Advertisement

ಬಾಂಗ್ಲಾ ತಿರುಗೇಟು; ಸರಣಿ ಸಮಬಲ​​​​​​​

06:15 AM Nov 16, 2018 | Team Udayavani |

ಮಿರ್ಪುರ್‌ (ಢಾಕಾ): ದ್ವಿತೀಯ ಹಾಗೂ ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಪ್ರವಾಸಿ ಜಿಂಬಾಬ್ವೆಗೆ 218 ರನ್ನುಗಳ ಸೋಲುಣಿಸಿದ ಬಾಂಗ್ಲಾದೇಶ, ಸರಣಿಯನ್ನು 1-1 ಸಮಬಲದಲ್ಲಿ ಮುಗಿಸುವಲ್ಲಿ ಯಶಸ್ವಿಯಾಗಿದೆ. ಇದು 2018ರಲ್ಲಿ ಬಾಂಗ್ಲಾ ಸಾಧಿಸಿದ ಮೊದಲ ಟೆಸ್ಟ್‌ ಗೆಲುವು ಎಂಬುದು ವಿಶೇಷ.

Advertisement

ಗೆಲುವಿಗೆ 443 ರನ್ನುಗಳ ಕಠಿನ ಗುರಿ ಪಡೆದಿದ್ದ ಜಿಂಬಾಬ್ವೆ, 4ನೇ ದಿನದ ಅಂತ್ಯಕ್ಕೆ 2 ವಿಕೆಟ್‌ ಕಳೆದುಕೊಂಡು 76 ರನ್‌ ಮಾಡಿತ್ತು. ಅಂತಿಮ ದಿನವಾದ ಗುರುವಾರ ಬ್ಯಾಟಿಂಗ್‌ ಮುಂದುವರಿಸಿ 224ಕ್ಕೆ ಸರ್ವಪತನ ಕಂಡಿತು. ವನ್‌ಡೌನ್‌ ಬ್ಯಾಟ್ಸ್‌ಮನ್‌ ಬ್ರೆಂಡನ್‌ ಟಯ್ಲರ್‌ ದ್ವಿತೀಯ ಇನ್ನಿಂಗ್ಸ್‌ನಲ್ಲೂ ಶತಕ ಬಾರಿಸಿದ್ದು ಜಿಂಬಾಬ್ವೆ ಸರದಿಯ ವಿಶೇಷವಾಗಿತ್ತು.

ಮೊದಲ ಇನ್ನಿಂಗ್ಸ್‌ನಲ್ಲಿ 110 ರನ್‌ ಹೊಡೆದಿದ್ದ ಟಯ್ಲರ್‌ ಇದೇ ಲಯವನ್ನು ಮುಂದುವರಿಸಿ ಅಜೇಯ 106 ರನ್‌ ಬಾರಿಸಿದರು. ಆದರೆ ಅವರಿಗೆ ಇನ್ನೊಂದು ತುದಿಯಿಂದ ಯಾವುದೇ ಬೆಂಬಲ ಸಿಗಲಿಲ್ಲ. ಇದು ಟಯ್ಲರ್‌ ಅವರ 6ನೇ ಟೆಸ್ಟ್‌ ಶತಕ. 167 ಎಸೆತ ಎದುರಿಸಿದ ಅವರು 10 ಬೌಂಡರಿ ಬಾರಿಸಿ ಬಾಂಗ್ಲಾಕ್ಕೆ ಸವಾಲಾಗಿಯೇ ಉಳಿದರು.ಬಾಂಗ್ಲಾದ ಸ್ಪಿನ್ನರ್‌ ಮೆಹೆದಿ ಹಸನ್‌ ಮಿರಾಜ್‌ 38 ರನ್ನಿಗೆ 5 ವಿಕೆಟ್‌ ಹಾರಿಸಿ ಜಿಂಬಾಬ್ವೆ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದರು. ಮಿರಾಜ್‌ ಇನ್ನಿಂಗ್ಸ್‌ ಒಂದರಲ್ಲಿ “5 ಪ್ಲಸ್‌’ ವಿಕೆಟ್‌ ಕಿತ್ತ 5ನೇ ನಿದರ್ಶನ ಇದಾಗಿದೆ.ಮೊದಲ ಟೆಸ್ಟ್‌ ಪಂದ್ಯವನ್ನು ಜಿಂಬಾಬ್ವೆ 151 ರನ್ನುಗಳಿಂದ ಗೆದ್ದಿತ್ತು.

ಸಂಕ್ಷಿಪ್ತ ಸ್ಕೋರ್‌: ಬಾಂಗ್ಲಾದೇಶ-7 ವಿಕೆಟಿಗೆ 522 ಡಿಕ್ಲೇರ್‌ ಮತ್ತು 6 ವಿಕೆಟಿಗೆ 224 ಡಿಕ್ಲೇರ್‌. ಜಿಂಬಾಬ್ವೆ-304 ಮತ್ತು 224 (ಟಯ್ಲರ್‌ ಔಟಾಗದೆ 106, ಚಾರಿ 43, ಮಸಕಝ 25, ಮಿರಾಜ್‌ 38ಕ್ಕೆ 5, ತೈಜುಲ್‌ 93ಕ್ಕೆ 2). ಪಂದ್ಯಶ್ರೇಷ್ಠ: ಮುಶ್ಫಿಕರ್‌ ರಹೀಂ. ಸರಣಿಶ್ರೇಷ್ಠ: ತೈಜುಲ್‌ ಇಸ್ಲಾಮ್‌.

Advertisement

Udayavani is now on Telegram. Click here to join our channel and stay updated with the latest news.

Next