Advertisement

5.40 ಕೋಟಿ ಮೌಲ್ಯದ ಅಮಾನ್ಯ ನೋಟು ವಶ

11:28 AM Sep 26, 2017 | Team Udayavani |

ಬೆಂಗಳೂರು: ಅಮಾನ್ಯಗೊಂಡಿರುವ 500 ರೂ. ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ಕೊಂಡೊಯ್ಯುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಮಹಾಲಕ್ಷ್ಮಿ ಲೇಔಟ್‌ ಠಾಣೆ ಪೊಲೀಸರು, 5.40 ಕೋಟಿ ರೂ. ಮೌಲ್ಯದ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

Advertisement

ಜಯನಗರದ ಮೊಹಮ್ಮದ್‌ ಅಸ್ಲಂ (38), ಬಳ್ಳಾರಿಯ ಕಾಳಿಂಗಪ್ಪ (39) ಮತ್ತು ಕಾರು ಚಾಲಕ ಮಂಜುನಾಥ್‌ (28) ಬಂಧಿತರು. ಮಹಾಲಕ್ಷ್ಮೀ ಲೇಔಟ್‌ ಈಜುಕೊಳದ ಬಳಿಯ ಸುಲಭ ಶೌಚಾಲಯದ ಬಳಿ ಅಮಾನ್ಯಗೊಂಡಿರುವ ನೋಟುಗಳನ್ನು ಕಾರಿನಲ್ಲಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು, ಕಾರನ್ನು ತಡೆದು ಪರಿಶೀಲಿಸಿದಾಗ 5.40 ಕೋಟಿ ರೂ. ಮೌಲ್ಯದ ಅಮಾನ್ಯ ನೋಟುಗಳು ಪತ್ತೆಯಾಗಿವೆ.

ಹಣ ಬದಲಾವಣೆಗಾಗಿ ನೋಟುಗಳನ್ನು ಸಾಗಿಸುತ್ತಿದ್ದ ಬಗ್ಗೆ ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದುಬಂದಿದೆ. ಹಣ ಯಾರಿಗೆ ಸೇರಿದ್ದು, ಎಲ್ಲಿಗೆ ಕೊಂಡೊಯ್ಯುತ್ತಿದ್ದರು ಎಂಬ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next