ಢಾಕಾ : ಇಲ್ಲಿನ ಶೇರ್ ಇ ಬಾಂಗ್ಲಾ ಸ್ಟೇಡಿಯಂನಲ್ಲಿ ಪ್ರವಾಸಿ ಆಸ್ಟೇಲಿಯಾ ವಿರುದ್ಧ ನಡೆದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾ ದೇಶ ತಂಡ 20 ರನ್‌ಗಳಿಂದ ಐತಿಹಾಸಿಕ ಗೆಲುವು ದಾಖಲಿಸಿದೆ.
ಟಾಸ್ ಗೆದ್ದು ಮೊದಲ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾ 260 ರನ್‌ಗಳಿಗೆ ಆಲೌಟಾಗಿತ್ತು. ಇದಕ್ಕುತ್ತರವಾಗಿ ಆಸೀಸ್ 216 ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಅಂತ್ಯಗೊಳಿಸಿ ಹಿನ್ನಡೆ ಅನುಭವಿಸಿತ್ತು.
2 ನೇ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾ 221 ರನ್‌ಗಳಿಗೆ ಆಲೌಟಾಯಿತು. ಗೆಲ್ಲಲು 264 ರನ್‌ಗಳ ಗುರಿ ಬೆನ್ನಟ್ಟಿದ ಆಸೀಸ್ ಶಕೀಬ್ ಅಲ್ ಹಸನ್ ಸ್ಪಿನ್ ದಾಳಿಗೆ ಸಿಲುಕಿ 244 ರನ್‌ಗಳಿಗೆ ಆಲೌಟಾಗುವ ಮೂಲಕ 20 ರನ್‌ಗಳ ಸೋಲು ಅನುಭವಿಸಿತು.
ಶಕೀಬ್ ಮೊದಲ ಇನ್ನಿಂಗ್ಸ್‌ನಲ್ಲಿ 5 ಮತ್ತು 2 ನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದು ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
2 ನೇ ಇನ್ನಿಂಗ್ಸ್‌ನಲ್ಲಿ ಆಸೀಸ್ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಶತಕ ಸಿಡಿಸಿದರೂ ಗೆಲುವು ಸಿಗಲಿಲ್ಲ. ವಾರ್ನರ್ 112 ರನ್‌ಗಳಿಸಿ ಔಟಾದರು.
ಅಗಸ್ಟ್ 27 ರಿಂದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಿತ್ತು.