Advertisement

ಬಾಂಗ್ಲಾ ಅಂತಾರಾಷ್ಟ್ರೀಯ ವಿಮಾನಯಾನ ಹಾರಾಟ ಶುರು

01:33 PM Jun 22, 2020 | sudhir |

ಢಾಕಾ: ಮೂರು ತಿಂಗಳ ಬಳಿಕ ಬಾಂಗ್ಲಾದೇಶದ ಸಾರ್ವಜನಿಕ ಸ್ವಾಮ್ಯದ ವಿಮಾನಯಾನ ಕಂಪೆನಿ ಬಿಮನ್‌ ಬಾಂಗ್ಲಾದೇಶ್‌ ಏರ್‌ಲೈನ್ಸ್‌ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ವಿಮಾನಯಾನ ಆರಂಭಿಸಿದೆ.

Advertisement

ಕೋವಿಡ್‌ ಹಿನ್ನೆಲೆಯಲ್ಲಿ ಎಲ್ಲ ಅಂತಾರಾಷ್ಟ್ರೀಯ ವಿಮಾನಗಳ ಯಾನವನ್ನು ರದ್ದುಪಡಿಸಲಾಗಿತ್ತು. ರವಿವಾರ ಸಂಜೆ ಹೊತ್ತಿಗೆ ಬಿಜಿ001 787-8 ಡ್ರೀಮ್‌ಲೈನರ್‌ ವಿಮಾನ 187 ಪ್ರಯಾಣಿಕರೊಂದಿಗೆ ಲಂಡನ್‌ಗೆ ಪ್ರಯಾಣ ಬೆಳೆಸಿದೆ.

ಲಂಡನ್‌ಗೆ ತೆರಳಿದ ಯಾವುದೇ ಪ್ರಯಾಣಿಕರಿಗೆ ಕೋವಿಡ್‌ ಕುರಿತ ಪ್ರಮಾಣ ಪತ್ರ ಕಡ್ಡಾಯವಾಗಿಲ್ಲ. ಆದರೆ ಅವರು ಅಂತಾರಾಷ್ಟ್ರೀಯ ವಿಮಾನಯಾನ ಒಕ್ಕೂಟದ ಪ್ರಕಾರ, ಸ್ವಯಂಘೋಷಣಾ ಪತ್ರವೊಂದಕ್ಕೆ ಸಹಿ ಹಾಕಬೇಕಿರುತ್ತದೆ. ರವಿವಾರ ಮಾತ್ರ ಢಾಕಾದಿಂದ ವಿಮಾನ ಹಾರಾಟ ನಡೆಸಲಿದೆ. ಪ್ರಯಾಣಿಕರಿಗೆ ಮಾಸ್ಕ್, ಸ್ಯಾನಿಟೈಸರ್‌, ಆಹಾರ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next