Advertisement

ಶಿಷ್ಟಾಚಾರ ಬದಿಗೊತ್ತಿ ಏರ್‌ಪೋರ್ಟ್‌ನಲ್ಲೇ ಹಸೀನಾ ಸ್ವಾಗತಿಸಿದ ಮೋದಿ

04:55 PM Apr 07, 2017 | Team Udayavani |

ಹೊಸದಿಲ್ಲಿ: ನಾಲ್ಕುದಿನಗಳ ಭಾರತ ಪ್ರವಾಸಕ್ಕಾಗಿ ನವದೆಹಲಿಗೆ ಬಂದಿಳಿದ ಬಾಂಗ್ಲಾದೇಶ ಪ್ರಧಾನಿ ಶೇಖ್‌ ಹಸೀನಾ ಅವರು ಶುಕ್ರವಾರ ದೆಹಲಿಗೆ ಬಂದಿಳಿದ್ದು,ಪ್ರಧಾನಿ ನರೇಂದ್ರ ಮೋದಿ ಅವರು ಶಿಷ್ಟಾಚಾರಗಳನ್ನು ಬದಿಗೊತ್ತಿ ವಮಾನ ನಿಲ್ದಾಣಕ್ಕೆ ತೆರಳಿ ಸ್ವಾಗತಿಸಿದರು. 

Advertisement

ಪ್ರಧಾನಿ ಅವರು ತಮ್ಮ ನಿವಾಸದಿಂದ ಲೋಕ್‌ ಕಲ್ಯಾಣ್‌ ಮಾರ್ಗದ ಮೂಲಕ ಯಾವುದೇ ಝಿರೋ ಟ್ರಾಫಿಕ್‌ ವ್ಯವಸ್ಥೆಯಿಲ್ಲದೆ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿ ಸ್ವಾಗತಿಸಿರುವುದು ವಿಶೇಷವಾಗಿತ್ತು. 

ನಾಳೆ ಮೋದಿ ಮತ್ತು ಹಸೀನಾ ಅವರ ನಡುವೆ ಮಹತ್ವದ ಮಾತುಕತೆ ನಡೆಯಲಿದ್ದು, ಬಾಂಗ್ಲಾ ದೇಶಕ್ಕೆ 500 ಮಿಲಿಯನ್‌ ಡಾಲರ್‌ ಸಾಲದ ನೆರವು ನೀಡುವ ಸಾಧ್ಯತೆಗಳಿವೆ. ಜಲ ಒಪ್ಪಂದ ಸೇರಿದಂತೆ ವಿವಿಧ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಗಳಿವೆ.

ಹಸೀನಾ ಅವರು ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಮತ್ತು ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ ಅವರೊಂದಿಗೂ ಮಾತುಕತೆ ನಡೆಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next