Advertisement

ಎಐಸಿಸಿ ಅಧ್ಯಕ್ಷ ಖರ್ಗೆ ಹತ್ಯೆಗೆ ಸಂಚಿನ ವಿಡಿಯೋ: ನಟಿ ರಮ್ಯಾ ಆಘಾತ

04:17 PM May 06, 2023 | Team Udayavani |

ವಿಜಯಪುರ: ಕಾನೂನು ಬಾಹಿರ ಕೃತ್ಯ ಮಾಡುವ ಯಾವುದೇ ಸಂಘಟನೆ ಮೇಲೆ ಕ್ರಮ ಕೈಗೊಳ್ಳಲು ಕಾನೂನುಗಳಿವೆ. ಹೀಗಾಗಿ ಸಂಘಟನೆಗಳ ನಿಷೇಧ ಎನ್ನುವುದೇ ತಪ್ಪು. ಭಜರಂಗದ ನಿಷೇಧ ಎಂಬುದೂ ಸರಿಯಲ್ಲ ಎಂದು ಕಾಂಗ್ರೆಸ್ ಸ್ಟಾರ್ ಕ್ಯಾಂಪೇನರ್, ಮಾಜಿ ಸಂಸದೆ ರಮ್ಯಾ ಅಭಿಪ್ರಾಯ ಪಟ್ಟರು.

Advertisement

ಶನಿವಾರ ನಗರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರ ಹತ್ಯೆಗೆ ಮಣಿಕಂಠ ರಾಠೋಡ ಮಾತನಾಡಿರುವ ಆಡಿಯೋ ವೈರಲ್ ಆಗಿದೆ ಎನ್ನುವುದು ನಿಜಕ್ಕೂ ಅಪಾಯಕಾರಿ. ರಾಜಕೀಯ ಇಷ್ಟು ಕೀಳು ಮಟ್ಟಕ್ಕೆ ಹೋಗಿರುವುದು ಅಘಾತಕಾರಿ ಸಂಗತಿ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ಅವರ ಬೆಂಗಳೂರಿಗೆ ಬಂದಿರುವುದು ಒಳ್ಳೆಯದೇ, ಅವರಿಗೆ ಬೆಂಗಳೂರಿನ ವಾಸ್ತವಿಕ‌ ಸುಸ್ಥಿತಿ ಅರಿವಿಗೆ ಬಂದಿದೆ. ರಾಜಧಾನಿ ಜನ ಅನುಭವಿಸುವ ಕಷ್ಟಗಳು, ಗುಂಡಿಬಿದ್ದ ರಸ್ತೆಗಳ ದರ್ಶನವಾಗಲಿದೆ ಎಂದು ಛೇಡಿಸಿದರು.

ಡಬಲ್ ಎಂಜಿನ್ ಸರ್ಕಾರವಲ್ಲ, ಟ್ರಬಲ್ ಎಂಜಿನ್ ಸರ್ಕಾರ. ಪ್ರಧಾನಿ ಮೋದಿ ಮತ್ತವರ‌ ಕೇಂದ್ರ ಸಚಿವರ ತಂಡ ಕರ್ನಾಟಕ ರಾಜ್ಯದಲ್ಲೇ ಬಿಡುಬಿಟ್ಟು, ಚುನಾವಣೆ ಪ್ರಚಾರದಲ್ಲಿ ಓಡಾಡಲು ಕಾರಣವೇ ರಾಜ್ಯ ಸರ್ಕಾರದ ವೈಫಲ್ಯ ಎಂಬುದು ಸಾಬೀತಿಗೆ ಸಾಕ್ಷಿ ಎಂದು ಹರಿ ಹಾಯ್ದರು.

