Advertisement

93ಕ್ಕೆ ಕುಸಿದ ಕಿವೀಸ್‌ ಬಾಂಗ್ಲಾಕ್ಕೆ ಟಿ20 ಸರಣಿ

09:25 PM Sep 08, 2021 | Team Udayavani |

ಢಾಕಾ: ಪ್ರವಾಸಿ ನ್ಯೂಜಿಲ್ಯಾಂಡನ್ನು 93 ರನ್ನಿಗೆ ಉದುರಿಸಿದ ಬಾಂಗ್ಲಾದೇಶ, 4ನೇ ಟಿ20 ಪಂದ್ಯವನ್ನು 6 ವಿಕೆಟ್‌ಗಳಿಂದ ಗೆದ್ದು ಸರಣಿ ವಶಪಡಿಸಿಕೊಂಡಿದೆ.

Advertisement

ನಾಸುಮ್‌ ಅಹ್ಮದ್‌ (4-2-10-4) ಮತ್ತು ಮುಸ್ತಫಿಜುರ್‌ ರೆಹಮಾನ್‌ (3.3-0-12-4) ದಾಳಿಗೆ ಧೂಳೀಪಟಗೊಂಡ ನ್ಯೂಜಿಲ್ಯಾಂಡ್‌ 19.3 ಓವರ್‌ಗಳಲ್ಲಿ 93 ರನ್ನಿಗೆ ಆಲೌಟ್‌ ಆಯಿತು. ಬಾಂಗ್ಲಾದೇಶಕ್ಕೂ ಚೇಸಿಂಗ್‌ ಕಠಿನವಾಯಿತಾದರೂ ಅಂತಿಮವಾಗಿ 19.1 ಓವರ್‌ಗಳಲ್ಲಿ 4 ವಿಕೆಟಿಗೆ 96 ರನ್‌ ಬಾರಿಸಿ ವಿಜಯಿಯಾಯಿತು. ನಾಯಕ ಮಹಮದುಲ್ಲ ಅಜೇಯ 43 ರನ್‌ ಮಾಡಿದರು.

ಮೊದಲೆರಡು ಟಿ20 ಪಂದ್ಯಗಳನ್ನು ಬಾಂಗ್ಲಾ ಜಯಿಸಿತ್ತು (7 ವಿಕೆಟ್‌, 4 ರನ್‌). ಮೂರನೇ ಮುಖಾಮುಖೀಯನ್ನು ನ್ಯೂಜಿಲ್ಯಾಂಡ್‌ 52 ರನ್ನುಗಳಿಂದ ತನ್ನದಾಗಿಸಿಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next