Advertisement

Bangladesh vs New Zealand; ಬಾಂಗ್ಲಾ ಹಿಡಿತದಲ್ಲಿ ಮೊದಲ ಟೆಸ್ಟ್‌

11:56 PM Nov 30, 2023 | Team Udayavani |

ಸಿಲ್ಹೆಟ್‌: ಬೌಲರ್‌ಗಳಾದ ತೈಜುಲ್‌ ಇಸ್ಲಾಮ್‌ ಮತ್ತು ಮೊಮಿನುಲ್‌ ಹಕ್‌ ಅವರ ಉತ್ತಮ ನಿರ್ವಹಣೆಯಿಂದಾಗಿ ಬಾಂಗ್ಲಾದೇಶ ತಂಡವು ಪ್ರವಾಸಿ ನ್ಯೂಜಿಲ್ಯಾಂಡ್‌ ತಂಡದೆದುರಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಉತ್ತಮ ಸ್ಥಿತಿಯಲ್ಲಿದೆ.

Advertisement

ಬಾಂಗ್ಲಾದ 310 ರನ್ನಿಗೆ ಉತ್ತರವಾಗಿ ಬ್ಯಾಟಿಂಗ್‌ ಆರಂಭಿಸಿದ ನ್ಯೂಜಿಲ್ಯಾಂಡ್‌ ತಂಡವು ತೈಜುಲ್‌ ದಾಳಿಗೆ ಕುಸಿದು 317 ರನ್ನಿಗೆ ಆಲೌಟಾಯಿತು. ಕೇನ್‌ ವಿಲಿಯಮ್ಸನ್‌ 104 ರನ್‌ ಹೊಡೆದಿದ್ದರು. ಇದರಿಂದ ಪ್ರವಾಸಿ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 7 ರನ್‌ ಮುನ್ನಡೆ ಪಡೆಯಿತು.

ಬಾಂಗ್ಲಾದೇಶ ದ್ವಿತೀಯ ಇನ್ನಿಂಗ್ಸ್‌
ನಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದ ರ್ಶನ ನೀಡಿದ್ದು ಮೂರನೇ ದಿನ ದಾಟದ ಅಂತ್ಯಕ್ಕೆ ಮೂರು ವಿಕೆಟ್‌ ಕಳೆದುಕೊಂಡತು 212 ರನ್‌ ಗಳಿಸಿದೆ. ತಂಡ ಒಟ್ಟಾರೆ 205 ರನ್‌ ಮುನ್ನಡೆಯಲ್ಲಿದೆ. ಶತಕ ಸಿಡಿಸಿರುವ ನಜ್ಮುಲ್‌ ಹೊಸೇನ್‌ ಶಾಂಟೊ ಔಟಾಗದೇ ಉಳಿದಿದ್ದಾರೆ. ಇನ್ನೆರಡು ದಿನಗಳ ಆಟ ಬಾಕಿ ಉಳಿದಿದ್ದು ಬಾಂಗ್ಲಾ ಗೆಲುವಿನ ನಿರೀಕ್ಷೆಯಲ್ಲಿದೆ.

ನಜ್ಮುಲ್‌ ಅವರ ಉತ್ತಮ ಆಟದಿಂದಾಗಿ ಬಾಂಗ್ಲಾ ದ್ವಿತೀಯ ಇನ್ನಿಂಗ್ಸ್‌ನಲ್ಲಿ ತಿರುಗೇಟು ನೀಡಲು ಯಶಸ್ವಿಯಾಗಿದೆ. ಅವರು ಮೂರನೇ ವಿಕೆಟಿಗೆ ಮೊಮಿನುಲ್‌ ಹಕ್‌ ಜತೆ 90 ಮತ್ತು ಮುರಿಯದ ನಾಲ್ಕನೇ ವಿಕೆಟಿಗೆ ಮುಶ್ಫಿಕರ್‌ ರಹಿಂ ಜತೆ ಈಗಾಗಲೇ 96 ರನ್ನುಗಳ ಜತೆಯಾಟದಲ್ಲಿ ಭಾಗಿಯಾಗಿದ್ದಾರೆ.

ಸಂಕ್ಷಿಪ್ತ ಸ್ಕೋರು
ಬಾಂಗ್ಲಾ 310 ಮತ್ತು 3 ವಿಕೆಟಿಗೆ 212 (ನಜ್ಮುಲ್‌ ಹೊಸೇನ್‌ ಶಾಂಟೊ ಔಟಾಗದೆ 104, ಮೊಮಿನುಲ್‌ ಹಕ್‌ 40, ಮುಶ್ಫಿಕರ್‌ ರಹಿಂ ಔಟಾಗದೆ 43; ನ್ಯೂಜಿಲ್ಯಾಂಡ್‌ 317 (ಕೇನ್‌ ವಿಲಿಯಮ್ಸನ್‌ 104, ಡ್ಯಾರಿಲ್‌ ಮಿಚೆಲ್‌ 41, ಗ್ಲೆನ್‌ ಫಿಲಿಪ್‌ 42, ತೈಜುಲ್‌ ಇಸ್ಲಾಮ್‌ 109ಕ್ಕೆ 4, ಮೊಮಿನುಲ್‌ ಹಕ್‌ 4ಕ್ಕೆ 3).

Advertisement
Advertisement

Udayavani is now on Telegram. Click here to join our channel and stay updated with the latest news.

Next