Advertisement

ತ್ರಿಕೋನ ಏಕದಿನ ಸರಣಿ: ಕಿವೀಸ್‌ಗೆ ಬಾಂಗ್ಲಾ ಸೋಲಿನೇಟು

10:40 AM May 26, 2017 | Team Udayavani |

ಡಬ್ಲಿನ್‌ (ಅಯರ್‌ಲ್ಯಾಂಡ್‌): ನ್ಯೂಜಿಲ್ಯಾಂಡಿಗೆ ತನ್ನ ತವರಿನಾಚೆ ಮೊದಲ ಸೋಲಿನೇಟು ಬೀಗಿದ ಬಾಂಗ್ಲಾದೇಶ ಐಸಿಸಿ ಏಕದಿನ ರ್‍ಯಾಂಕಿಂಗ್‌ನಲ್ಲಿ 6ನೇ ಸ್ಥಾನಕ್ಕೆ ನೆಗೆದಿದೆ. ಇದರೊಂದಿಗೆ 2019ರ ವಿಶ್ವಕಪ್‌ ಪಂದ್ಯಾವಳಿಗೆ ನೇರ ಆಯ್ಕೆಯ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿದೆ. 

Advertisement

ತ್ರಿಕೋನ ಸರಣಿಯ 6ನೇ ಹಾಗೂ ಅಂತಿಮ ಲೀಗ್‌ ಪಂದ್ಯದಲ್ಲಿ ಬಾಂಗ್ಲಾ 5 ವಿಕೆಟ್‌ಗಳಿಂದ ನ್ಯೂಜಿಲ್ಯಾಂಡನ್ನು ಮಣಿಸಿತು. ನ್ಯೂಜಿಲ್ಯಾಂಡ್‌ 8 ವಿಕೆಟಿಗೆ 270 ರನ್‌ ಪೇರಿಸಿ ಸವಾಲೊಡ್ಡಿದರೆ, ಬಾಂಗ್ಲಾ 48.2 ಓವರ್‌ಗಳಲ್ಲಿ 5 ವಿಕೆಟಿಗೆ 271 ರನ್‌ ಹೊಡೆದು ಗೆಲುವು ಸಾಧಿಸಿತು. ಆದರೆ ಈ ಕೂಟದಲ್ಲಿ ಅತ್ಯಧಿಕ 3 ಜಯ ಸಾಧಿ ಸಿದ ನ್ಯೂಜಿಲ್ಯಾಂಡ್‌ ಚಾಂಪಿಯನ್‌ ಆಗಿ ಹೊರ ಹೊಮ್ಮಿತು. ಬಾಂಗ್ಲಾ ಎರಡರಲ್ಲಿ ಗೆದ್ದಿತ್ತು. ಅಯರ್‌ಲ್ಯಾಂಡ್‌-ಬಾಂಗ್ಲಾದೇಶ ನಡುವಿನ ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು.

ಬಾಂಗ್ಲಾ ಚೇಸಿಂಗ್‌ ವೇಳೆ ತಮಿಮ್‌ ಇಕ್ಬಾಲ್‌ ಮತ್ತು ಶಬ್ಬೀರ್‌ ರೆಹಮಾನ್‌ ತಲಾ 65, ಮಹಮದುಲ್ಲ ಔಟಾಗದೆ 46, ಮುಶ್ಫಿಕರ್‌ ರಹೀಂ ಔಟಾಗದೆ 45 ರನ್‌ ಹೊಡೆದರು. ರಹೀಂ-ಮಹಮದುಲ್ಲ ಜೋಡಿ ಮುರಿಯದ 6ನೇ ವಿಕೆಟಿಗೆ 72 ರನ್‌ ಬಾರಿಸಿ ತಂಡಕ್ಕೆ ಮಹತ್ವದ ಗೆಲುವನ್ನು ತಂದಿತ್ತಿತು. ಈ ಸಂದರ್ಭದಲ್ಲಿ ರಹೀಂ 3 ಸಾವಿರ ರನ್‌ ಗಳಿಸಿದ ಬಾಂಗ್ಲಾದ 5ನೇ ಬ್ಯಾಟ್ಸ್‌ಮನ್‌ ಎನಿಸಿದರು.

ಸೆ. 30ಕ್ಕೆ ಅಂತ್ಯಗೊಳ್ಳುವ ರ್‍ಯಾಂಕಿಂಗ್‌ ಮಾನ ದಂಡದಂತೆ ಅಗ್ರ 8 ಸ್ಥಾನದಲ್ಲಿರುವ ತಂಡಗಳು ವಿಶ್ವಕಪ್‌ ಪಂದ್ಯಾವಳಿಗೆ ನೇರ ಅರ್ಹತೆ ಪಡೆಯುತ್ತವೆ.

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲ್ಯಾಂಡ್‌-8 ವಿಕೆಟಿಗೆ 270 (ಲ್ಯಾಥಂ 84, ಬ್ರೂಮ್‌ 63, ಟಯ್ಲರ್‌ ಔಟಾಗದೆ 60, ಶಕಿಬ್‌ 41ಕ್ಕೆ 2, ನಾಸಿರ್‌ 47ಕ್ಕೆ 2). ಬಾಂಗ್ಲಾದೇಶ-48.2 ಓವರ್‌ಗಳಲ್ಲಿ 5 ವಿಕೆಟಿಗೆ 271 (ತಮಿಮ್‌ 65, ಶಬ್ಬೀರ್‌ 65, ಮಹಮದುಲ್ಲ ಔಟಾಗದೆ 46, ರಹೀಂ ಔಟಾಗದೆ 45, ಪಟೇಲ್‌ 55ಕ್ಕೆ 2). ಪಂದ್ಯಶ್ರೇಷ್ಠ: ಮುಶ್ಫಿಕರ್‌ ರಹೀಂ. 

Advertisement

ಸರಣಿಶ್ರೇಷ್ಠ: ಟಾಮ್‌ ಲ್ಯಾಥಂ.

Advertisement

Udayavani is now on Telegram. Click here to join our channel and stay updated with the latest news.

Next