Advertisement
ಭಾರತ-ಬಾಂಗ್ಲಾ ಸಂಬಂಧಪಾಕಿಸ್ಥಾನದ ಕಪಿಮುಷ್ಟಿಯಿಂದ ಪಾರಾಗಿ ಬಾಂಗ್ಲಾದೇಶ ಉದಯವಾಗುವಲ್ಲಿ ಭಾರತದ ಪಾತ್ರ ಹಿರಿದು. ಹೀಗಾಗಿ ಆ ರಾಷ್ಟ್ರದೊಂದಿಗೆ ಭಾರತದ ಸೌಹಾರ್ದ 5 ದಶಕಗಳಿಂದ ಉತ್ತಮ ವಾಗಿಯೇ ಇದೆ. ಆದರೂ ಬಾಂಗ್ಲಾದಲ್ಲಿ ಹೆಚ್ಚಿದ ಇಸ್ಲಾಮಿಕ್ ಮೂಲಭೂತವಾದಿಗಳ ಹೆಚ್ಚಳ, ಪರಿಣಾಮವಾಗಿ ಅಲ್ಲಿನ ಹಿಂದೂ ಪ್ರಜೆಗಳ ಮೇಲೆ ನಡೆದ ದೌರ್ಜನ್ಯಗಳು ಹಾಗೂ ಅಕ್ರಮ ವಲಸಿಗರ ಸಮಸ್ಯೆ ಭಾರತದ ಕೆಂಗಣ್ಣಿಗೆ ಗುರಿಯಾಗುತ್ತಲೇ ಬಂದಿದೆ.
ಪ್ರಯತ್ನ ಭರದಿಂದ ಸಾಗಿದ್ದು, ವ್ಯಾಪಾರ ವಹಿವಾಟು ವೃದ್ಧಿಸುವ ನಿಟ್ಟಿನಲ್ಲೂ ಬಹಳ ಕೆಲಸಗಳಾಗುತ್ತಿವೆ. ಇನ್ನು ಭಾರತ ಕೋವಿಡ್‌ನ ಈ ಸಂಕಷ್ಟದ ಕಾಲದಲ್ಲಿ ಬಾಂಗ್ಲಾದೇಶಕ್ಕೆ ಲಸಿಕೆಗಳನ್ನು ಕಳುಹಿಸುವ ಮೂಲಕವೂ ಹಿರಿತನ ಮೆರೆದಿದೆ. 1971ರ ಯುದ್ಧದ 50ನೇ ವರ್ಷಾಚರಣೆಯ ಸಂದರ್ಭದಲ್ಲಿ ಶೇಖ್ ಹಸೀನಾ ಭಾರತೀಯರನ್ನು, ಭಾರತೀಯ ಯೋಧರಿಗೆ ನಮಿಸಿದ ರೀತಿಯೂ ಎರಡೂ ದೇಶಗಳ ನಡುವಿನ ಸಂಬಂಧ ಮುಂದಿನ ದಿನಗಳಲ್ಲಿ ಮತ್ತಷ್ಟು ಸುಧಾರಿಸಲಿದೆ ಎನ್ನುವುದಕ್ಕೆ ದ್ಯೋತಕವಾಗಿತ್ತು. ಬಾಂಗ್ಲಾದ ಆರ್ಥಿಕ ಬೆಳವಣಿಗೆ
ಬಾಂಗ್ಲಾದೇಶದ ಆರ್ಥಿಕ ಬೆಳವಣಿಗೆ ಇಡೀ ದಕ್ಷಿಣ ಏಷ್ಯನ್ ರಾಷ್ಟ್ರಗಳಿಗೆ ಪ್ರೇರಣಾದಾಯಕ. 1972ರಲ್ಲಿ ಜಗತ್ತಿನ ಅತ್ಯಂತ ಬಡ ರಾಷ್ಟ್ರಗಳಲ್ಲಿ ಒಂದಾಗಿದ್ದ ಬಾಂಗ್ಲಾದೇಶ, ಈ ದಶಕದ ಅಂತ್ಯದೊಳಗೆ ಜಗತ್ತಿನ ಪ್ರಮುಖ 25 ಆರ್ಥಿಕತೆಗಳಲ್ಲಿ ಜಾಗ ಪಡೆಯುವ ರೇಸ್‌ನಲ್ಲಿದೆ. ಅತ್ತ ಬಾಂಗ್ಲಾದೇಶ ಆರ್ಥಿಕವಾಗಿ ಸದೃಢವಾಗುತ್ತಾ ಹೋಗುತ್ತಿದ್ದಂತೆಯೇ, ಭಾರತ ದೊಂದಿಗಿನ ಅದರ ವ್ಯಾಪಾರ ಸಂಬಂಧವೂ ವೃದ್ಧಿಸುತ್ತಲೇ ಬಂದಿದೆ.
