Advertisement

ಜಿಂಬಾಬ್ವೆ, ವಿಂಡೀಸ್‌ ಸರಣಿಗೆ ಬಾಂಗ್ಲಾ ಆತಿಥ್ಯ

06:30 AM Jul 27, 2018 | Team Udayavani |

ಢಾಕಾ: ಈ ವರ್ಷದ ಅಂತ್ಯದಲ್ಲಿ ಜಿಂಬಾಬ್ವೆ ಮತ್ತು ವೆಸ್ಟ್‌ಇಂಡೀಸ್‌ ವಿರುದ್ಧದ ಸರಣಿಗೆ ಬಾಂಗ್ಲಾದೇಶ ಆತಿಥ್ಯ ವಹಿಸಲಿದೆ ಎಂದು ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Advertisement

ಜಿಂಬಾಬ್ವೆ 2019ರ ಜನವರಿಯಲ್ಲಿ ಢಾಕಾಕ್ಕೆ ಆಗಮಿಸಬೇಕಿತ್ತು. ಆದರೆ ಮಹಾ ಚುನಾವಣೆಯ ಹಿನ್ನೆಲೆಯಲ್ಲಿ ಈ ಪ್ರವಾಸವನ್ನು ಅಕ್ಟೋಬರ್‌ಗೆ ಇಟ್ಟುಕೊಳ್ಳಲು ಕ್ರಿಕೆಟ್‌ ಮಂಡಳಿ ನಿರ್ಧರಿಸಿದೆ. 2012ರ ಬಳಿಕ ಇದೇ ಮೊದಲ ಬಾರಿ ಪೂರ್ಣಪ್ರಮಾಣದ ಪ್ರವಾಸಕ್ಕಾಗಿ ವೆಸ್ಟ್‌ಇಂಡೀಸ್‌ ತಂಡವು ನ. 15ರಂದು ಇಲ್ಲಿಗೆ ಆಗಮಿಸಲಿದೆ.

ವೆಸ್ಟ್‌ಇಂಡೀಸ್‌ ಮಾತ್ರವಲ್ಲದೇ ಅಕ್ಟೋಬರ್‌ನಲ್ಲಿ ಜಿಂಬಾಬ್ವೆ ಸರಣಿ ಕೂಡ ನಡೆಯುವುದನ್ನು ದೃಢಪಡಿಸುತ್ತಿದ್ದೇವೆ ಎಂದು ಬಿಸಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಜಾಮುದ್ದೀನ್‌ ಚೌಧರಿ ಹೇಳಿದ್ದಾರೆ.

ಜಿಂಬಾಬ್ವೆ ಎರಡು ಟೆಸ್ಟ್‌ ಮತ್ತು ಮೂರು ಏಕದಿನ ಪಂದ್ಯಗಳನ್ನಾಡಲಿದೆ. ಹೀಗಾಗಿ ನಾವು ಬೆನ್ನುಬೆನ್ನಿಗೆ ಎರಡು ಸರಣಿಯನ್ನು ಆಯೋಜಿಸಲಿದ್ದೇವೆ ಎಂದವರು ತಿಳಿಸಿದರು.ನವೆಂಬರ್‌ ಮತ್ತು ಡಿಸೆಂಬರ್‌ ನಡುವೆ ವೆಸ್ಟ್‌ಇಂಡೀಸ್‌ ಬಾಂಗ್ಲಾ ಪ್ರವಾಸಗೈಯಲಿದ್ದು ಎರಡು ಟೆಸ್ಟ್‌, ಮೂರು ಏಕದಿನ ಮತ್ತು ಮೂರು ಟ್ವೆಂಟಿ20 ಪಂದ್ಯಗಳನ್ನಾಡಲಿದೆ. ಜಿಂಬಾಬ್ವೆ ಪ್ರವಾಸದ ವೇಳಾಪಟ್ಟಿ ಇನ್ನೂ ನಿರ್ಧಾರವಾಗಬೇಕಾಗಿದೆ.

ವೆಸ್ಟ್‌ಇಂಡಿಸ್‌ ಪ್ರವಾಸದ ವೇಳಾಪಟ್ಟಿ ಹೀಗಿದೆ.
ನ. 18-19: ಚಿತ್ತಗಾಂಗ್‌ನಲ್ಲಿ ದ್ವಿದಿನ ಅಭ್ಯಾಸ ಪಂದ್ಯ
ನ. 22-26 ಚಿತ್ತಗಾಂಗ್‌ನಲ್ಲಿ ಮೊದಲ ಟೆಸ್ಟ್‌
ನ.30-ಡಿ. 4 ಢಾಕಾದಲ್ಲಿ ದ್ವಿತೀಯ ಟೆಸ್ಟ್‌
ಡಿ. 6 ಢಾಕಾದಲ್ಲಿ ಏಕದಿನ ಅಭ್ಯಾಸ ಪಂದ್ಯ
ಡಿ. 9 ಢಾಕಾದಲ್ಲಿ ಮೊದಲ ಏಕದಿನ
ಡಿ. 11 ಢಾಕಾದಲ್ಲಿ ದ್ವಿತೀಯ ಏಕದಿನ
ಡಿ. 14 ಸಿಲೆಟ್‌ನಲ್ಲಿ ಮೂರನೇ ಏಕದಿನ
ಡಿ. 17 ಸಿಲೆಟ್‌ನಲ್ಲಿ ಮೊದಲ ಟ್ವೆಂಟಿ20
ಡಿ. 20 ಢಾಕಾದಲ್ಲಿ ದ್ವಿತೀಯ ಟ್ವೆಂಟಿ20
ಡಿ. 22 ಢಾಕಾದಲ್ಲಿ ಮೂರನೇ ಟ್ವೆಂಟಿ20

Advertisement
Advertisement

Udayavani is now on Telegram. Click here to join our channel and stay updated with the latest news.

Next