ಅಕ್ಟೋಬರ್‌ನಲ್ಲಿ ಬನಿತಾ ಸಂಧು ಬರುತ್ತಾಳೆ ಎಂದರೆ ಯಾರೀಕೆ ಬನಿತಾ ಸಂಧು, ಅವಳೇಕೆ ಅಕ್ಟೋಬರ್‌ನಲ್ಲಿ ಬರಬೇಕೆಂಬ ಪ್ರಶ್ನೆಗಳು ಮೂಡುವುದು ಸಹಜ. ಬನಿತಾ ಸಂಧು ಬಾಲಿವುಡ್‌ಗೆ ಬಂದಿರುವ ನವನಟಿ, ಅಕ್ಟೋಬರ್ ಎನ್ನುವುದು ಅವಳು ನಟಿಸುತ್ತಿರುವ ಚಿತ್ರದ ಹೆಸರು. ಎಲ್ಲವೂ ಅಂದುಕೊಂಡಂತೆ ಆದರೆ ಈ ಚಿತ್ರ ಅಕ್ಟೋಬರ್‌ನಲ್ಲೇ ಬಿಡುಗಡೆಯಾಗಲಿದೆ. ಇದಕ್ಕೆ ಮುಂಚಿತವಾಗಿ ಬನಿತಾ ಸಂಧು ಎಂಬ ನವನಟಿಯ ಒಂದು ಕಿರುಪರಿಚಯ.
ಬನಿತಾ ಹುಟ್ಟಿ ಬೆಳೆದದ್ದೆಲ್ಲ ಲಂಡನ್‌ನಲ್ಲಿ. ಇವಳ ತಂದೆ-ತಾಯಿ ಮೂಲತಃ ಪಂಜಾಬಿನವರು. ಎರಡನೇ ವಿಶ್ವಯುದ್ಧ ಸಮಯದಲ್ಲೇ ಬನಿತಾಳ ಅಜ್ಜ ಇಂಗ್ಲೆಂಡ್‌ಗೆ ವಲಸೆ ಹೋಗಿ ನೆಲೆಯಾಗಿ ಅಲ್ಲಿಯ ಪ್ರಜೆಯಾಗಿದ್ದರು. ಹೀಗಿದ್ದರೂ ಬನಿತಾಳ ಕುಟುಂಬ ಭಾರತ ಜತೆಗಿನ ಸಂಬಂಧವನ್ನು ಕಳೆದುಕೊಂಡಿರಲಿಲ್ಲ. ಸಿಕ್ಖ್ ಸಮುದಾಯದ ಬನಿತಾ ಮಾತ್ರ ಲಂಡನ್ ಪ್ರಜೆ.
ಚಿಕ್ಕಂದಿನಲ್ಲೇ ಬನಿತಾಳಿಗೆ ನಟಿಸುವ ಗೀಳು ಇತ್ತು. ಕೆಲವು ಜಾಹೀರಾತುಗಳು ಮತ್ತು ಕಿರುಚಿತ್ರಗಳಲ್ಲಿ ನಟಿಸಿದ ಈ ಹದಿಹರೆಯದ ಹುಡುಗಿಯ ಗಮನಹರಿದದ್ದು ಬಾಲಿವುಡ್‌ನತ್ತ. ಇದಕ್ಕೆ ಕಾರಣ ನಿರ್ದೇಶಕ ಶೂಚಿತ್ ಸರ್ಕಾರ್. ಜಾಹೀರಾತು ಚಿತ್ರಗಳಲ್ಲಿ ಈ ಪೋರಿಯನ್ನು ನಿರ್ದೇಶಿಸಿದ್ದ ಸರ್ಕಾರ್‌ಗೆ ಅಕ್ಟೋಬರ್ ಚಿತ್ರದ ಚೆಲ್ಲು ಹುಡುಗಿಯ ಪಾತ್ರಕ್ಕೆ ಇವಳೇ ಲಾಯಕ್ ಎಂದೆನಿಸಿದ್ದಾಳೆ. ಹೀಗಾಗಿ ಮೊದಲ ಚಿತ್ರದಲ್ಲೇ ವರುಣ್ ಧವನ್‌ಗೆ ನಾಯಕಿಯಾಗುವ ಅದೃಷ್ಟ ಒಲಿದು ಬಂದಿದೆ. ಇಷ್ಟಕ್ಕೂ ಬನಿತಾ ಸಂಧು ಎಂಬ ಹುಡುಗಿ ಅಕ್ಟೋಬರ್‌ಗೆ ನಾಯಕಿಯಾಗಿದ್ದಾಳೆ ಎಂಬ ವಿಚಾರ ಗೊತ್ತಾದದ್ದೇ ವರುಣ್ ಧವನ್ ಅವಳ ಫೋಟೊವನ್ನು ಟ್ವೀಟ್ ಮಾಡಿದ ಬಳಿಕ.
ಅನಂತರ ಚಿತ್ರದ ಟ್ರಯಲರ್ ನೋಡಿದವರಿಗೆ ಈ ಹುಡುಗಿಯಲ್ಲೇನೋ ವಿಶೇಷವಿದೆ ಎಂದೆನಿಸಿದೆ. ಹೀಗಾಗಿ ಬನಿತಾ ಈಗ ಬಾಲಿವುಡ್‌ನ ನೀಲಿಕಣ್ಣಿನ ಹುಡುಗಿಯಾಗಿದ್ದಾಳೆ. ಗ್ಲಾಮರ್ ಗೊಂಬೆಯಂತಿರುವ ಬನಿತಾ ಅಕ್ಟೋಬರ್‌ನಲ್ಲಿ ಮಾತ್ರ ಅಪಾಯಕಾರಿ ಸಾಹಸ ದೃಶ್ಯಗಳಲ್ಲಿ ಯಾವುದೇ ಅಂಜಿಕೆಯಿಲ್ಲದೆ ನಟಿಸಿದ್ದಾಳಂತೆ. ಮೂಲತಃ ಬನಿತಾ ತುಂಟಾಟದ ಮಲ್ವಿಬಬ್ಲಿ ಹುಡುಗಿ. ಆದರೆ, ಅಕ್ಟೋಬರ್ ಪಾತ್ರಕ್ಕಾಗಿ ಅವಳು ತನ್ನ ಮೂಲ ಸ್ವಭಾವವನ್ನೇ ಬದಲಾಯಿಸಿಕೊಳ್ಳಬೇಕಾ ಯಿತಂತೆ. ವಾರಗಟ್ಟಲೆ ತುಂಟಾಟ, ಕೀಟಲೆಯನ್ನು ಅದುಮಿಟ್ಟು ಬದುಕಲು ಬಹಳ ಕಷ್ಟಪಡಬೇಕಾಯಿತು ಎಂದು ಬನಿತಾ ತನ್ನ ಸಂಕಷ್ಟವನ್ನು ತೋಡಿಕೊಂಡಿದ್ದಾಳೆ.