ಬೈಲಹೊಂಗಲ: ಕಳೆದ ಮಾ. 06 ರಂದು ಸಮೀಪದ ಸವದತ್ತಿ ತಾಲೂಕಿನ ಡಿಸಿಸಿ ಬ್ಯಾಂಕಿನಲ್ಲಿ ಕೊಟ್ಯಾಂತರ ಹಣವನ್ನು ದೊಚಿದ ಕಳ್ಳರನ್ನು ಬೆಳಗಾವಿ ಪೋಲಿಸರು ಬಂಧಿಸಿದ್ದಾರೆ.
ಡಿಸಿಸಿ ಬ್ಯಾಂಕ್ ಕ್ಲರ್ಕ್ ತೋರಣಗಟ್ಟಿ ಗ್ರಾಮದ ಬಸವರಾಜ ಸಿದ್ಧಿಂಗಪ್ಪ ಹುಣಶಿಕಟ್ಟಿ ,ಯರಗಟ್ಟಿಯ ಸಂತೋಷ ಕಾಳಪ್ಪ ಕಂಬಾರ, ಜೀವಾಪೂರದ ಗಿರೀಶ ಯಮನಪ್ಪ ಬಂಧಿತ ಅರೋಪಿಗಳು.
ಬಂಧಿತರಿಂದ ಕಳುವಾದ 4,20,98,400/-ರೂ ಹಾಗೂ 1,63,72,220/-ರೂ ಕಿಮ್ಮತ್ತಿನ 3 ಕೆ ಜಿ 149.26 ಗ್ರಾಮ ಬಂಗಾರದ ಆಭರಣಗಳನ್ನು ಜಪ್ತ ಮಾಡಿದ್ದು, ಪ್ರಕರಣದಲ್ಲಿ ಉಪಯೋಗಿಸಿದ ಕಾರು , ಬೈಕ್ ನ್ನು ಪೋಲಿಸರು ವಶ ಪಡಿಸಿಕೊಂಡಿದ್ದಾರೆ.
ಆರೋಪಿಗಳು ಮಾರ್ಚ್ 6 ರಂದು ರಾತ್ರಿ ನಕಲಿ ಕೀಲಿಗಳನ್ನು ಬಳಿಸಿ ಡಿ.ಸಿ.ಸಿ ಬ್ಯಾಂಕ ಮುರಗೋಡದ ಸ್ಟಾಂಗ ರೂಮ ಮತ್ತು ಲಾಕರ್ ಗಳನ್ನು ತಗೆದು 4,37,59,000/-ರೂ. ಹಣವನ್ನು ಮತ್ತು 1,63,72,220/-ರೂ ಕಿಮ್ಮತ್ತಿನ 3 ಕೆ. ಜಿ 148,504 ಗ್ರಾಮ ಬಂಗಾರದ ಆಭರಣಗಳನ್ನು ಕಳುವು ಮಾಡಿದ್ದರು.
ಬೆಳಗಾವಿ ಪೊಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್ ಪಿ ಮಹಾನಿಂಗ ನಂದಗಾಂವಿ, ರಾಮದುರ್ಗ ಡಿಎಸ್ ಪಿ ರಾಮನಗೌಡ ಹಟ್ಟಿ ನೇತೃತ್ವದಲ್ಲಿ ಮುರಗೋಡ ಪಿಎಸ್ ಐ ಮೌನೇಶ್ವರ ಮಾಲಿ ಪಾಟೀಲ, ಬೈಲಹೊಂಗಲ ಸಿಪಿಐ ಯು.ಎಚ್ ಸಾತೇನಹಳ್ಳಿ , ಪಿಎಸ್ ಐ ಗಳಾದ ವಿರೇಶ ದೊಡಮನಿ, ಪ್ರವೀಣ ಗಂಗೋಳ, ಶಿವಾನಂದ ಗುಡಗನಟ್ಟಿ, ಶಿವಾನಂದ ಕಾರಜೋಳ, ಬಸಗೌಡ ಎಸ್ ನೇರ್ಲಿ ಚಾಂದಬೀ ಗಂಗಾವತಿ , ಠಾಣೆಯ ಸಿಬ್ಬಂದಿ ಸೇರಿದಂತೆ 4 ತಂಡಗಳನ್ನು ರಚಿಸಿ ಪ್ರಕರಣವನ್ನು ಪತ್ತೆ ಮಾಡಿ ಪ್ರಕರಣದಲ್ಲಿ ಭಾಗಿ ಆದ 3 ಜನ ಆರೋಪಿಗಳನ್ನು ಬಂಧಿಸಲಾಗಿದೆ.