Related Articles
Advertisement
ಆರ್ಥಿಕತೆಯ ದ್ವಾರಗಳುಇತ್ತೀಚೆಗೆ ವಿಶ್ವಬ್ಯಾಂಕ್ ಪ್ರಕಟಿಸಿದ ವರದಿಯು ಹೇಗೆ ಬಾಂಗ್ಲಾದೇಶ- ಭಾರತದ ನಡುವಿನ ಸಂಚಾರ ವ್ಯವಸ್ಥೆ ಸುಗಮವಾದರೆ ಆರ್ಥಿಕ ಅವಕಾಶಗಳ ದ್ವಾರಗಳು ತೆರೆದುಕೊಳ್ಳಲಿವೆ ಎನ್ನುವ ಬಗ್ಗೆ ಬೆಳಕು ಚೆಲ್ಲುತ್ತದೆ. “”ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಾರಿಗೆ ಸಂಪರ್ಕ ವ್ಯವಸ್ಥೆ ಸರಾಗಗೊಂಡರೆ, ಬಾಂಗ್ಲಾದೇಶಿಯರ ವಾರ್ಷಿಕ ಆದಾಯ ದಲ್ಲಿ 17 ಪ್ರತಿಶತ ಹೆಚ್ಚಳವಾಗುವ ಸಾಧ್ಯತೆ ಯಿದೆ. ಅಲ್ಲದೇ ಇದರಿಂದಾಗಿ ಭಾರತದ ಈಶಾನ್ಯ ರಾಜ್ಯಗಳೂ ಆರ್ಥಿಕವಾಗಿ ಸದೃಢವಾಗಲಿವೆ’ ಎನ್ನುತ್ತದೆ ವರದಿ. ಈ ಕಾರಣಕ್ಕಾಗಿ ಕೆಲವು ವರ್ಷಗಳಿಂದ ಮೋದಿ-ಹಸೀನಾ ಸರಕಾರ ಮೂಲಸೌಕರ್ಯ ಸಂಪರ್ಕ ಯೋಜ ನೆಗಳತ್ತ ಧ್ಯಾನ ಹರಿಸಿವೆ. ಜಲ, ರೈಲ್ವೇ ಸಂಪರ್ಕ ಮರುಸ್ಥಾಪಿಸುವ ಕೆಲಸಗಳ ಹಿಂದೆಯೂ ಈ ಉದ್ದೇಶವೇ ಇದೆ. ಯಾರು ಶೇಖ್ ಮುಜಿಬುರ್ ರೆಹಮಾನ್?
ಬಾಂಗ್ಲಾದೇಶದ ಸಂಸ್ಥಾಪಕ, ಬಾಂಗಾಬಂಧು ಎಂದೇ ಆದರಕ್ಕೆ ಪಾತ್ರರಾಗಿರುವ ದಿ| ಶೇಖ್ ಮುಜಿಬುರ್ ರೆಹಮಾನ್ ಅಂದಿನ ಪೂರ್ವ ಪಾಕಿಸ್ಥಾನ(ಇಂದಿನ ಬಾಂಗ್ಲಾದೇಶ)ವನ್ನು ಪಾಕಿಸ್ಥಾನಿ ಸೇನೆಯ ಕಪಿಮುಷ್ಟಿಯಿಂದ ಬಿಡುಗಡೆಗೊಳಿಸಲು ಹೋರಾಡಿ, ಬಾಂಗ್ಲಾದೇಶದ ಉಗಮಕ್ಕೆ ಕಾರಣರಾದವರು. ರೆಹಮಾನ್, ರಾಜಕೀಯಕ್ಕೂ ಸೇರುವ ಮುನ್ನ ಭಾರತದ ಸ್ವಾತಂತ್ರ್ಯಕ್ಕಾಗಿಯೂ ಹೋರಾಡಿದವರು. 1949ರಲ್ಲಿ ಅವರು ಪೂರ್ವ ಪಾಕಿಸ್ಥಾನಕ್ಕೆ ಹೆಚ್ಚಿನ ಸ್ವಾಯತ್ತತೆಗೆ ಆಗ್ರಹಿಸುತ್ತಿದ್ದ ಆವಾಮಿ ಲೀಗ್ ಸೇರಿದರು. ಮುಂದೆ 1970ರಲ್ಲಿ ಪಶ್ಚಿಮ ಪಾಕಿಸ್ಥಾನದಲ್ಲಿನ (ಈಗಿನ ಪಾಕ್) ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿದ ಅವರ ಪಕ್ಷ ಪಾಕಿಸ್ಥಾನದ ಎಲ್ಲ ಪಕ್ಷಗಳಿಗಿಂತಲೂ ಹೆಚ್ಚು ಮತ ಪಡೆಯಿತು. ಆದರೆ ಈ ಫಲಿತಾಂಶವನ್ನು ಪಾಕಿಸ್ಥಾನ ಮಾನ್ಯ ಮಾಡಲಿಲ್ಲ. ಇದು ನಾಗರಿಕ ಯುದ್ಧಕ್ಕೂ ಕಾರಣವಾಯಿತು. ಶೇಖ್ ಮುಜಿಬುರ್ ಮಾರ್ಚ್ 26, 1971ರಂದು ಬಾಂಗ್ಲಾದೇಶವನ್ನು ಸ್ವತಂತ್ರ ರಾಷ್ಟ್ರ ಎಂದು ಘೋಷಿಸಿದರು. ಕೂಡಲೇ ಪಾಕಿಸ್ಥಾನಿ ಸೇನೆಯು ಮುಜಿಬುರ್‌ರನ್ನು ಕಾರಾಗೃಹ ವಾಸದಲ್ಲಿಟ್ಟಿತು. ಇನ್ನೊಂದೆಡೆ ಪಾಕಿಸ್ಥಾನಿ ಸೇನೆ ಪೂರ್ವ ಪಾಕಿಸ್ಥಾನಿ ಯರನ್ನು ನಿರ್ದಯವಾಗಿ ಕೊಲ್ಲಲಾರಂಭಿಸಿತು. ಪಾಕಿಸ್ಥಾನಿ ಸೇನೆಯು ಪೂರ್ವ ಪಾಕಿಸ್ಥಾನದಲ್ಲಿ 3ರಿಂದ 20 ಲಕ್ಷ ಜನರನ್ನು ಕೊಂದದ್ದಷ್ಟೇ ಅಲ್ಲದೇ, 4 ಲಕ್ಷ ಹೆಣ್ಣು ಮಕ್ಕಳ (ಬಹುತೇಕ ಹಿಂದೂಗಳು) ಅತ್ಯಾಚಾರವೆಸಗಿತು. ಮುಜಿಬುರ್‌ರ ಅನುಪಸ್ಥಿತಿ ಯಲ್ಲೇ ಬೆಂಗಾಲಿಗಳು ಮುಕ್ತಿ ವಾಹಿನಿಯನ್ನು ರಚಿಸಿ, ಭಾರತ ಸೇನೆಯ ಸಹಾಯದಿಂದ ಪಾಕಿಸ್ಥಾನಿ ಸೇನೆಯನ್ನು ಸೋಲಿಸಿದರು. ಸ್ವತಂತ್ರ ಬಾಂಗ್ಲಾದೇಶ ಉದಯವಾಯಿತು. ಅತ್ತ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದ ಪಾಕಿಸ್ಥಾನ ಜನವರಿ 1972ರಂದು ರೆಹಮಾನ್‌ರನ್ನು ಬಿಡುಗಡೆ ಮಾಡಿತು. ಅವರು ಬಾಂಗ್ಲಾದೇಶಕ್ಕೆ ಹಿಂದಿರುಗಿ ಮೂರು ವರ್ಷಗಳವರೆಗೆ ಆ ರಾಷ್ಟ್ರದ ಪ್ರಧಾನಿಯಾಗಿದ್ದರು. ಆದರೆ 1975ರ ಆಗಸ್ಟ್ 15ರಂದು ಸೇನಾಧಿಕಾರಿಗಳ ಗುಂಪೊಂದು ಮುಜಿಬುರ್ ರೆಹಮಾನ್, ಅವರ ಪತ್ನಿ ಮತ್ತು ಮೂವರು ಗಂಡುಮಕ್ಕಳನ್ನು(10 ವರ್ಷದ ಮಗು ಸೇರಿ) ಕೊಂದುಹಾಕಿತು. ಅವರ ಮಕ್ಕಳಾದ ಈಗಿನ ಪ್ರಧಾನಿ ಶೇಖ್ ಹಸೀನಾ ಮತ್ತು ಶೇಖ್ ರೆಹಾನಾ ಆಗ ವಿದೇಶದಲ್ಲಿದ್ದ ಕಾರಣ ಬದುಕುಳಿದರು. 2010ರಲ್ಲಿ ಬಾಂಗ್ಲಾ ಸರಕಾರ ಬಂಧನದಲ್ಲೇ ಇದ್ದ ಮುಜಿಬುರ್ ಹಂತಕರನ್ನು ಗಲ್ಲಿಗೇರಿಸಿತು.