Advertisement

UPA ದುರಾಸೆಯಿಂದ ಬ್ಯಾಂಕಿಂಗ್‌ಗೆ ಹಾನಿ: ಮೋದಿ

08:08 PM Jul 22, 2023 | Team Udayavani |

ನವದೆಹಲಿ: ಯುಪಿಎ ಸರ್ಕಾರದ ಅವಧಿಯಲ್ಲಿ ರಾಷ್ಟ್ರೀಯ ಹಿತಾಸಕ್ತಿಯನ್ನು ಕಡೆಗಣಿಸಿದ್ದು, ಅಧಿಕಾರದ ದುರಾಸೆಯಿಂದಾಗಿ, ಬ್ಯಾಂಕಿಂಗ್‌ ಕ್ಷೇತ್ರ ವಿನಾಶದತ್ತ ಸಾಗಿತ್ತು. ಆದರೆ, ಎನ್‌ಡಿಎ ಸರ್ಕಾರ ಬ್ಯಾಂಕಿಂಗ್‌ ಕ್ಷೇತ್ರವನ್ನು ಉತ್ತಮ ಆರ್ಥಿಕಸ್ಥಿತಿಗೆ ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Advertisement

ಉದ್ಯೋಗ ಮೇಳದಲ್ಲಿ ಹೊಸದಾಗಿ ನೇಮಕವಾದ 70 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ನೇಮಕ ಪತ್ರ ವಿತರಿಸಿ ಮಾತನಾಡಿದ ಅವರು, “ಕೆಲವು ಪ್ರಭಾವಿ ನಾಯಕರು ಮತ್ತು ಕುಟುಂಬಗಳ ಆತ್ಮೀಯರಿಗೆ ಸಾವಿರಾರು ಕೋಟಿ ರೂ. ಸಾಲ ನೀಡಲಾಯಿತು ಮತ್ತು ಪಡೆದವರಿಗೆ ಆ ಸಾಲಗಳನ್ನು ಹಿಂತಿರುಗಿಸುವ ಉದ್ದೇಶವೇ ಇರಲಿಲ್ಲ’ ಎಂದರು. “ಹಿಂದಿನ ಸರ್ಕಾರದ ಅತಿದೊಡ್ಡ ಹಗರಣಗಳಲ್ಲಿ “ಫೋನ್‌ ಬ್ಯಾಂಕಿಂಗ್‌’ ಒಂದಾಗಿದೆ. ಇದು ಬ್ಯಾಂಕಿಂಗ್‌ ವ್ಯವಸ್ಥೆಯನ್ನೇ ಹಾಳು ಮಾಡಿತು. ಬಿಜೆಪಿ ನೇತೃತ್ವದ ಸರ್ಕಾರ ಕೈಗೊಂಡ ಕ್ರಮಗಳ ಪರಿಣಾಮ ಇಂದು ಭಾರತ ಪ್ರಬಲ ಬ್ಯಾಂಕಿಂಗ್‌ ಕ್ಷೇತ್ರಗಳನ್ನು ಹೊಂದಿರುವ ರಾಷ್ಟ್ರಗಳ ಪೈಕಿ ಒಂದಾಗಿದೆ’ ಎಂದು ಪ್ರಧಾನಿ ಮೋದಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next