Advertisement

ಬ್ಯಾಂಕ್‌  ಆಫ್ ಬರೋಡ  ನೂತನ ಕಚೇರಿ ಉದ್ಗಾಟನೆ

08:19 PM Jun 28, 2021 | Team Udayavani |

ಮೈಸೂರು:ನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿಹೊಸದಾಗಿಆರಂಭಿಸಿರುವಬ್ಯಾಂಕ್‌ ಆಫ್ ಬರೋಡ ಬ್ಯಾಂಕಿನ ಪ್ರಾದೇಶಿಕ ಕಚೇರಿಯನ್ನು ಬೆಂಗಳೂರುವಲಯ ವ್ಯವಸ್ಥಾಪಕ ಸುಧಾಕರ್‌ ಡಿ.ನಾಯಕ್‌ ಎ. ಅವರು ಉದ್ಘಾಟಿಸಿದರು.

Advertisement

ನಗರದ ಸರಸ್ವತಿ ಪುರಂನಲ್ಲಿನ ಬೇಕ್‌ ಪಾಯಿಂಟ್‌ ಬಳಿ, ವಿಶ್ವಮಾನವ ಜೋಡಿರಸ್ತೆಗೆ ಹೊಂದಿಕೊಂಡಂತಿರುವ ಕಟ್ಟಡದಲ್ಲಿ ಬ್ಯಾಂಕ್‌ ಆಫ್ ಬರೋಡ ಬ್ಯಾಂಕಿನಪ್ರಾದೇಶಿಕ ಕಚೇರಿ ಆರಂಭಿಸಲಾಗಿದ್ದು, ಭಾನುವಾರ ಬೆಳಗ್ಗೆ ವಲಯ ವ್ಯವಸ್ಥಾಪಕ ಸುಧಾಕರ್‌ ಡಿ. ನಾಯಕ್‌ ಎ. ಅವರು ಕಟ್ಟಡ ಉದ್ಘಾಟಿಸಿ, ಮೈಸೂರು ಪ್ರಾದೇಶಿಕಕಚೇರಿ ಮುಖ್ಯಸ್ಥ ಆರ್‌.ಮುರಳಿ ಕೃಷ್ಣ ಅವರಿಗೆ ಶುಭ ಹಾರೈಸಿದರು.

ಈ ಹಿಂದೆ ನಗರದ ನಜರ್‌ಬಾದ್‌ನಲ್ಲಿದ್ದ ಬ್ಯಾಂಕ್‌ ಆಫ್ ಬರೋಡ ಪ್ರಾದೇಶಿಕಕಚೇಯನ್ನು ಮತ್ತಷ್ಟು ಮೇಲ್ದರ್ಜೆಗೇರಿಸುವ ಉದ್ದೇಶದಿಂದ ಸರಸ್ವತಿಪುರಂ ಬೇಕ್‌ಪಾಯಿಂಟ್‌ಗೆ ಸ್ಥಳಾಂತರಿಸಿದ್ದು ಭಾನುವಾರ ಉದ್ಘಾಟನೆಗೊಂಡಿದೆ ಎಂದು ಪ್ರಾದೇಶಿಕ ಕಚೇರಿ ಮುಖ್ಯಸ್ಥ ಆರ್‌.ಮುರಳಿ ಕೃಷ್ಣ ಹೇಳಿದರು.

ಕಾರ್ಯಕ್ರಮದ ಅಂಗವಾಗಿ 20ಕ್ಕೂ ಹೆಚ್ಚು ಪೌರಕಾರ್ಮಿಕ ಮಹಿಳೆಯರಿಗೆಫ‌ುಡ್‌ಕಿಟ್‌ ವಿತರಣೆ ಮಾಡಲಾಯಿತು. ಈ ವೇಳೆ ಮೈಸೂರು ಪ್ರಾದೇಶಿಕ ಕಚೇರಿಜನರಲ್‌ ಮ್ಯಾನೇಜರ್‌ ಧೀರೇಂದ್ರ ಸೇರಿದಂತೆ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next