Advertisement

ಇಂದು ಬ್ಯಾಂಕ್‌, ನಾಳೆ ಅಂಚೆ ಮುಷ್ಕರ

08:20 AM Aug 23, 2017 | Harsha Rao |

ಬೆಂಗಳೂರು/ನವದೆಹಲಿ: ಕೇಂದ್ರ ಸರ್ಕಾರದ ಪ್ರಸ್ತಾವಿತ ಬ್ಯಾಂಕಿಂಗ್‌ ಸುಧಾರಣಾ ಕ್ರಮಗಳನ್ನು ಖಂಡಿಸಿ ಎಸ್‌ಬಿಐ, ಐಡಿಬಿಐ ಸೇರಿ 21 ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಮಂಗಳವಾರ ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿವೆ. ಇದರ ಜತೆಯಲ್ಲೇ ಬುಧವಾರ ಅಂಚೆ ಉದ್ಯೋಗಿಗಳ ಸಂಘಟನೆ ಕೂಡ ಮುಷ್ಕರಕ್ಕೆ ಕರೆ ನೀಡಿದೆ.

Advertisement

ಸುಮಾರು 9 ಬ್ಯಾಂಕ್‌ ನೌಕರರ ಸಂಘಗಳ ಒಕ್ಕೂಟವಾದ ಯುನೈಟೆಡ್‌ ಫೋರಂ ಆಫ್ ಬ್ಯಾಂಕ್‌ ಯೂನಿಯನ್ಸ್‌ (ಯುಎಫ್ಬಿಯು) ಈ ಮುಷ್ಕರಕ್ಕೆ ಕರೆನೀಡಿದ್ದು, 10 ಲಕ್ಷಕ್ಕೂ ಅಧಿಕ ನೌಕರರು ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ.
“ಮಂಗಳವಾರ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳನ್ನು ಮುಚ್ಚುವ ಕಾರಣ ಯಾವುದೇ ವಹಿವಾಟು ನಡೆಯುವುದಿಲ್ಲ,’ ಎಂದು ಅಖೀಲ ಭಾರತ ಎಸ್‌ಬಿಐ ಅಧಿಕಾರಿಗಳ ಸಮನ್ವಯ ಸಮಿತಿ ಅಧ್ಯಕ್ಷ ಎಂ.ಎಸ್‌. ಜೈಶಂಕರ್‌ ಹೇಳಿದ್ದಾರೆ.
ಬ್ಯಾಂಕುಗಳ ಖಾಸಗೀಕರಣಕ್ಕೆ ವಿರೋಧ, ಉದ್ದೇಶಪೂರ್ವಕ ಸುಸ್ತಿದಾರರ ವಿರುದಟಛಿ ಕ್ರಿಮಿನಲ್‌ ಕ್ರಮ, ಅನುತ್ಪಾದಕ ಆಸ್ತಿ(ಎನ್‌ಪಿಎ)ಗಳ ವಾಪಸ್‌ಗೆ ಸಂಬಂಧಿಸಿ ಸಂಸದೀಯ ಸಮಿತಿಯ ಶಿಫಾರಸುಗಳ ಅನುಷ್ಠಾನ, ಬ್ಯಾಂಕ್ಸ್‌ ಬೋರ್ಡ್‌
ಬ್ಯೂರೋಗಳ ಸ್ಥಗಿತ, ನೋಟುಗಳ ಅಮಾನ್ಯದ ವೇಳೆ ಆಗಿರುವ ವೆಚ್ಚ ಹಾಗೂ ಜನಧನದ ಪ್ರಚಾರಕ್ಕೆ ಮಾಡಿದ ವೆಚ್ಚಗಳನ್ನು ಸರ್ಕಾರವೇ ಭರಿಸಬೇಕು ಎಂಬಿತ್ಯಾದಿ ಆಗ್ರಹಗಳನ್ನು ಮುಂದಿಟ್ಟಿಕೊಂಡು ಬ್ಯಾಂಕುಗಳು ಮುಷ್ಕರ ನಡೆಸುತ್ತಿವೆ.

ಇದೇ ವೇಳೆ, ಎಚ್‌ಡಿಎಫ್ಸಿ, ಆ್ಯಕ್ಸಿಸ್‌, ಐಸಿಐಸಿಐನಂಥ ಖಾಸಗಿ ವಲಯದ ಬ್ಯಾಂಕುಗಳು ಎಂದಿನಂತೆ ಕಾರ್ಯಾಚರಿಸಲಿವೆ.

ನಾಳೆ ಅಂಚೆ ಕಚೇರಿ ಇರಲ್ಲ: ಕೇಂದ್ರ ಸರ್ಕಾರದ ಅಡಿಯಲ್ಲೇ ಬರುವ ಅಂಚೆ ಕಚೇರಿ ಉದ್ಯೋಗಿಗಳು ಕೂಡ ಬುಧವಾರ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಗ್ರಾಮೀಣ್‌ ಡಕ್‌ ಸೇವಕ್ಸ್‌ ಕಮಿಟಿ ವರದಿಯಲ್ಲಿನ ಸೌಲಭ್ಯಗಳನ್ನು ನೀಡುವಂತೆ ಆಗ್ರಹಿಸಿ, ರಾಷ್ಟ್ರೀಯ ಅಂಚೆ ಉದ್ಯೋಗಿಗಳ ಸಂಘಟನೆ ಈ ಮುಷ್ಕರಕ್ಕೆ ಕರೆ ನೀಡಿದೆ. ಸುಮಾರು 4 ಲಕ್ಷ ಮಂದಿ ನೌಕರರು ಈ
ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next