ಆಕ್ಲಂಡ್: ಪ್ರವಾಸಿ ಬಾಂಗ್ಲಾದೇಶ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯನ್ನು ನ್ಯೂಜಿಲ್ಯಾಂಡ್ ಕ್ಲೀನ್ ಸ್ವೀಪ್ ಆಗಿ ವಶಪಡಿ ಸಿಕೊಂಡಿದೆ. ಇದರೊಂದಿಗೆ ನ್ಯೂಜಿಲ್ಯಾಂಡ್‌ನಲ್ಲಿ ಆಡಲಾದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬಾಂಗ್ಲಾ ಸತತ 32 ಸೋಲುಂಡ ಅವಮಾನಕ್ಕೆ ಸಿಲುಕಿತು.
ಮಳೆಯ ಕಾರಣ ಗುರುವಾರದ ಪಂದ್ಯವನ್ನು 10 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ಕಿವೀಸ್ 4 ವಿಕೆಟಿಗೆ 141 ರನ್ ರಾಶಿ ಹಾಕಿತು. ಬಾಂಗ್ಲಾ 9.3 ಓವರ್‌ಗಳಲ್ಲಿ 76ಕ್ಕೆ ಆಲೌಟಾಗಿ 65 ರನ್ನುಗಳ ಸೋಲಿಗೆ ಸಿಲುಕಿತು.
ಈ ಪಂದ್ಯದಲ್ಲಿ 15 ರನ್ನಿಗೆ 3 ವಿಕೆಟ್ ಉರುಳಿಸಿದ ಟಿಮ್ ಸೌಥಿ ತಮ್ಮ ಅಂತಾರಾಷ್ಟ್ರೀಯ ವಿಕೆಟ್‌ಗಳ ಸಂಖ್ಯೆಯನ್ನು 591ಕ್ಕೆ ಏರಿಸಿ ನ್ಯೂಜಿಲ್ಯಾಂಡಿನ ಅತ್ಯಂತ ಯಶಸ್ವಿ ಬೌಲರ್ ಎನಿಸಿದರು. ರಿಚರ್ಡ್ ಹ್ಯಾಡ್ಲಿ ಅವರ 589 ವಿಕೆಟ್‌ಗಳ ದಾಖಲೆ ಪತನಗೊಂಡಿತು.
ಸಂಕ್ಷಿಪ್ತ ಸ್ಕೋರ್: ನ್ಯೂಜಿಲ್ಯಾಂಡ್-10 ಓವರ್‌ಗಳಲ್ಲಿ 4 ವಿಕೆಟಿಗೆ 141 (ಫಿನ್ ಅಲೆನ್ 71, ಗಪ್ಟಿಲ್ 44, ಟಸ್ಕಿನ್ 24ಕ್ಕೆ 1). ಬಾಂಗ್ಲಾದೇಶ-9.3 ಓವರ್‌ಗಳಲ್ಲಿ 76 (ನೈಮ್ 19, ಮೊಸದೆಕ್ 13, ಟಾಡ್ ಆ್ಯಸ್ಟಲ್ 13ಕ್ಕೆ 4, ಸೌಥಿ 15ಕ್ಕೆ 3).
ಪಂದ್ಯಶ್ರೇಷ್ಠ: ಫಿನ್ ಅಲೆನ್. ಸರಣಿಶ್ರೇಷ್ಠ: ಗ್ಲೆನ್ ಫಿಲಿಪ್ಸ್.