ ಹುಡುಕಿಕೊಂಡು ನಗರಗಳಿಗೆ ಹೋಗೋದು ಇನ್ನು ಬೇಡ. ಬಂಟರ ಸಂಘ ಪೆರ್ಡೂರು ಮಂಡಲದ ಸಮುದಾಯ ಭವನದಲ್ಲೇ ಸಿಗಲಿದೆ ಸಕಲ ಸೌಲಭ್ಯ. ಏಕಕಾಲದಲ್ಲಿ ಸಾವಿರಾರು ಮಂದಿ ಸೇರಿ, ಮದುವೆ ಸಮಾರಂಭ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ನಡೆಸಿ ಸಂಭ್ರಮಿಸಲು ಗ್ರಾಮೀಣ ಪ್ರದೇಶವಾದ ಪೆರ್ಡೂರಿನಲ್ಲೇ ಇದೆ ಸುಸಜ್ಜಿತ ಸಮುದಾಯಭವನ.

ಬಂಟರ ಸಂಘ ಪೆರ್ಡೂರು ಮಂಡಲ ಹೇಗಾಯಿತು
ಹಿಂದೆ ಒಂದು ಬಾರಿ ಮಂಡಲ ಪಂಚಾಯತ್‌ ವ್ಯವಸ್ಥೆ ಜಾರಿಯಾದಾಗ ಬೈರಂಪಳ್ಳಿ , 41ನೇ ಶೀರೂರು, ಬೆಳ್ಳರ್ಪಾಡಿ ಪೆರ್ಡೂರು ಗ್ರಾಮಗಳು ಸೇರಿ ಪೆರ್ಡೂರು ಮಂಡಲ ಪಂಚಾಯತ್‌ ಆಯಿತು.ಅನಂತರ ಮತ್ತೆ ಪುನಃ ಮೊದಲಿನಂತೆ ಪಂಚಾಯತ್‌ ವ್ಯವಸ್ಥೆ ಜಾರಿಯಾಗಿ ಮೂರು ಗ್ರಾಮಗಳು ಸೇರಿ ಬೆ„ರಂಪಳ್ಳಿ ಗ್ರಾಮ ಪಂಚಾಯತ್‌ ಹಾಗೂ ಪೆರ್ಡೂರು ಗ್ರಾಮ ಪಂಚಾಯತ್‌ ಆಗಿ ಪ್ರತ್ಯೇಕವಾಯಿತು. ಆದರೆ ಹಿರಿಯರು ಪೆರ್ಡೂರಿನಲ್ಲಿ 1991ರಲ್ಲಿ ಬಂಟರ ಸಂಘವನ್ನು ಪ್ರಾರಂಭಿಸಿದಾಗ ಮೊದಲಿನಂತೆ 4 ಗ್ರಾಮಗಳನ್ನು ಸೇರಿಸಿಕೊಂಡು ಬಂಟರ ಸಂಘ ಪೆರ್ಡೂರು ಮಂಡಲ ಎಂದು ನಾಮಕರಣ ಮಾಡಿದರು.

Advertisement

ಅತೀ ಸಣ್ಣ ಗ್ರಾಮ ಹಾಗೂ ಕಡಿಮೆ ಬಂಟ ಸಮಾಜದವರು ಇರುವ ಈ ಮೂರು ಗ್ರಾಮದಲ್ಲಿ ಬಂಟರ ಜನ ಸಂಖ್ಯೆ ಪೆರ್ಡೂರು ಗ್ರಾಮಕ್ಕೆ ಹೋಲಿಸಿದರೆ ಮೂರನೇ ಒಂದರಷ್ಟು ಇರಬಹುದು. ಅದ್ದರಿಂದ 3 ಗ್ರಾಮಗಳನ್ನು ಪೆರ್ಡೂರು ಬಂಟರ ಸಂಘಕ್ಕೆ ಸೇರಿಸಿಕೊಂಡಿರುವುದು ಈ ಭಾಗದ ಬಂಟರ ಅದೃಷ್ಟ ಎಂದು ಇಲ್ಲಿನ ಬಂಟ ಸಮಾಜ ಭಾಂದವರ ಅನಿಸಿಕೆ. 2018ರಲ್ಲಿ ಶಾಂತಾರಾಮ ಸೂಡ ಅವರ ಅಧ್ಯಕ್ಷತೆಯಲ್ಲಿ ನೂತನ ಕಾರ್ಯಕಾರಿ ಸಮಿತಿ ಆಯ್ಕೆಯಾಗುವಾಗ ಈ ಮೂರು ಗ್ರಾಮಗಳಿಗೂ ಪದಾಧಿಕಾರಿಗಳ ಅವಕಾಶ ಸಿಕ್ಕಿರುವುದನ್ನು ಸಮಾಜ ಭಾಂದವರು ನೆನಪಿಸಿಕೊಳ್ಳುತ್ತಾರೆ. ಇದೀಗ ನೂತನ ಸಮುದಾಯ ಭವನ ನಿರ್ಮಾಣಗೊಂಡು ಬಂಟರ ಸಂಘದ ಪ್ರಮುಖ ಭಾಗವಾಗಿ ಸಂಭ್ರಮಿಸುವ ಅವಕಾಶ ಸಿಕ್ಕಿರುವುದು ನಮ್ಮ ಭಾಗ್ಯ ಎಂದು ಈ ಭಾಗದ ಬಂಟ ಸಮಾಜ ಭಾಂದವರು ಹೇಳುತ್ತಾರೆ.

