Advertisement

ಮೈ ರೋಮಾಂಚನಗೊಳಿಸಿದ ಹೋರಿ ಬೆದರಿಸುವ ಸ್ಪರ್ಧೆ

05:46 PM Jun 29, 2018 | Team Udayavani |

ಬಂಕಾಪುರ: ಪಟ್ಟಣದಲ್ಲಿ ಕಾರಹುಣ್ಣಿಮೆ ನಿಮಿತ್ತ ಶ್ರೀ ರೇವಣಶಿದ್ದೇಶ್ವರ ಯುವಕ ಸಂಘದ ಆಶ್ರಯದಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆಗೆ ಶ್ರೀ ಕೆಂಡದಮಠದ ಶಿದ್ದಯ್ಯಸ್ವಾಮೀಜಿ ಪೂಜೆಸಲ್ಲಿಸುವ ಮೂಲಕ ಚಾಲನೆ ನೀಡಿದರು. ರೈತರು ಕಾರಹುಣ್ಣಿಮೆ ಅಂಗವಾಗಿ ತಮ್ಮ ತಮ್ಮ ದನ ಕರುಗಳಿಗೆ ಮೈ ತೊಳೆದು ವಿವಿಧ ಬಣ್ಣಗಳಿಂದ ಅಲಂಕರಿಸಿ, ಬಣ್ಣ ಬಣ್ಣದ ರಿಬ್ಬನ್ನು ಬಲೂನುಗಳಿಂದ ಸಿಂಗರಿಸಿದ್ದರು. ಹೋರಿಗಳ ಕೊರಳಿಗೆ ಕೊಬ್ಬರಿ ಗಿಟಗ, ಕೊಡುಬಳೆ, ಚಕ್ಕುಲಿ ಸರವನ್ನು ಕಟ್ಟಿ ಸ್ಪರ್ಧೆಗಳಲ್ಲಿ ತೊಡಗಿಸಿ ಸಂಭ್ರಮಿಸಿದರು. ಯುವಕರು ಗುಂಪು ಸ್ಪರ್ಧೆಗಿಳಿದ ಹೋರಿಗಳ ಕೊರಳಲ್ಲಿರುವ ಕೊಬ್ಬರಿ ಸರವನ್ನು ಹರಿಯಲು ಹರಸಾಹಸ ಪಡುತ್ತಿರುವುದು ನೋಡುಗರನ್ನು ರೋಮಾಂಚನಗೊಳಿಸಿತು. ಸರ್ಧೆ ವೀಕ್ಷಿಸಲು ಬಂದ ಜನಸಮೂಹ ಕೇಕೆ, ಶಿಳ್ಳೆ, ಚಪ್ಪಾಳೆ ಹಾಕುವ ಮೂಲಕ ಸ್ಪರ್ಧೆಗಿಳಿದ ಹೋರಿಗಳನ್ನು ಹಾಗೂ ಕೊಬ್ಬರಿ ಹರಿಯುವ ಯುವಸಮೂಹವನ್ನು ಹುರುದುಂಬಿಸಿದರು.

Advertisement

ರೋಮಾಂಚನಕಾರಿಯಾದ ಈ ಸ್ಪರ್ಧೆಯಲ್ಲಿ ಸುತ್ತ ಮುತ್ತಲಿನ ಊರುಗಳ 100 ಕ್ಕಿಂತಲೂ ಹೆಚ್ಚು ಹೋರಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ನೋಡುಗರ ಕಣ್ಮನ ತಣಿಸಿದವು. ಉತ್ತಮ ದೇಹದಾರ್ಡ್ಯತೆ ಮತ್ತು ಕೊಬ್ಬರಿಗಿಟಗವನ್ನು ಕಾಯ್ದುಕೊಂಡ ಹಾನಗಲ್‌ ಕಾ ರಾಜಾ ಹೋರಿ ಪ್ರಥಮ ಬಹುಮಾನ ಪಡೆದರೆ, ಶಂಕ್ರಿಕೊಪ್ಪದ ಸುನಾಮಿ ಬುಲ್‌ ಹೋರಿ ದ್ವೀತಿಯ ಸ್ಥಾನ ಪಡೆಯಿತು. ತೃತೀಯ ಸ್ಥಾನವನ್ನು 225 ಸಂಖ್ಯೆಯ ಟಗರು ಹೋರಿಗೆ ಲಭಿಸಿತು. ಕಮಿಟಿಯವರು ಪ್ರಥಮ ಬಹುಮಾನವಾಗಿ ಅರ್ಧ ತೊಲಿ ಬಂಗಾರ, ದ್ವಿತೀಯ ಬಹುಮಾನವಾಗಿ 24” ಎಲ್‌ಇಡಿ ಟಿವ್ಹಿ, ತೃತೀಯ ಬಹುಮಾನ ರಾಜಾ ರಾಣಿ ತಿಜೋರಿ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಸಮಾದಾನಕರ ಬಹುಮಾನವನ್ನು ವಿತರಿಸಿದರು.

ಜೀವನದ ಹಂಗು ತೊರೆದು ಸಾಹಸ ಮೇರೆದು ಕೊಬ್ಬರಿ ಸರವನ್ನು ಹರಿದ ಯುವಕ ಹೇಮಂತ ಬ್ಯಾಡಗಿಯವರಿಗೆ ಬೆಳ್ಳಿ ಕಡೆ ನೀಡಿ ಸನ್ಮಾನಿಸಿದರೆ, ರಾಜಾ ಹುಲಿ ಬಾಯ್‌, ಹಿಂದೂ ಹುಲಿ ಬಾಯ್‌ ಗಳಿಗೆ ದ್ವೀತಿಯ, ತೃತೀಯ ಬಹುಮಾನ ನೀಡಿ ಕಮೀಟಿಯವರು ಸನ್ಮಾನಿಸಿದರು. ಕಮೀಟಿ ಸದಸ್ಯರಾದ ಮಂಜುನಾಥ ಈರಪ್ಪನವರ, ಬಿರೇಶ ಸವೂರ, ಶಿವಣ್ಣ ಈರಪ್ಪನವರ, ಲಿಂಗರಾಜ ಹಳವಳ್ಳಿ, ಯಲ್ಲಪ್ಪ ದ್ವಾಸಿ, ನಿಂಗಪ್ಪ ಮಾಯಣ್ಣವರ, ಮಲ್ಲಪ್ಪ ಕಟಗಿ, ಗುರುಶಾಂತಪ್ಪ ದ್ವಾಸಿ, ರಾಜು ಹುಲಗೂರ, ಯಲ್ಲಪ್ಪ ದ್ವಾಸಿ, ಶಿವಾನಂದ ಮಾಗಿ, ಶಂಕ್ರಪ್ಪ ಹಳವಳ್ಳಿ, ನಾಗರಾಜ ಹುಲಗೂರ, ಮೈಲಾರಿ ಗುರಮ್ಮನವರ, ಚನ್ನಪ್ಪ ಹಳವಳ್ಳಿ, ಬಸವರಾಜ ಮರಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next