Advertisement

ವೀಕ್ಷಕರ ಮನ ಗೆದ್ದ ”ಬಣ್ಣ”ಕಿರು ಚಿತ್ರ

09:59 AM Aug 18, 2019 | keerthan |

ಉಡುಪಿ: ಸದ್ಗುರು ಕ್ರಿಯೇಷನ್ಸ್ ಲಾಂಛನದಡಿಯಲ್ಲಿ ಸದಾನಂದ ಉಡುಪಿ ನಿರ್ದೇಶನದ ”ಬಣ್ಣ” ಕಿರುಚಿತ್ರ ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ವೀಕ್ಷಕರ ಮನಗೆಲ್ಲುವಲ್ಲಿ ಸಫಲವಾಗಿದೆ.

Advertisement

ಒಂದು ಸಾಮಾನ್ಯ ಹಳ್ಳಿಯಲ್ಲಿಯೂ ಒಂದು ಚಿಕ್ಕ ಘಟನೆ ಹೇಗೆ ಕೋಮುವಾದದ ಬಣ್ಣಕ್ಕೆ ತಿರುಗುತ್ತದೆ, ಈಗಿನ ಯುವ ಜನಾಂಗ ಆ ಘಟನೆಗೆ ಯಾವ ರೀತಿ ಸ್ಪಂದಿಸುತ್ತಾರೆ. ಹಿಂದಿನ ಪೀಳಿಗೆ ಮತ್ತು ಇಂದಿನ ಪೀಳಿಗೆ ಆ ಘಟನೆಯನ್ನು ನೋಡುವ ದೃಷ್ಟಿಕೋನ, ಊರಿನ ಹಿರಿಯ ಮಾಸ್ಟರ್ ಆ ಯುವ ಜನಾಂಗವನ್ನು ತಿದ್ದುವ ರೀತಿ ಎಲ್ಲಾ ಸೊಗಸಾಗಿ ಮೂಡಿ ಬಂದಿದೆ.

ಮನ ಮುಟ್ಟುವ ಕಥಾ ಹಂದರ, ಬಿಗಿಯಾದ ಚಿತ್ರಕಥೆ, ಅರ್ಥಗರ್ಭಿತ ಸಂಭಾಷಣೆ, ದಕ್ಷ ನಿರ್ದೇಶನ ಹಾಗೂ ಮನೋಜ್ಞ ಅಭಿನಯ ಚಿತ್ರದ ಪ್ರಮುಖ ಅಂಶವಾಗಿದೆ.

ಕುರುಡಣ್ಣನ ಪಾತ್ರದಲ್ಲಿ ಭಾಸ್ಕರ್ ಮಣಿಪಾಲ್ ಇವರ ಮನೋಜ್ಞ ಅಭಿನಯ, ಮೇಷ್ಟ್ರ ಪಾತ್ರದಲ್ಲಿ ಪ್ರಭಾಕರ್ ಕುಂದರ್ ರವರ ನೈಜವೆನಿಸುವ ನಟನೆ ಚಿತ್ರದ ಪ್ಲಸ್ ಪಾಯಿಂಟ್ . ಇನ್ನುಳಿದಂತೆ ರಂಗ ಭೂಮಿ ಶ್ರೀಪಾದ್ ಹೆಗಡೆ , ಸಂದೀಪ್ ಭಕ್ತ , ವಿನೋದ್ ಕುಮಾರ್, ರಾಜೇಶ್ ಮಾಬಿಯಾನ್ , ನಿರಂಜನ್ ಬೇಕಲ್ ಹಾಗೂ ಯುವ ಕಲಾವಿದರು ಉತ್ತಮವಾಗಿ ನಟಿಸಿದ್ದಾರೆ.

ಶುಭಂ,ಸಂಭ್ರಮ್ ಸಹೋದರರು ನಿರ್ಮಾಪಕರಾಗಿರುವ ಈ ಕಿರುಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ- ನಿರ್ದೇಶನದ ಜವಾಬ್ದಾರಿ ಹೊತ್ತಿರುವುದು ಸದಾನಂದ ಉಡುಪಿ.

Advertisement

30 ನಿಮಿಷಗಳ ಈ ಕಿರುಚಿತ್ರವನ್ನು ಪೂರ್ತಿಯಾಗಿ ನೋಡಿದಲ್ಲಿ ಮಾತ್ರ ಈ ಚಿತ್ರದ ಅರ್ಥ ತಿಳಿಯುವುದು ಎಂಬುದು ನಿರ್ದೇಶಕರ ಅಭಿಪ್ರಾಯ. ಕಿರುಚಿತ್ರ ಪ್ರಿಯರು ಯುಟ್ಯೂಬ್ ನಲ್ಲಿ ಈ ಕಿರು ಚಿತ್ರ ವೀಕ್ಷಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next