Advertisement

ಹಾಲು ಉತ್ಪಾದಕರಿಗಾಗಿ ಬ್ಯಾಂಕ್‌: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ

01:42 AM Sep 30, 2021 | Team Udayavani |

ಬೆಂಗಳೂರು: ಹಾಲು ಉತ್ಪಾದಕರ ಅಭಿವೃದ್ಧಿ – ಆರ್ಥಿಕ ಸುಧಾರಣೆಗಾಗಿ ಹಾಲು ಉತ್ಪಾದಕರ ಬ್ಯಾಂಕ್‌ ತೆರೆಯಬೇಕು. ಇದಕ್ಕೆ ಸರಕಾರ 100 ಕೋಟಿ ರೂ. ಮೂಲ ಬಂಡವಾಳ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

Advertisement

ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್‌)ಯಿಂದ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನೂತನ ಉತ್ಪನ್ನಗಳನ್ನು ಲೋಕಾರ್ಪಣೆ ಮಾಡಿ, ಯೋಜನೆ ಉದ್ಘಾಟಿಸಿ ಅವರು ಮಾತನಾಡಿದರು.

ಹಾಲು ಉತ್ಪಾದಕರನ್ನು ಆರ್ಥಿಕವಾಗಿ ಸಶಕ್ತ ಗೊಳಿಸಲು ಮತ್ತು ಮಹಾಮಂಡಳಿ ಹಾಗೂ ಒಕ್ಕೂಟಗಳನ್ನು ಲಾಭದಾ ಯಕವಾ ಗಿಸಲು ಹಾಲು ಉತ್ಪಾದಕರ ಬ್ಯಾಂಕ್‌ ತೆರೆಯಬೇಕು. ಈ ಬಗ್ಗೆ ಕೆಎಂಎಫ್ ಆಡಳಿತ ಮಂಡಳಿ ಶೀಘ್ರ ನಿರ್ಧಾರ ಕೈಗೊಳ್ಳಬೇಕು ಎಂದರು.

ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌, ಉನ್ನತ ಶಿಕ್ಷಣ ಸಚಿವ ಡಾ| ಅಶ್ವತ್ಥನಾರಾಯಣ, ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್‌, ಸಂಸದ ಡಾ| ಉಮೇಶ್‌ ಜಾದವ್‌, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಸತೀಶ್‌ ಉಪಸ್ಥಿತರಿದ್ದರು.

ಗೋಶಾಲೆ ನಿರ್ವಹಣೆ ಕೆಎಂಎಫ್ ಹೆಗಲಿಗೆ
ರಾಜ್ಯ ಸರಕಾರ ಪ್ರತೀ ಜಿಲ್ಲೆಯಲ್ಲೂ ಒಂದೊಂದು ಗೋಶಾಲೆ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಂಡಿದೆ. ಗೋವುಗಳ ರಕ್ಷಣೆ ನಮ್ಮೆಲ್ಲರ ನೈತಿಕ ಜವಾಬ್ದಾರಿ. ಈ ನಿಟ್ಟಿನಲ್ಲಿ ಗೋ ಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತಂದಿದ್ದೇವೆ. ಇದಕ್ಕೆ ಪೂರಕವಾಗಿ ಗೋ ಶಾಲೆಗಳ ನಿರ್ಮಾಣ ಮತ್ತು ಅದಕ್ಕೆ ಬೇಕಾದ ಹಣವನ್ನು ಸರಕಾರದಿಂದ ನೀಡಲಿದೆ. ಗೋಶಾಲೆಗಳ ನಿರ್ವಹಣೆಯನ್ನು ಕೆಎಂಎಫ್ ಮಾಡಬೇಕು. ಕೆಎಂಎಫ್ನಲ್ಲಿ ಪಶುವೈದ್ಯರು, ತರಬೇತಿ ಪಡೆದ ಸಿಬಂದಿ ಇರುವು ದರಿಂದ ಲಾಭ-ನಷ್ಟ ಇಲ್ಲದೆ ಸರಕಾರ ಮತ್ತು ಕೆಎಂಎಫ್ ಜತೆ ಸೇರಿಕೊಂಡು ಇದನ್ನು ಮಾಡಬೇಕು ಎಂದು ಸಿಎಂ ಹೇಳಿದರು.

Advertisement

ಇದನ್ನೂ ಓದಿ:ನಾಯಿಯೆಂದು ಚಿರತೆಯನ್ನು ಬಾವಿಯಿಂದ ಮೇಲೆತ್ತಿದರು…!

“ಪ್ರೋತ್ಸಾಹಧನ ಹೆಚ್ಚಿಸಿ’
ಹಾಲು ಉತ್ಪಾದಕ ರಿಗೆ ನೀಡುವ ಪ್ರೋತ್ಸಾಹ ಧನ ಹೆಚ್ಚಿಸಬೇಕು. ಕೆಎಂಎಫ್ ಹಾಲಿನ ಬೆಲೆ ಹೆಚ್ಚಳದ ನಿರ್ಧಾರ ತೆಗೆದುಕೊಂಡಲ್ಲಿ ಸರಕಾರ ಸಹಕಾರ ನೀಡಬೇಕು. ಮಕ್ಕಳಿಗೆ ಕೆನೆಭರಿತ ಹಾಲಿನ ಪುಡಿ ನೀಡುತ್ತಿದ್ದೇವೆ. ಮಕ್ಕಳಿಗೆ ಲಸ್ಸಿ ಅಥವಾ ಟೆಟ್ರಾ ಪ್ಯಾಕ್‌ ಹಾಲು ನೀಡಲು ಬಜೆಟ್‌ನಲ್ಲಿ ಯೋಜನೆ ರೂಪಿಸಬೇಕು ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸಿಎಂಗೆ ಮನವಿ ಮಾಡಿದರು.

ಸಿಎಂ ಹೇಳಿದ್ದೇನು?
-ಸಹಕಾರಿ ಸಂಘಗಳುಬೆಳೆಯಬೇಕು, ಪದಾಧಿಕಾರಿಗಳಲ್ಲ.
-ಕೆಎಂಎಫ್ಒಕ್ಕೂಟಗಳ ಸಿಬಂದಿಗೆ ಪ್ರೋತ್ಸಾಹ ಯೋಜನೆ ಪುನರಾರಂಭವಾಗಬೇಕು.
-ನೀತಿ ನಿರೂಪಿಸುವ ಅಧಿಕಾರಿಗಳ ಲಕ್ಷ್ಯ ಕೃಷಿಯತ್ತ ಹೊರಳಬೇಕು.
-ಕೆಎಂಎಫ್ ಮಾರುಕಟ್ಟೆ ವ್ಯವಸ್ಥೆಯನ್ನು ಸುಧಾರಿಸಿ, ಮೇಲ್ದರ್ಜೆಗೆ ಏರಿಸಬೇಕು.
-ಸಹಕಾರಿ ರಂಗದ ಶಕ್ತಿಯ ಸದುಪಯೋಗ ಮಾಡಿಕೊಳ್ಳಿ.

 

Advertisement

Udayavani is now on Telegram. Click here to join our channel and stay updated with the latest news.

Next