Advertisement
ನಿಷೇಧಿಸಲು ಯಾರಪ್ಪನಿಗೆ ತಾಕತ್ತಿದೆ?: ಫಡ್ನವೀಸ್ಬೆಳಗಾವಿ: ಕರ್ನಾಟಕದಲ್ಲಿ ಬಜರಂಗ ದಳ ನಿಷೇಧಿಸಲು ಯಾರಪ್ಪನಿಗೆ ತಾಕತ್ತಿದೆ. ಹನುಮ ಲಂಕೆಯನ್ನು ಸುಟ್ಟಂತೆ ಜನರು ಅಧಿಕಾರಕ್ಕೆ ಬರಲು ಹವಣಿಸುತ್ತಿರುವ ಕಾಂಗ್ರೆಸ್ ಕನಸಿಗೆ ಬೆಂಕಿ ಹಚ್ಚಬೇಕು ಎಂದು ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಹೇಳಿದರು. ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಜರಂಗ ದಳ ಸಂಘಟನೆಯನ್ನು ನಿಷೇಧಿಸಲು ನಿಮ್ಮಪ್ಪನಿಗೆ ತಾಕತ್ತು ಇದೆಯಾ? ಬಜರಂಗ ದಳ ಬ್ಯಾನ್ ಮಾಡಿ ಹಿಂದುತ್ವದ ಮೇಲೆ ಏಕೆ ದ್ವೇಷ ಸಾಧಿಸುತ್ತಿದ್ದೀರಿ? ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಆರೆಸ್ಸೆಸ್ ಮೇಲೆ ನಿರ್ಬಂಧ ಹಾಕಲು ಮುಂದಾಗಿ ಅಧಿಕಾರ ಕಳೆದುಕೊಂಡಿದ್ದಾರೆ. ಈಗ ಬಜರಂಗ ದಳ ಮೇಲೆ ನಿರ್ಬಂಧ ಹೇರುವುದೆಂದರೆ ಏನರ್ಥ? ಕಾಂಗ್ರೆಸ್‌ಗೆ ಬಜರಂಗ ಬಲಿಯ ತಾಕತ್ತು ತೋರಿಸಬೇಕು ಎಂದರು.
ಹುಬ್ಬಳ್ಳಿ: ಎಸ್‌ಡಿಪಿಐ -ಪಿಎಫ್‌ಐ ಕಪಿಮುಷ್ಟಿಯಲ್ಲಿ ಕಾಂಗ್ರೆಸ್ ಪಕ್ಷ ಇದ್ದು, ಅವುಗಳ ಒತ್ತಡಕ್ಕೆ ಮಣಿದು ಮತ ತುಷ್ಟೀ ಕರಣಕ್ಕೆ ಬೇಕಾದ ರೀತಿಯಲ್ಲಿ ವರ್ತಿಸು ತ್ತಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ನವರ ಕಾರಣದಿಂದಲೇ ಎಸ್‌ಡಿಪಿಐ-ಪಿಎಫ್‌ಐ ಬಲವರ್ಧನೆಗೊಂಡಿವೆ. ಎಸ್‌ಡಿಪಿಐ ಬಿಜೆಪಿಯ ಬಿ ಟೀಂ ಆಗಿದ್ದರೆ ನಾವೇಕೆ ಪಿಎಫ್‌ಐ ನಿಷೇಧಿಸುತ್ತಿದ್ದೆವು. ಎಸ್‌ಡಿಪಿಐ, ಪಿಎಫ್‌ಐ ಬೇರೆಯಲ್ಲ, ಎರಡೂ ಒಂದೇ. ಶ್ರೀರಾಮ-ಆಂಜನೇಯ ನಡುವೆ ಇರುವ ಸಂಬಂಧವೇ ಬಜರಂಗ ದಳ ಹಾಗೂ ಆಂಜನೇಯನಿಗೂ ಇರುವ ಸಂಬಂಧವಾಗಿದೆ. ಕಾಂಗ್ರೆಸ್‌ನವರು ಏನೇನೋ ಹೇಳಿ ಜನರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದರು. ಕೀಳು ಹೇಳಿಕೆಗಳೇ ಕಾಂಗ್ರೆಸ್‌ಗೆ ಮುಳುವು: ವಿಜಯೇಂದ್ರ
