Advertisement
1. ಬಳೆಯ ಚೂರಿನ ಫೋಟೊ ಫ್ರೇಮ್ಬೇಕಾಗುವ ವಸ್ತುಗಳು: ಗಾಜಿನ ಬಳೆಯ ಚೂರುಗಳು, ಕಾರ್ಡ್‌ಬೋರ್ಡ್ (ರಟ್ಟು), ಅಲಂಕಾರಿಕ ಮಣಿಗಳು, ಫ್ಯಾಬ್ರಿಕ್‌ಗೆ ಬಳಸುವ ಅಂಟು (ಗಮ್), ಕತ್ತರಿ
1. ಕಾರ್ಡ್‌ಬೋರ್ಡ್‌ಅನ್ನು ಕತ್ತರಿಸಿ, 6*6 ಅಳತೆಗೆ ಗುರುತು ಮಾಡಿ ಗೆರೆ ಎಳೆಯಿರಿ.
2. 6*6 ಜಾಗ ಬಿಟ್ಟು ಸುತ್ತ ಬಿಳಿಯ ಹಾಳೆ ಅಂಟಿಸಿ.
3. ಬಿಳಿಯ ಜಾಗದ ಸುತ್ತ ಒಡೆದ ಬಳೆ ಚೂರುಗಳನ್ನು ಗಮ್‌ನಿಂದ ಸಾಲಾಗಿ ಅಂಟಿಸುತ್ತಾ ಬನ್ನಿ.
4. ಒಂದು ಸುತ್ತು ಬಳೆ ಚೂರು ಅಂಟಿಸಿದ ನಂತರ, ಅಲಂಕಾರಿಕ ಮಣಿಗಳನ್ನು ಸಾಲಾಗಿ ಅಂಟಿಸಿ.
5. ಇದೇ ರೀತಿ ಬಿಳಿಯ ಜಾಗದ ತುಂಬ ಬಳೆಯ ಚೂರು ಹಾಗೂ ಮಣಿಗಳಿಂದ ಅಲಂಕರಿಸಿ.
6. ಆ ಫ್ರೇಮ್ನ ಹಿಂಬದಿಗೆ ರಟ್ಟಿನದೇ ಸ್ಟಾಂಡ್ ಮಾಡಿ ಅಂಟಿಸಿ.
7. 6*6 ಜಾಗದಲ್ಲಿ ಫೋಟೊ ಅಂಟಿಸಿ, ಶೋಕೇಸ್‌ನಲ್ಲಿ ಇಡಿ.