Advertisement

ಮುಂಬಯಿ ಶೇರು ಪೇಟೆ ಜಗ್ಗಿದ ಬ್ಯಾಂಕ್‌ ಶೇರುಗಳು; 99 ಅಂಕ ನಷ್ಟ

04:41 PM Feb 27, 2018 | udayavani editorial |

ಮುಂಬಯಿ : ದೇಶದ ಬ್ಯಾಂಕಿಂಗ್‌ ರಂಗದಲ್ಲಿ ಬಹುಕೋಟಿ ವಂಚನೆ ಹಗರಣಗಳು ಸುನಾಮಿಯನ್ನೇ ಎಬ್ಬಿಸಿರುವ ಕಾರಣ ಬ್ಯಾಂಕ್‌ ಶೇರುಗಳು ನೆಲಕಚುತ್ತಿರುವ ಪರಿಣಾಮವಾಗಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಮಂಗಳವಾರದ ವಹಿವಾಟನ್ನು 99.36 ಅಂಕಗಳ ನಷ್ಟದೊಂದಿಗೆ 34,346.39 ಅಂಕಗಳ ಮಟ್ಟಕ್ಕೆ ಕುಸಿದು ಕೊನೆಗೊಳಿಸಿತು.

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 28.30 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 10,554.30 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. 

ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,028 ಶೇರುಗಳು ಮುನ್ನಡೆ ಕಂಡವು; 1,698 ಶೇರುಗಳು ಹಿನ್ನಡೆಗೆ ಗುರಿಯಾದವು; 201 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.

ಭಾರ್ತಿ ಏರ್‌ಟೆಲ್‌, ಹೀರೋ ಮೋಟೋ ಕಾರ್ಪ್‌ ಮತ್ತು ಡಾ.ರೆಡ್ಡಿ ಲ್ಯಾಬೋರೇಟರಿ ಶೇರುಗಳು ಟಾಪ್‌ ಗೇನರ್‌ ಎನಿಸಿಕೊಂಡವು; ಎಸ್‌ಬಿಐ, ಎಕ್ಸಿಸ್‌ ಬ್ಯಾಂಕ್‌ ಮತ್ತು ಅಂಬುಜಾ ಸಿಮೆಂಟ್ಸ್‌ ಶೇರುಗಳು ಟಾಪ್‌ ಲೂಸರ್‌ ಎನಿಸಿಕೊಂಡವು. 

Advertisement

Udayavani is now on Telegram. Click here to join our channel and stay updated with the latest news.

Next