Advertisement

Bankruptcy; ವಿಶ್ವವಿಖ್ಯಾತ ಸ್ಟಾರ್ಟ್‌ಅಪ್‌ ವೀವರ್ಕ್‌ ದಿವಾಳಿ

12:41 AM Nov 08, 2023 | Team Udayavani |

ವಾಷಿಂಗ್ಟನ್‌: 2010ರಲ್ಲಿ ಪ್ರಾರಂಭವಾಗಿ ವಿಶ್ವವಿಖ್ಯಾತವಾಗಿದ್ದ ವೀವರ್ಕ್‌ ಸ್ಟಾರ್ಟ್‌ ಅಪ್‌ ಕಂಪೆನಿ ಈಗ ದಿವಾಳಿಯಾಗಿದೆ. ನ್ಯೂಯಾರ್ಕ್‌ ಮೂಲದ ಕಂಪೆನಿ, ತಾನು ದಿವಾಳಿಯಾಗಿದ್ದೇನೆಂದು ಮಂಗಳವಾರ ನ್ಯೂಜೆರ್ಸಿಯಲ್ಲಿ ಘೋಷಿಸಿಕೊಂಡಿದೆ. ಸದ್ಯ ಅದು ಕಾರ್ಯಾಚರಣೆ ಮಾಡ ಬಹುದಾದರೂ, ಸಾಲ ತೀರಿಸಲು ದಾರಿ ಹುಡುಕಿಕೊಳ್ಳಬೇಕಿದೆ. ಒಂದು ಕಾಲದಲ್ಲಿ 47 ಬಿಲಿಯನ್‌ ಡಾಲರ್‌ ಮೌಲ್ಯ ಹೊಂದಿ, ಭಾರೀ ಹೆಸರು ಮಾಡಿದ್ದ ಸ್ಟಾರ್ಟ್‌ಅಪ್‌ ಈಗ ಅಧಃ ಪತನಕ್ಕೀಡಾಗಿರುವುದು ದೊಡ್ಡ ಪ್ರಶ್ನೆಯಾಗಿದೆ.

Advertisement

ವೀವರ್ಕ್‌ ಇತರ ಕಂಪೆನಿಗಳಿಗೆ ಕಚೇರಿಯನ್ನು ಒದಗಿಸಿಕೊಡುವ ಒಂದು ಕಂಪೆನಿ. ಈ ರೀತಿಯ ವಿಶೇಷ ದಾರಿ ಹುಡುಕಿಕೊಂಡು ಅದು ದೊಡ್ಡ ಹೆಸರು ಮಾಡಿತ್ತು. ಆದರೆ ಕೊರೊನಾ ದಾಳಿ ಮಾಡಿದ್ದೇ ತಡ, ಉದ್ಯೋಗಿಗಳು ಕಚೇರಿ ತೊರೆದು ಮನೆ ಸೇರಿಕೊಂಡರು. ಅಲ್ಲಿಗೆ ಕಂಪೆನಿ ನಷ್ಟದ ಹಾದಿ ತುಳಿಯ ತೊಡ ಗಿತು. ಕೊರೊನಾ ಮುಗಿದ ಮೇಲೂ ಬಹುತೇಕರು ಮನೆಯಿಂದಲೇ ಕೆಲಸ ಮುಂದುವರಿಸಿದರು. ಅದರಿಂದ ಚೇತ ರಿಸಿ ಕೊಳ್ಳಲು ಅದಕ್ಕೆ ಆಗುತ್ತಲೇ ಇಲ್ಲ.

ವೀವರ್ಕ್‌ನ ಮುಖ್ಯ ಸಮಸ್ಯೆಯೆಂದರೆ ಅದು ಇತರರಿಗೆ ಕೊಡುವ ಕಚೇರಿ ಸ್ಥಳವನ್ನು ತಾನೇ ಸ್ವತಃ ಬಾಡಿಗೆಗೆ ಪಡೆದಿರುತ್ತದೆ! ಈ ಖರ್ಚನ್ನು ಅದಕ್ಕೆ ನಿಭಾಯಿಸಲು ಆಗದೇ ವಿದಾಯ ಹೇಳಿದೆ. ಆದರೆ ವೀವರ್ಕ್‌ನ ಭಾರತೀಯ ಶಾಖೆ ತಾನು ಲಾಭ ದಲ್ಲಿದ್ದೇನೆ. ತಾನು ಜಾಗತಿಕ ಶಾಖೆ ಯಿಂದ ಪ್ರತ್ಯೇಕವಾಗಿದ್ದೇನೆ, ಆ ಹೆಸರನ್ನು ಬಳಸಿಕೊಂಡು ಮುಂದು ವರಿಯಲು ತನಗೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next