ಶ್ರೀಧರ್‌ ಕೆ. ಶೆಟ್ಟಿ ಕುತ್ಯಾರುಬೀಡು

ಸಮುದಾಯ ಭವನದ ವೈಶಿಷ್ಟ್ಯತೆ
•ಅತ್ಯಾಕರ್ಷಕ ಒಳಾಂಗಣ ವಿನ್ಯಾಸದ ಭವ್ಯ ಸಮುದಾಯ ಭವನ
•ಸುಮಾರು 900ಕ್ಕೂ ಮಿಕ್ಕಿ ಆಸನವುಳ್ಳ ಹವಾನಿಯಂತ್ರಿತ ಸಭಾಭವನ
•600ಕ್ಕೂ ಮಿಕ್ಕಿ ಜನರಿಗೆ ಆಸನ ವ್ಯವಸ್ಥೆಯ ಊಟದ ಹಾಲ್‌
•ಸಸ್ಯಹಾರ ಮತ್ತು ಮಾಂಸಹಾರಕ್ಕೆ ಪ್ರತ್ಯೇಕ ಅತ್ಯಾಧುನಿಕ ಕಿಚನ್‌ ಹಾಲ್‌
•ವಿಶಾಲವಾದ ವೇದಿಕೆ, ಬೃಹತ್‌ ಗ್ರೀನ್‌ ರೂಮ್‌
•ಉಳಿದುಕೊಳ್ಳಲು ಯೋಗ್ಯವಾದ ಆಧುನಿಕ ಹವಾನಿಯಂತ್ರಿತ ಅತಿಥಿಗೃಹ
•ದಿನದ 24 ಗಂಟೆ ಲಿಫ್ಟ್‌ ಹಾಗೂ ನೀರಿನ ವ್ಯವಸ್ಥೆ
•ಪೆರ್ಡೂರು ಬಂಟರ ಸೌಹಾರ್ದ ಸಹಕಾರಿಯ ಮುಖ್ಯ ಕಚೇರಿ
•ಭದ್ರತಾ ಸಿಬ್ಬಂದಿ ಯೊಂದಿಗೆ ವಿಶಾಲವಾದ ಪಾರ್ಕಿಂಗ್‌ ವ್ಯವಸ್ಥೆ

ಸಾಂಸ್ಕೃತಿಕ ಕಾರ್ಯಕ್ರಮ
ದಿನಾಂಕ : 11-02-2024

ಬೆಳಿಗ್ಗೆ 8.30ರಿಂದ: ಕಲರ್ ಕನ್ನಡ ಖ್ಯಾತಿಯ ತುಳುನಾಡ ಗಾನ ಗಂಧರ್ವ ಬಿರುದಾಂಕಿತ ಪುತ್ತೂರು ಜಗದೀಶ್‌ ಆಚಾರ್ಯ ಮತ್ತು ಬಳಗದವರಿಂದ ಭಕ್ತಿ ಸಂಗೀತ ರಸಮಂಜರಿ.

ಸಮಯ : ಮಧ್ಯಾಹ್ನ 2.30ರಿಂದ ಯಕ್ಷಧ್ರುವ ಪಟ್ಲ ಸತೀಶ್‌ ಶೆಟ್ಟಿ ಹಾಗೂ ಸುರೇಶ್‌ ಶೆಟ್ಟಿ ಶಂಕರನಾರಾಯಣ ಇವರ ದಕ್ಷ ಸಾರಥ್ಯದಲ್ಲಿ ತೆಂಕು ಮತ್ತು ಬಡಗುತಿಟ್ಟಿನ ಹೆಸರಾಂತ ಕಲಾವಿದರ ಕೂಡುವಿಕೆಯಿಂದ ಪಾಂಚಜನ್ಯ -ಅಸಿಕಾ ಪರಿಣಯ ಅಮೋಘ ಯಕ್ಷಗಾನ ಪ್ರದರ್ಶನ.

Advertisement

Udayavani is now on Telegram. Click here to join our channel and stay updated with the latest news.

Next