ಕಾವೇರಿ ತೀರ್ಪಿನ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವರಾಗಿ ಎಂ.ಬಿ.ಪಾಟೀಲ ದೆಹಲಿಗೆ ಬಂದಿದ್ದರು. ಓರ್ವ ಸಚಿವರಾಗಿ ಅವರು ದೆಹಲಿಗೆ ಬರುವ ಅಗತ್ಯವೇ ಇರಲಿಲಿಲ್ಲ. ಆದರೆ ರಾಜ್ಯದ ನೀರು, ನೀರಾವರಿ ವಿಷಯದಲ್ಲಿ ಪಾಟೀಲ ಅವರು ಹೊಂದಿರುವ ಕಾಳಜಿ, ಆಸಕ್ತಿಯೇ ಇದಕ್ಕೆ ಸಾಕ್ಷಿ. ಹೀಗಾಗಿ ಓರ್ವ ಸ್ಟಾರ್ ಕ್ಯಾಂಪೇನರ್ ಆಗಿ ಅವರ ಬಬಲೇಶ್ವರ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದು, ಸಂತಸ ತಂದಿದೆ ಎಂದರು.

Advertisement

ನನ್ನ ತಂದೆಗೆ ಎಂ.ಬಿ.ಪಾಟೀಲ ಅತ್ಮೀಯರೂ ಅಗಿದ್ದರು. ಸಂಸದೆಯಾಗಿದ್ದಾಗ ನನ್ನ ಗೆಲುವಿಗೆ ಶ್ರಮಿಸಿದ್ದರು. ಇಂಥ ಎಲ್ಲ ಕಾರಣಗಳು ಅವರ ಪರ ಪ್ರಚಾರ ಮಾಡಲು ಸಂತಸ ತಂದಿದೆ ಎಂದರು.

ಸುಮಲತಾ ರಾಜಕೀಯ ನಿಲುವು, ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಲ್ಲ ಎಂದ ರಮ್ಯಾ, ತಾವು ಚುನಾವಣಾ ಸಕ್ರೀಯ ರಾಜಕಾರಣಕ್ಕೆ ಬರುವ ಕುರಿತು ಇನ್ನೂ ನಿರ್ಧರಿಸಿಲ್ಲ ಎಂದು ಸಮಜಾಯಿಷಿ ನೀಡಿದರು.

ಬಬಲೇಶ್ವರ ಕ್ಷೇತ್ರದಲ್ಲಿ ನೀರಾವರಿ ಮಾಡಿರುವುದರಿಂದ ದ್ರಾಕ್ಷಿ, ಕಬ್ಬು ಬೆಳೆಯುತ್ತಿರುವ ಅಲ್ಲಿನ ಜನರಲ್ಲಿ ಕಾಂಗ್ರೆಸ್ ಪರ ತುಂಬಾ ಉತ್ಸಾಹ ಕಂಡು ಬರುತ್ತಿದೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಎಂ.ಬಿ.ಪಾಟೀಲ ಆಯ್ಕೆ ಖಚಿತವಾಗಿದೆ ಎಂದರು.

ಬಬಲೇಶ್ವರ ಬಿಜೆಪಿ ಅಭ್ಯರ್ಥಿ ತಮ್ಮ ಮಕ್ಕಳ ಕೈಗೆ ಗನ್ ಕೊಟ್ಟಿದ್ದಾರೆ. ಭವಿಷ್ಯದಲ್ಲಿ ಕ್ಷೇತ್ರಕ್ಕೆ ಇಂಥವರು ಆಯ್ಕೆಯಾದರೆ ಕ್ಷೇತ್ರದ ಜನರ ಮಕ್ಕಳ‌ ಕೈಗೆ ಗನ್, ಮದ್ಯದ ಬಾಟಲಿ ನೀಡುತ್ತಾರೆ. ಅಲ್ಲಿನ ಜನರ ಮಕ್ಕಳ ಕೈಗೆ ಪೆನ್ನು, ಪುಸ್ತಕ ಕೊಡುವವರು ಬೇಕಿದ್ದಾರೆಯೇ ಹೊರತು, ಗನ್ ಕೊಡುವವರಲ್ಲ ಎಂದು ಜನ ಹೇಳುತ್ತಿದ್ದಾರೆ ಎಂದು ವಿಶ್ಲೇಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next