Advertisement
ಸೋಮವಾರ ನಗರದ ಡಾ| ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ನಡೆದ ಬ್ಯಾಂಕ್‌ನ 95ನೇ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬ್ಯಾಂಕ್‌ದಿಂದ ಪ್ರಸಕ್ತವಾಗಿ ಹೊಸ ಈಗಾಗಲೇ ರೈತರಿಗೆ ಬಡ್ಡಿ ರಹಿತ ಬೆಳೆ ಸಾಲ ವಿತರಿಸಲಾಗಿದ್ದು, ಸಾಲ ಮನ್ನಾದ ರೈತರಿಗೂ ಈಗ ಬೆಳೆಸಾಲ ವಿತರಿಸಲು ಮುಂದಾಗಲಾಗಿದೆ. ಮುಂದಿನ ದಿನಗಳಲ್ಲಿ ಹೊಲ ಸುಧಾರಣೆ, ನೀರಾವರಿ ಸೌಲಭ್ಯ ಹಾಗೂ ಹೈನುಗಾರಿಕೆ ಸಲುವಾಗಿಯೂ ರೈತರಿಗೆ ಮಧ್ಯಾಮವಧಿ ಸಾಲ ವಿತರಿಸಲಾಗುವುದು ಎಂದು ಪ್ರಕಟಿಸಿದರು.
Related Articles
Advertisement
ಸಭೆಯಲ್ಲಿ 23 ವಿಷಯಗಳನ್ನು ಚರ್ಚಿಸಿ ಅನುಮೋದನೆ ಪಡೆಯಲಾಯಿತು. ಈ ಸಂದರ್ಭದಲ್ಲಿ ಪಿಕೆಪಿಎಸ್ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಹಲವಾರು ಪ್ರಶ್ನೆಗಳನ್ನು ಕೇಳಿದರು. ಇದಕ್ಕೆ ಅಧ್ಯಕ್ಷರು ಸಮಜಾಯಿಷಿ ಉತ್ತರ ನೀಡಿದರು. ಬ್ಯಾಂಕ್‌ನ ಉಪಾಧ್ಯಕ್ಷ ಸುರೇಶ ಸಜ್ಜನ್, ನಿರ್ದೇಶಕರುಗಳಾದ ಶಿವಾನಂದ ಮಾನಕರ, ಸೋಮಶೇಖರ ಗೋನಾಯಕ, ಶರಣಬಸಪ್ಪ ಪಾಟೀಲ್ ಅಷ್ಠಗಾ, ಅಶೋಕ ಸಾವಳೇಶ್ವರ, ಬಾಪುಗೌಡ ಪಾಟೀಲ್, ಗೌತಮ ಪಾಟೀಲ್, ಬಸವರಾಜ ಪಾಟೀಲ್, ಗುರುನಾಥರೆಡ್ಡಿ ಪಾಟೀಲ್, ಮಹಾಂತಗೌಡ ಪಾಟೀಲ್, ನಿಂಗಣ್ಣ ದೊಡ್ಡಮನಿ, ಸಿದ್ರಾಮರೆಡ್ಡಿ, ಚಂದ್ರಶೇಖರ ತಳ್ಳಳ್ಳಿ, ಉತ್ತಮ ಬಜಾಜ, ಕಲ್ಯಾಣಪ್ಪ ಪಾಟೀಲ್, ಎಂಡಿ ಚಿದಾನಂದ ನಿಂಬಾಳ ಸೇರಿದಂತೆ ಮುಂತಾದವರಿದ್ದರು.
ಇದೇ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ಬ್ಯಾಂಕ್‌ನ ಸಿಬ್ಬಂದಿಗಳಾದ ಯಲ್ಲಪ್ಪ ಮುರಡಿ ಹಾಗೂ ಲಿಂಗನಗೌಡ ಅವರನ್ನು ಸನ್ಮಾನಿಸಲಾಯಿತು. ಅದೇ ರೀತಿ ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷ-ಕಾರ್ಯದರ್ಶಿಗಳನ್ನು ಸಹ ಸನ್ಮಾನಿಸಲಾಯಿತು. ಬಿ.ಜಿ. ಕಲ್ಲೂರ ನಿರೂಪಿಸಿದರು.
ಮಂಡಳಿ ನಿರ್ಧಾರ ಬ್ಯಾಂಕ್‌ನ ಆಡಳಿತ ವೇಗ ಹೆಚ್ಚಿಸಲಾಗುವುದು. ಇದಕ್ಕಾಗಿ ಅಗತ್ಯ ಸಿಬ್ಬಂದಿಗಳ 11 ತಿಂಗಳಿಗಾಗಿ ನಿಯೋಜಿಸಲಾಗುವುದು. ಪ್ರಮುಖವಾಗಿ ಕೇಂದ್ರ ಕಚೇರಿ ಸೇರಿ ಶಾಖಾ ಕಚೇರಿಗಳಿಗೆ ಹೊಸ ಕಟ್ಟಡಗಳನ್ನು ನಿರ್ಮಿಸಲಾಗುವುದು. ರೈತರು ಸಾಲ ಪಡೆಯುವುದಾಗಿ ತಾಳ್ಮೆ ವಹಿಸಬೇಕು. ಕೇಳಿದಷ್ಟು ಸಾಲವನ್ನೇ ಡಿಸಿಸಿ ಬ್ಯಾಂಕ್ ದಿಂದ ನೀಡಲಾಗುವುದು. ತಮ್ಮದನ್ನು ನೋಡಿ ರಾಷ್ಟ್ರೀಯ ಬ್ಯಾಂಕ್‌ಗಳೇ ರೈತರ ಮನೆಗೆ ಬಂದು ಸಾಲ ನೀಡಲು ಕ್ಯೂ ನಿಲ್ಲುವಂತಾಗಬೇಕು. -ರಾಜಕುಮಾರ ಪಾಟೀಲ್ ತೇಲ್ಕೂರ, ಅಧ್ಯಕ್ಷ ಡಿಸಿಸಿ ಬ್ಯಾಂಕ್