ಜನರು ಮನೆಯಲ್ಲಿದ್ದುಕೊಂಡೇ ತಮ್ಮೆಲ್ಲಾ ಕೆಲಸ ಕಾರ್ಯಗಳನ್ನು ಪೂರ್ತಿಗೊಳಿಸಲು ಇಚ್ಛಿಸುತ್ತಿದ್ದಾರೆ. ಹಿಂದೆಂದಿಗಿಂತಲೂ ಅಂತರ್ಜಾಲ ಇಂದು ಹೆಚ್ಚು ಬಳಸಲ್ಪಡುತ್ತಿದೆ. ಅಂತರ್ಜಾಲದಲ್ಲಿ ಫೋನ್ ಬಿಲ್, ಕರೆಂಟ್ ಬಿಲ್ ಕಟ್ಟುವ ಸೌಕರ್ಯವಿದ್ದರೂ, ಹಲವರು ಕಚೇರಿಗೆ ಹೋಗಿಯೇ ಬಿಲ್ ಪಾವತಿ ಮಾಡುತ್ತಿದ್ದರು. ಈ ದಿನಗಳಲ್ಲಿ ಆವರೂ ಅಂತರ್ಜಾಲದ ಮೊರೆ ಹೋಗುತ್ತಿದ್ದಾರೆ. ಹೀಗಿರುವಾಗಲೇ, ಮನೆಯಲ್ಲಿ ಕುಳಿತೇ ಬ್ಯಾಂಕಿನಲ್ಲಿ ಸೇವಿಂಗ್ಸ್ ಖಾತೆ ತೆರೆಯುವ “ಎಸ್‌ಬಿಐ ಇನ್‌ಸ್ಟಾ ಸೇವಿಂಗ್ ಬ್ಯಾಂಕ್’ ಅಕೌಂಟ್ ಯೋಜನೆಯನ್ನು ಎಸ್‌ಬಿಐ ಮರಳಿ ತಂದಿದೆ. ಇದು, ಆಧಾರ್ ಆಧರಿಸಿ ತಕ್ಷಣ ತೆರೆಯಲ್ಪಡುವ ಡಿಜಿಟಲ್ ಬ್ಯಾಂಕ್ ಖಾತೆ.
ಖಾತೆ ತೆರೆಯುವುದು ಹೇಗೆ?: ಎಸ್‌ಬಿಐನ ಡಿಜಿಟಲ್ ಬ್ಯಾಂಕಿಂಗ್ ಪ್ಲಾಟ್ ಫಾರ್ಮ್ ಆಗಿರುವ ಯೋನೊ ಮೂಲಕ, ಈ ನೂತನ ಸವಲತ್ತನ್ನು ಪಡೆಯಬಹು ದಾಗಿದೆ. ಯೋನೊ ಮೊಬೈಲ್ ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡಿಕೊಂಡಿರದಿದ್ದರೆ, ಆಂಡ್ರಾಯ್ಡ್ ಬಳಕೆದಾ ರರು ಅದನ್ನು ಪ್ಲೇ ಸ್ಟೋರಿನಿಂದ ಡೌನ್ ಲೋಡ್ ಮಾಡಿಕೊಳ್ಳಬೇಕು.
ನಂತರ ಆಧಾರ್ ಕಾರ್ಡ್ ನಂಬರ್ ಮತ್ತು ಪ್ಯಾನ್ ಕಾರ್ಡ್ ನಂಬರ್ ಅನ್ನು ಎಂಟ್ರಿ ಮಾಡಿ, ಓಟಿಪಿಯನ್ನು ನಮೂದಿಸ ಬೇಕು. ಓಟಿಪಿ ಪರಿಶೀಲಿಸಲ್ಪಟ್ಟ ನಂತರ ವೈಯಕ್ತಿಕ ಮಾಹಿತಿ ಯನ್ನು ನೀಡಬೇಕು. ಹೀಗೆ ಖಾತೆ ತೆರೆಯಲ್ಪಡುತ್ತದೆ. ಈ ಖಾತೆ ಕೂಡಲೆ ಖಾತೆ ಆಕ್ಟಿವೇಟ್ ಆಗುವುದು. ಅಲ್ಲದೆ ಆಗಿಂದಾಗಲೇ ಬ್ಯಾಂಕ್ ವ್ಯವಹಾರಗಳನ್ನು ಖಾತೆದಾರರು ಕೈಗೊಳ್ಳಬಹುದು.
