Advertisement

ಸಿಎಂಗೆ ಕಂಟಕ ಬಾರದಂತೆ ಲಲಿತಾ ತ್ರಿಪುರ ಸುಂದರಿ ಹೋಮ

03:33 PM Aug 15, 2021 | Team Udayavani |

ಬಂಕಾಪುರ: ಸಿಎಂ ಬಸವರಾಜ ಬೊಮ್ಮಾಯಿಅವರ ಸ್ಥಾನಕ್ಕೆ ಯಾವುದೇ ಕಂಟಕ ಬಾರದೇಅಧಿ ಕಾರ ಪೂರ್ಣಗೊಳಿಸಲೆಂದು,ಲೋಕಕಲ್ಯಾಣ ಹಾಗೂ ಕೊರೊನಾನಿವಾರಣೆಗೆ ಪ್ರಾರ್ಥಿಸಿ ನಾರಾಯಣಪುರಗ್ರಾಮದ ವಿರಕ್ತಮಠದ ಆವರಣದಲ್ಲಿ ಲಲಿತಾತ್ರಿಪುರ ಸುಂದರಿ ಹೋಮ-ಹವನಾದಿನಡೆಸಲಾಯಿತು.

Advertisement

ಅನಂತರ ಮಾತನಾಡಿದ ಬೈಲಹೊಂಗಲದಶ್ರೀ ಗುರುರಾಜ ಭಟ್ಟರು, ತ್ರಿಪುರಸುಂದರಿ ಹೋಮ-ಹವನಾದಿಗಳನ್ನುಕೈಗೊಳ್ಳುವುದರಿಂದ ದೇಶಕ್ಕೆ ಎದುರಾದ ಕಂಟಕಗಳು ದೂರವಾಗಲಿವೆ. ಸುಖ,ಸಂತೋಷ, ಸಮೃದ್ಧಿಗೆ ಕಾರಣವಾಗಲಿದೆ.ಹೋಮದಲ್ಲಿ ಭಾಗವಹಿಸುವುದರಿಂದಹಾಗೂ ತ್ರಿಪುರ ಸುಂದರಿ ಲಲಿತಾಸಹಸ್ರನಾಮ, ಅಷ್ಟಕಂ, ಲಲಿತಾ ತ್ರಿಶತಿ ಸ್ತೋತ್ರಪಠಿಸುವುದರಿಂದ ಕಷ್ಟಕಾರ್ಪಣ್ಯ ದೂರವಾಗಿಇಷ್ಟಾರ್ಥ ಸಿದ್ಧಿಸಲಿವೆ ಎಂದರು.

ತ್ರಿಪುರ ಸುಂದರಿ ರೂಪಕ್ಕೆ ಶಿವನೇ ಮಾರುಹೋಗಿ ಧರ್ಮಪತ್ನಿಯನ್ನಾಗಿಸಿಕೊಂಡ.ತ್ರಿಪುರ ಸುಂದರಿ ಶಿವನೊಂದಿಗೆ ಸೇರಿವಿಶ್ವವನ್ನೇ ಸೃಷ್ಟಿಸಿದಳು. ದುಷ್ಟರನ್ನು ಸಂಹರಿಸಿಶಿಷ್ಟರನ್ನು ರಕ್ಷಿಸುವ ಶಕ್ತಿ ಈ ಜಗದಲ್ಲಿ ತ್ರಿಪುರಸುಂದರಿಯಿಂದ ಮಾತ್ರ ಸಾಧ್ಯ ಎಂದರು.ಮುಖಂಡ ರವಿ ಬಂಕಾಪುರ ಮಾತನಾಡಿ,ಮನುಷ್ಯ ಹಣದ ವ್ಯಾಮೋಹಕ್ಕೆ ಒಳಗಾಗಬಾರದು. ಶಾಂತಿ, ನೆಮ್ಮದಿ ಕಳೆದುಕೊಳ್ಳದೇತಾನು ದುಡಿದ ಹಣದಲ್ಲಿ ಸ್ವಲ್ಪ ಭಾಗವನ್ನುಧರ್ಮ ಕಾರ್ಯಗಳಿಗೆ ಮೀಸಲಿಟ್ಟರೆ ಶಾಂತಿ,ನೆಮ್ಮದಿ ಲಭಿಸಿ ಆರೋಗ್ಯಪೂರ್ಣ ಜೀವನನಡೆಸಬಹುದಾಗಿದೆ ಎಂದರು.

ಪ್ರಾಥಃಕಾಲಶಂಭುಲಿಂಗ ಶಿವಾಚಾರ್ಯರಿಂದ ಪ್ರಾಣಪ್ರತಿಷ್ಠಾಪನೆ, ದ್ವಾದಶ ಜ್ಯೋತಿರ್ಲಿಂಗ ಹಾಗೂವಿರಕ್ತಮಠದ ಲಿಂ|ಗುರುಲಿಂಗ ಸ್ವಾಮೀಜಿಗಳಕತೃì ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರಬಿಲ್ವಾರ್ಚನೆ, ನಾಮಾವಳಿ ಸೇರಿದಂತೆ ವಿವಿಧಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.ವಿಶ್ವನಾಥ ಕಂಬಾಳಿಮಠ, ಶ್ರೀನಿವಾಸಕುಲಕರ್ಣಿ, ಸುಭಾಸ ಮಸಳಿ, ವೀರಭದ್ರಯ್ಯಹಿರೇಮಠ, ಶರಣ ಬಂಕಾಪುರ, ಪ್ರಶಾಂತಮಸಳಿ, ಕರಬಸಯ್ಯ ಕಡ್ಲಿಮಠ, ಮಂಜಪ್ಪಬೂದಿಹಾಳ, ರಾಜೇಶ್ವರಿ ಬಂಕಾಪುರ,ಶಶಿಕಲಾ ಕಂಬಾಳಿಮಠ, ದೀಪಾ ಕುಲಕರ್ಣಿಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next