Advertisement

Test Match: ಇನ್ನಿಂಗ್ಸ್‌ ಸೋಲಿನಿಂದ ಪಾರಾದ ಬಾಂಗ್ಲಾ

11:16 PM Oct 23, 2024 | Team Udayavani |

ಢಾಕಾ: ಬಾಲಂಗೋಚಿಗಳಾದ ಮೆಹಿದಿ ಹಸನ್‌ ಮಿರಾಜ್‌ ಮತ್ತು ಜಾಕರ್‌ ಅಲಿ ಅವರ ದಿಟ್ಟ ಬ್ಯಾಟಿಂಗ್‌ ಸಾಹಸದಿಂದ ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಬಾಂಗ್ಲಾದೇಶ ಇನ್ನಿಂಗ್ಸ್‌ ಸೋಲಿನಿಂದ ಪಾರಾಗಿದೆ. ದ್ವಿತೀಯ ಇನ್ನಿಂಗ್ಸ್‌ನಲ್ಲಿ 7 ವಿಕೆಟಿಗೆ 283 ರನ್‌ ಗಳಿಸಿದ್ದು, 81 ರನ್‌ ಮುನ್ನಡೆಯಲ್ಲಿದೆ.

Advertisement

ಬಾಂಗ್ಲಾದ 106ಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ 308 ರನ್‌ ಪೇರಿಸಿತು. 202 ರನ್‌ ಹಿನ್ನಡೆಗೆ ಸಿಲುಕಿದ ಬಾಂಗ್ಲಾದೇಶ, ಒಂದು ಹಂತದಲ್ಲಿ 112ಕ್ಕೆ 6 ವಿಕೆಟ್‌ ಕಳೆದುಕೊಂಡು ಇನ್ನಿಂಗ್ಸ್‌ ಸೋಲಿನ ಭೀತಿಗೆ ಸಿಲುಕಿತ್ತು. ಆಗ ಜತೆಗೂಡಿದ ಮೆಹಿದಿ ಹಸನ್‌ ಮಿರಾಜ್‌ (ಬ್ಯಾಟಿಂಗ್‌ 87) ಮತ್ತು ಮೊದಲ ಟೆಸ್ಟ್‌ ಆಡುತ್ತಿರುವ ಜಾಕರ್‌ ಅಲಿ (58) 138 ರನ್ನುಗಳ ಅಮೋಘ ಜತೆಯಾಟ ನಡೆಸಿ ತಂಡವನ್ನು ದೊಡ್ಡ ಕಂಟಕದಿಂದ ಪಾರುಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next