ಎಟಿಎಂ ಕಾರ್ಡ್ ಸಿಗುತ್ತದೆ: ಎಸ್‌ಬಿಐ ಇನ್‌ಸ್ಟಾ ಸೇವಿಂಗ್ಸ್ ಖಾತೆ, ಸಂಪೂರ್ಣ ಪೇಪರ್‌ಲೆಸ್ ಅನುಭವವನ್ನು ಖಾತೆದಾರರಿಗೆ ಒದಗಿಸಲಿದೆ. ಈ ರೀತಿಯಾಗಿ ಖಾತೆ ತೆರೆದವರಿಗೆ ಬ್ಯಾಂಕು ರುಪೇ ಎಟಿಎಂ/ ಡೆಬಿಟ್ ಕಾರ್ಡನ್ನು ನೀಡುತ್ತದೆ. ಎಸ್ಸೆಮ್ಮೆಸ್ ಅಲರ್ಟ್, ಎಸ್‌ಬಿಐ ಕ್ವಿಕ್ ಮಿಸ್ಡ್ ಕಾಲ್ ಬ್ಯಾಂಕಿಂಗ್ ಮುಂತಾದ ಸೇವೆಗಳು ಇನ್‌ಸ್ಟಾ ಖಾತೆದಾರರಿಗೂ ದೊರೆಯಲಿವೆ. ಎಸ್‌ಬಿಐ ಇನ್‌ಸ್ಟಾ ಖಾತೆದಾರರು ಯಾವಾಗ ಬೇಕಾದರೂ ಹತ್ತಿರದ ಬ್ಯಾಂಕ್ ಶಾಖೆಗೆ ತೆರಳಿ ಪೂರ್ಣ ಪ್ರಮಾಣದ ಕೆ.ವೈ.ಸಿ. ಖಾತೆಯಾಗಿ ಬದಲಾಯಿಸಿಕೊಳ್ಳಬಹುದಾಗಿದೆ.
ಎಸ್‌ಬಿಐ ಸೇವಿಂಗ್ಸ್ ಖಾತೆದಾರರು ಡಿಜಿಟಲ್ ಬ್ಯಾಂಕಿಂಗ್ ಸೇವೆಗಳಾದ ಡಿಮ್ಯಾಟ್, ಮ್ಯೂಚುವಲ್ ಫಂಡ್, ಇನ್ಷೊರೆನ್ಸ್, ಸ್ಮಾಲ್ ಸೇವಿಂಗ್ಸ್ ಸ್ಕೀಮುಗಳಾದ ಪಬ್ಲಿಕ್ ಪ್ರಾವಿಡೆಂಟ್ ಫಂಡ್, ಸುಕನ್ಯಾ ಸಮೃದ್ಧಿ ಯೋಜನ ಮುಂತಾದ ಸೇವೆಗಳನ್ನು ಪಡೆದುಕೊಳ್ಳಬಹುದು. ಎಸ್‌ಬಿಐ, ಸೇವಿಂಗ್ಸ್ ಖಾತೆಯಲ್ಲಿ 1 ಲಕ್ಷ ಮತ್ತು ಅದಕ್ಕೂ ಹೆಚ್ಚಿನ ಮೊತ್ತವನ್ನು ಇಟ್ಟವರಿಗೆ ವಾರ್ಷಿಕ ಶೇ. 2.7 ಬಡ್ಡಿ ನೀಡುತ್ತದೆ.