ಮುಧೋಳ: ದೇಶದಲ್ಲಿ ಅಸ್ತಿತ್ವ ಕಳೆದುಕೊಂಡಿರುವ ಕಾಂಗ್ರೆಸ್ ಬಜರಂಗ ದಳ ಸಂಘಟನೆ ನಿಷೇಧಿಸುವ ಮಾತುಗಳನ್ನಾಡುವ ಮೂಲಕ ರಾಜ್ಯದಲ್ಲೂ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ದೇಶ ಭಕ್ತ ಹಾಗೂ ದೇಶದ ಬಗ್ಗೆ ಚಿಂತನೆ ಮಾಡುವ ಒಂದು ಸಂಘಟನೆಯನ್ನು ಪಿಎಫ್‌ಐನೊಂದಿಗೆ ತುಲನೆ ಮಾಡುತ್ತಿರುವ ಕಾಂಗ್ರೆಸ್ ತನ್ನ ಮೂರ್ಖತನದ ಪರಮಾವ ಧಿ ತೋರಿಸುತ್ತಿದೆ. ವಿನಾಶಕಾಲೆ ವಿಪರೀತ ಬುದ್ಧಿ ಎನ್ನುವ ರೀತಿಯಲ್ಲಿ ಕಾಂಗ್ರೆಸ್‌ಗೆ ತನ್ನ ಹೇಳಿಕೆಗಳೇ ಮುಳುವಾಗಲಿವೆ. ಕಾಂಗ್ರೆಸ್ ಅ ಧಿಕಾರಕ್ಕೆ ಬಂದರೆ ತಾನೆ ಬಜರಂಗ ದಳ ನಿಷೆೇ ಧಿಸುವ ವಿಚಾರ ಮುನ್ನೆಲೆಗೆ ಬರುವುದು. ರಾಜ್ಯದಲ್ಲಿ ಕಾಂಗ್ರೆಸ್ ಅ ಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ ಎಂದರು.
Related Articles
Advertisement
ಪ್ರಣಾಳಿಕೆಯಲ್ಲಿ ಬಜರಂಗ ದಳವನ್ನು ಬ್ಯಾನ್ ಮಾಡುತ್ತೇನೆಂದು ಹೇಳುವ ಮೂಲಕ ಆಂಜನೇಯನ ಬಾಲಕ್ಕೆ ಕಾಂಗ್ರೆಸ್‌ನವರು ಬೆಂಕಿ ಇಟ್ಟಿದ್ದಾರೆ. ಲಂಕೆ ಸುಟ್ಟಂತೆ ಆಂಜನೇಯ ಕಾಂಗ್ರೆಸ್ ಅನ್ನು ಸುಡುತ್ತಾನೆ. ಡಿ.ಕೆ. ಶಿವಕುಮಾರ್ ಅವರು ಮುನೇಶ್ವರನ ಬೆಟ್ಟದಲ್ಲಿ ಶಿಲುಬೆ ಮಾಡಲು ಹೊರಟಿದ್ದರು. ಈಗ ಆಂಜನೇಯನ ವಿಚಾರಕ್ಕೆ ಬಂದಿದ್ದಾರೆ. – ಆರ್. ಅಶೋಕ್
ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ಬಜರಂಗ ದಳವನ್ನು ರದ್ದುಪಡಿಸುವುದಾಗಿ ಹೇಳಿಕೆ ನೀಡಿದ್ದಾರೆ. ರದ್ದಾಗಿರುವ ಪಿಎಫ್ಐ ಸಂಘಟನೆಯೊಂದಿಗೆ ಬಜರಂಗ ದಳ ಸಂಘಟನೆಯನ್ನು ಓಲೈಕೆ ಮಾಡುತ್ತಿರುವುದು ನೋಡಿದರೆ ಇವರಿಗೆ ನಾಚಿಕೆಯಾಗಬೇಕು. – ಡಾ| ಸಿ.ಎನ್. ಅಶ್ವತ್ಥನಾರಾಯಣ